ಕೋಲಾರ

ರಸ್ತೆಯಲ್ಲೇ ಸಂತೆ; ಸಂಚಾರಕ್ಕೆ ಕಿರಿಕಿರಿ

Published On :

ಕ.ಪ್ರ.ವಾರ್ತೆ ಮಾಲೂರು ಆ.28
ಪಟ್ಟಣದ ಪ್ರಮುಖ ಬೀದಿಗಳಲ್ಲಿ  ಸಂಚಾರಕ್ಕೆ ತೊಂದರೆಯಾಗುವ ರೀತಿಯಲ್ಲಿ ನಡೆಯುತ್ತಿರುವ  ಭಾನುವಾರದ ಸಂತೆಯನ್ನು ಅನಾದಿ ಕಾಲದಿಂದ ನಡೆದು ಬರುತ್ತಿರುವ ಹಾಗೆ ಗುರುವಾರ ನಡೆಸುವ ಹಾಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ ವೇದಿಕೆಯ ಕಾರ್ಯಕರ್ತರು ಬುಧವಾರ ಇಲ್ಲಿನ ಪುರಸಭೆ ಮುಂಭಾಗ ಧರಣಿ ನಡೆಸಿದರು.
 ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ನಾರಾಯಣ ಗೌಡ ಅನಾದಿ ಕಾಲದಿಂದಲ್ಲೂ ಕೋಲಾರ ರಸ್ತೆಯಲ್ಲಿ ಪ್ರತಿ ಗುರುವಾರ ಸಂತೆ ನಡೆಯುತ್ತಿದ್ದರೂ, ಪಟ್ಟಣದ ಪ್ರಮುಖ ರಸ್ತೆಗಳ ಮಧ್ಯೆ ಭಾಗದಲ್ಲಿ ಭಾನುವಾರ ಸಂತೆ ನಡೆಯುತ್ತಿದ್ದು, ಈ ಬಗ್ಗೆ ಪುರಸಭೆ ನಿರ್ಲಕ್ಷ್ಯ ವಹಿಸುತ್ತಿದೆ. ಸತ್ತ ಹಾಗೂ ಕೊಳೆತ ಮೀನು-ಒಣ ಮೀನುಗಳ ಮಾರಾಟ ಹಾಗೂ ಸಂತೇ ನಂತರ ತ್ಯಾಜ್ಯಗಳಿಂದ ರೋಗ-ರುಜಿನ ಹರುಡುತ್ತಿದ್ದು, ಪಟ್ಟಣದೊಳಗಿನ ವಾಹನ ಸಂಚಾರ ದುಸ್ಸಾಧ್ಯವಾಗಿದೆ. ಭಾನುವಾರ ರಸ್ತೆ ಬದಿ ಅಂಗಡಿಗಳು ರಸ್ತೆಗಳಲ್ಲಿ ಆಕ್ರಮಿಸುವುದರಿಂದ ಸಾರ್ವಜನಿಕರು ಓಡಾಡಲು ಕಷ್ಟವಾಗುತ್ತಿದೆ. ಈ ಬಗ್ಗೆ ಪುರಸಭೆ ಆಡಳಿತ ನಿರ್ವಹಣಾಧಿಕಾರಿಗಳ ಗಮನದಲ್ಲಿದ್ದರೂಯಾವ ಕ್ರಮ ಕೈಗೊಳ್ಳದೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಭಾನುವಾರ ಸಂತೆಯನ್ನು ಎತ್ತಂಗಡಿ ಮಾಡಿ ಪರ್ಯಾಯ ಸ್ಥಳವನ್ನು ಕಲ್ಪಿಸಿ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಮುಕ್ತ  ಸಂಚಾರದ ವ್ಯವಸ್ಥೆ ಮಾಡದಿದ್ದರೆ ಸಂಘಟನೆಯು ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಕಾರ್ಯದರ್ಶಿ ಧನರಾಜ್, ಸುರೇಶ್ ಕುಮಾರ್, ಬಿ.ಎ. ರಾಜಪ್ಪ, ಶಿವುಕುಮಾರ್, ಗೋಪಾಲಪ್ಪ, ಶಶಿಕುಮಾರ್,ಅಶೋಕ್, ವೆಂಕಟೇಶ್, ಕೋದಂಡ ಇದ್ದರು.

ಅಕ್ರಮ ದಾಸ್ತಾನು ಮಾಡಿದ್ದ ಕೀಟನಾಶಕ ವಶ
ಕೋಲಾರ: ನಗರದ ಭವಾನಿ ಸಿನಿಮಾ ಟ್ಯಾಕಿಸ್ ಬಳಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಕೀಟ ನಾಶಕಗಳನ್ನು ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಪತ್ತೆ ಮಾಡಿ ಕೃಷಿ ಇಲಾಖೆಯ ಅಧಿಕಾರಿಗಳ ವಶಕ್ಕೆ  ಒಪ್ಪಿಸಿದ್ದಾರೆ.
ಗೋವಿಂದಸ್ವಾಮಿ ಮತ್ತು ಕುಪ್ಪಳ್ಳಿ ಹುಲಾಚೆಗೌಡ ಎಂಬುವರಿಗೆ ಸೇರಿದ ಅಂಗಡಿಗಳಿಗೆ ಕೃಷಿ ಇಲಾಖೆಯಿಂದ ಪಡೆದಿರಬೇಕಾದ ಪರವಾನಿಗೆ ಅಥವಾ ದೃಢೀಕರಣ ಪ್ರಮಾಣ ಪತ್ರ ಇಲ್ಲದೆ ಕೀಟನಾಶಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ತಿಳಿದ ರೈತ ಮುಖಂಡರು ಬುಧವಾರ ಕೃಷಿ ಅಧಿಕಾರಿಗಳೊಂದಿಗೆ ತೆರಳಿ ಅಕ್ರಮ ದಾಸ್ತಾನು ಕೀಟನಾಶಕಗಳನ್ನು ಕೃಷಿ ಅಧಿಕಾರಿಗಳ ವಶಕ್ಕೆ ಒಪ್ಪಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ನಕಲಿ ಕೀಟ ನಾಶಕಗಳಿಗೆ ಬಿಲ್ ನೀಡುತ್ತಿಲ್ಲ, ರೈತರು ಎಷ್ಟೇ ಔಷಧಿ ಖರೀದಿ ಮಾಡಿ ಬೆಳೆಗಳಿಗೆ ಸಿಂಪಡಣೆ ಮಾಡುತ್ತಿದ್ದರೂ ಬೆಳಗಳ ನಿಯಂತ್ರಣವಾಗುವುದಿಲ್ಲ, ಕೀಟನಾಶಕ ಮಾರಾಟಗಾರರು ರೈತರ ಹೊಟ್ಟೆ ಮೇಲೆ ಬರೆ ಎಳೆಯುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಿಕ್ಕಣ್ಣಯ್ಯ, ತಾಲೂಕು ಕೃಷಿ ಅಧಿಕಾರಿ ಗಾಯಿತ್ರಿ ಅವರುಗಳು ವಶಪಡಿಸಿಕೊಂಡಿರುವ ಕೀಟನಾಶಕಗಳನ್ನು ಪ್ರಯೋಗಲಾಯಕ್ಕೆ ಕಳುಹಿಸುತ್ತೇವೆ. ಜತೆಗೆ ಕೃಷಿ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸುವುದಾಗಿ ಹೇಹಳಿದರು.
ಕಾರ್ಯಾಚರಣೆಯಲ್ಲಿ ರೈತ ಸಂಘದ ಮುಖಂಡರಾದ ನಾರಾಯಣಗೌಡ, ಜಿಲ್ಲಾ ಸಂಚಾಲಕ ಕೆ. ಶ್ರೀನಿವಾಸಗೌಡ, ನೀಲಕಂಠಪುರ ಮುನೇಗೌಡ, ಕೆಂಬೋಡಿ ನಾರಾಯಣ ಸ್ವಾಮಿ, ಹೂಹಳ್ಳಿ ನಾಗರಾಜ್, ಮೂರಾಂಡಹಳ್ಳಿ ಶಿವಾರೆಡ್‌ಡಿ, ಗೊಟ್ಟಿಕುಂಟೆ ಕೃಷ್ಣ, ಈಕಂಬಳ್ಳಿ ಮಂಜುನಾಥ್, ರಂಜಿತ್ ಕುಮಾರ್, ನರಸಾಪುರ ಪುರುಷೋತಮ್, ರಾಜೇಶ್, ತೆರನಹಳ್ಳಿ ಭಕ್ತನ್, ಕೆಂಬೋಡಿ ಕೃಷ್ಣೇಗೌಡ, ರಂಜಿತ್ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.