ವರದಕ್ಷಿಣೆಗಾಗಿ ಕಿರುಕುಳ: ಪತ್ನಿ ನೇಣಿಗೆ ಹಾಕಿದ ಪತಿ
ಕೆಜಿಎಫ್: ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ ಪತಿ ತನ್ನ ಪತ್ನಿಯನ್ನು ನೇಣು ಹಾಕಿ ಕೊಲೆ ಮಾಡಿರುವ ಘಟನೆ ಬೆಮೆಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರಿನ ರಾಘವೇಂದ್ರನಗರ ಟಿ. ದಾಸರಹಳ್ಳಿ ನಿವಾಸಿ ಸಜಿದಾ ಅವರ ಮಗಳಾದ ಸಮೀರಾ(21) ನೇಣು ಹಾಕಿ ಕೊಲೆಯಾದ ದುರ್ದೈವಿ. ಚಾಂಪಿಯನ್ರೀಫ್ ಪೊಲೀಸ್ ಠಾಣಾ ವ್ಯಾಪ್ತಿಯ ಡಿಎಆರ್ ಪೊಲೀಸ್ ಕಾಲೋನಿಯ ನಿವಾಸಿ ಅಮೀರ್ಜಾನ್ ಅವರ ಮಗನಾದ ಮೊಹ್ಮದ್ ಸಕ್ಲೇನ್ ಅಲಿಯಾಸ್ ಅಸ್ಲಂ ಎಂಬುವರಿಗೆ ಕಳೆದ 3 ವರ್ಷಗಳ ಹಿಂದೆ ಸಮೀರಾಳನ್ನು ಕೊಟ್ಟು ಮದುವೆ ಮಾಡಲಾಗಿತ್ತು. ಮದುವೆಯ ಸಮಯದಲ್ಲಿ 50 ಗ್ರಾಂ ಚಿನ್ನದ ಒಡವೆಗಳು ನಗದು ಸೇರಿದಂತೆ ಇತರೇ ವಸ್ತುಗಳನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು ಎಂದು ತಿಳಿಸಲಾಗಿದೆ.
ದಂಪತಿಗಳಿಬ್ಬರು ಬೆಮೆಲ್ನಗರ ವ್ಯಾಪ್ತಿಯ ವಿಜಯನಗರದಲ್ಲಿ ವಾಸವಾಗಿದ್ದು, ಮದುವೆಯಾದ ಕೆಲದಿನಗಳಲ್ಲಿ ಮೊಹ್ಮದ್ ಸಕ್ಲೇನ್ ಅಲಿಯಾಸ್ ಅಸ್ಲಂಗೆ ಈಗಾಗಲೇ ಮದುವೆಯಾಗಿರುವುದಾಗಿ ತಿಳಿದು ಬಂದಿದ್ದು ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ನಿನ್ನುನ್ನು ಸಾಯಿಸಿಬಿಡುವುದಾಗಿ ಬೆದರಿಕೆ ಹಾಕಿದ್ದರಿಂದ ಮೃತ ಸಮೀರಾ ಸುಮ್ಮನಿದ್ದಳು. ಈ ವಿಷಯವಾಗಿ ಗಂಡ ಹೆಂಡತಿಗೆ ಆಗಾಗ ಜಗಳವಾಗುತ್ತಿದ್ದು ಅಸ್ಲಂ ಸಮೀರಾಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದನು. ಅಲ್ಲದೆ ತವರು ಮನೆಯಿಂದ ಹೆಚ್ಚಿನ ವರದಕ್ಷಿಣೆಯಾಗಿ ಚಿನ್ನ ಮತ್ತು ಹಣವನ್ನು ತರುವಂತೆ ಅಸ್ಲಂ ಹಾಗೂ ಅವರ ಕುಟುಂಬಸ್ಥರು ಪೀಡಿಸುತ್ತಿದ್ದರು ಎಂದು ಹೇಳಲಾಗಿದೆ.
ಸಮೀರಾಳನ್ನು ಹಾಗೂ ಆಕೆಯ ಮಗುವನ್ನು ಸಾಯಿಸಿಬಿಡುವುದಾಗಿ ಹಲವು ಬಾರಿ ಪ್ರಯತ್ನವನ್ನು ಸಹ ಮಾಡಿ ಮೂರನೇ ಮದುವೆಯಾಗುವುದಾಗಿ ಬೆದರಿಕೆ ಹಾಕುತ್ತಿದ್ದನು ಎಂದು ತಿಳಿಸಲಾಗಿದೆ. ಕಳೆದ ಬುಧವಾರ ರಾತ್ರಿ ಮೊಹ್ಮದ್ ಸಕ್ಲೇನ್ ಅಲಿಯಾಸ್ ಅಸ್ಲಂ ಮನೆಗೆ ಬಂದು ಸಮೀರಾಳ ಬಳಿ ವಿನಾಕಾರಣ ಜಗಳ ಕಾದು ಹಲ್ಲೆ ನಡೆಸಿ ತಮ್ಮ ಮನೆಯಲ್ಲಿ ಸಮೀರಾಳನ್ನು ನೇಣು ಹಾಕಿ ಕೋಲೆ ಮಾಡಿದ್ದಾನೆ ಎಂದು ಮೃತ ಸಮೀರಾಳ ತಾಯಿ ಸಾಜಿದಾ ಬೆಮೆಲ್ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ವರದಕ್ಷಿಣೆ ಕಿರುಕುಳ ಹಾಗೂ ಕೆಲೆ ಪ್ರಕರಣ ದೂರು ದಾಖಲಿಸಿಕೊಂಡಿರುವ ಬೆಮೆಲ್ನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಕೆಜಿಎಫ್ನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತ ದೇಹವನ್ನು ಪೋಷಕರಿಗೆ ಒಪ್ಪಿಸಲಾಯಿತು. ಸ್ಥಳಕ್ಕೆ ಬಂಗಾರಪೇಟೆ ತಹಸೀಲ್ದಾರ್ ಉಷಾ, ತಾಲೂಕು ಕಾರ್ಯನಿರ್ವಹನಾಧಿಕಾರಿ ಜಗದೀಶ್ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

