ಅಂತೂ ತಾಪಂ ಮಳಿಗೆ ಬಾಡಿಗೆ ವಿವಾದಕ್ಕೆ ತೆರೆ
ಮಾಲೂರು: ಬಹು ವರ್ಷದಿಂದ ತಾಪಂ ವಾಣಿಜ್ಯ ಸಂಕೀರ್ಣ ಮಳಿಗೆ ಬಾಡಿಗೆ ವಿಷಯಕ್ಕೆ ಸಂಬಂಧಿಸಿದಂತೆ ಬಾಡಿಗೆದಾರ ಹಾಗೂ ತಾಪಂ ನಡುವೆ ನಡೆಯುತ್ತಿದ್ದ ತಿಕ್ಕಾಟಕ್ಕೆ ಶಾಸಕ ಮಂಜುನಾಥ್ಗೌಡ ಮಧ್ಯಸ್ಥಿಕೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಪರಿಹಾರ ಸೂತ್ರ ಕಂಡು ಹಿಡಿಯಲಾಯಿತು.
ಈ ಸಂಬಂಧ ಕರೆಯಲಾಗಿದ್ದ ಮಳಿಗೆ ಬಾಡಿಗೆದಾರರ ಹಾಗೂ ತಾಪಂ ಸದಸ್ಯರು ಪಾಲ್ಗೊಂಡಿದ್ದ ಸಭೆ ಉದ್ದೇಶಿಸಿ ಮಾತನಾಡಿದ ತಾಪಂ ಅಧ್ಯಕ್ಷ ಪುಟ್ಟಸ್ವಾಮಿ, ತಾಪಂ ಸಂಕೀರ್ಣದ ನೆಲಮಹಡಿಯಲ್ಲಿರುವ 14 ಅಂಗಡಿ ತಲಾ ಮಾಸಿಕ ಒಂದುವರೆ ಸಾವಿರ ರುಪಾಯಿ ಹಾಗೂ ಮೊದಲನೇ ಮಹಡಿಯಲ್ಲಿರುವ 13 ಮಳಿಗೆಗಳು ತಲಾ ಮಾಸಿಕ ಎಳುನೂರು ರಂತೆ ಹರಾಜಿನಲ್ಲಿ ಬಿಕರಿಯಾಗಿತ್ತು.
ಈ ನಿಟ್ಟಿನಲ್ಲಿ ತಾಪಂ ವಿಧಿಸಿದ್ದ ಷರಿತ್ತಿನಂತೆ ಪ್ರತಿ ಮೂರು ವರ್ಷಕ್ಕೂಮ್ಮೆ ಬಾಡಿಗೆಯನ್ನು ಶೇ.10 ರಷ್ಟು ಹೆಚ್ಚಿಸಬೇಕಾಗಿತ್ತು. ಆದರೆ. ಹಿಂದಿನ ತಾಪಂ ಆಡಳಿತ ನಿರ್ಲಕ್ಷದಿಂದಾಗಿ ಇಂದಿಗೂ 1,500 ಬಾಡಿಗೆ ನೀಡುತ್ತಿದ್ದಾರೆ.
ಮಾರುಕಟ್ಟೆಯಲ್ಲಿ 15-20 ಸಾವಿರ ಬಾಡಿಗೆ ನಡೆಯುತ್ತಿರುವಾಗ ಹದಿನೇಳು ವರ್ಷದ ಹಿಂದಿನ ಬಾಡಿಗೆ ನೀಡುತ್ತಿರುವುದರಿಂದ ತಾಪಂ ಗೆ ಬರಬೇಕಾಗಿದ್ದ ನೈಜ ವರಮಾನ ಕಡಿಮೆಯಾಗುತ್ತಿತ್ತು. ಈ ನಿಟ್ಟಿನಲ್ಲಿ ಬಾಡಿಗೆದಾರರೂಡನೆ ಹಲವು ಸಭೆ ನಡೆಸಿ ಮನವಿ ಮಾಡಲಾಗಿತ್ತು. ಆದರೆ ಅವರು ಒಪ್ಪದಿರುವುದರಿಂದ ಈ ಸಮಸ್ಯೆ ಉದ್ಬವಿಸಿದೆ ಎಂದ ಪುಟ್ಟಸ್ವಾಮಿ ಈ ಹಿಂದಿನ ಶಾಸಕ ಕೃಷ್ಣಯ್ಯ ಶೆಟ್ಟಿರ ಮಾರ್ಗದರ್ಶನದಂತೆ 2007 ರ ತನಕ ಹಳೇ ಬಾಡಿಗೆ ನಿಗದಿಗೊಳಿಸಿ ಅಲ್ಲಿಂದ ಇಲ್ಲಿಯವರೆಗೂ ಶೇ.10 ರಷ್ಟು ಹೆಚ್ಚಿಸಿ ಬಾಡಿಗೆ ನೀಡುವಂತೆ ಮಾಡಿದ್ದ ಮನವಿಗೆ ಬಾಡಿಗೆದಾರ ರು ಒಪ್ಪದ ಹಿನ್ನೆಲೆಯಲ್ಲಿ ಸಮಸ್ಯೆ ಮುಂದುವರೆದಿದೆ ಎಂದರು.
ಬಾಡಿಗೆದಾರರ ಪರವಾಗಿ ವೇಮನ, ರವಿ, ಮಂಜುನಾಥ್ಗೌಡ ಮಾತನಾಡಿ, ಪಂಚಾಯ್ತಿ ರವರ ಅಪೇಕ್ಷೆ ಬಾಡಿಗೆದಾರರಿಗೆ ಹೂರೆಯಾಗುತ್ತಿದ್ದು, ನಾವೂ ಬದುಕುವಂತಹ ರೀತಿಯಲ್ಲಿ ಬಾಡಿಗೆ ನಿಗದಿಗೊಳಿಸಿ ಮನವಿ ಮಾಡಿದರು. ಈ ವೇಳೆ ಶಾಸಕ ಮಂಜುನಾಥ್ಗೌಡ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ತಾಪಂ ಸದಸ್ಯರು, ಅಧಿಕಾರಿಗಳ ಹಾಗೂ ಬಾಡಿಗೆದಾರರ ನಡುವೆ ನಡೆದ ಚರ್ಚೆಯ ನಂತರ 2007 ರ ನಂತರ ಶೇ.10 ರಷ್ಟು ಬಾಡಿಗೆ ಹೆಚ್ಚಿಸುವ ಜತೆಯಲ್ಲಿ 2013 ರ ಆಗಸ್ಟ್ನಿಂದ ನೆಲಮಹಡಿಯಲ್ಲಿರುವ ಅಂಗಡಿಗಳಿಗೆ ತಲಾ ರು. 7000 ಹಾಗೂ ಮದಲ ಮಹಡಿಯಲ್ಲಿರುವ ಮಳಿಗೆ ಗಳಿಗೆ ತಲಾ ರು. 3500 ಬಾಡಿಗೆ ನಿಗದಿಗೊಳ್ಳಿಸಲಾಯಿತು. ಉಪಾಧ್ಯಕ್ಷೆ ರಾಜಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಪ್ಪ, ಮಾಜಿ ಅಧ್ಯಕ್ಷರಾದ ಗೋಪಾಲ್ ಗೌಡ, ಚಂದ್ರಪ್ಪ, ಲೋಕೇಶ್, ಮೂರ್ತಿ, ರಾಧಮ್ಮ, ಪಾರ್ವತಮ್ಮ, ಬಾಡಿಗೆದಾರರಾದ ವೇಮನ, ಮಂಜುನಾಥ್ಗೌಡ, ವಿಜಯ ಕುಮಾರ್, ರವಿ, ಶೇಖರ್,ಪಿ.ಎನ್.ದಾಸ್, ರವಿ ಕುಮಾರ್,ಅಕ್ರಂ, ವೆಂಕಟಸ್ವಾಮಿ, ಸೋಲಂಕಿ,ಶ್ರೀಕಾಂತ್, ಬಾಬು ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

