'ಸರ್ಕಾರಿ ಅಧಿಕಾರಿಗಳು ಜನ ಮೆಚ್ಚುವ ಕೆಲಸ ಮಾಡಲಿ'
ಮಾಲೂರು: ಸರ್ಕಾರಿ ಅಧಿಕಾರಿಗಳು ತಾವು ಇದ್ದ ಕಡೆ ಜನರ ಮನಸ್ಸಿನಲ್ಲಿ ಉಳಿಯುವಂತಹ ಉತ್ತಮ ಕಾರ್ಯಗಳನ್ನು ಮಾಡಬೇಕು ಎಂದು ನಗರಸಭೆ ನಿವೃತ್ತ ಆಯುಕ್ತ ಹಾಗೂ ಪ್ರಗತಿಪರ ರೈತ ಹನುಂಮತಪ್ಪ ಕಿವಿಮಾತು ಹೇಳಿದರು.
ಮಾಲೂರಿನಿಂದ ಆನೇಕಲ್ಗೆ ವರ್ಗಾವಣೆಗೊಂಡ ತಾಲೂಕು ಕೃಷಿ ಸಹಾಯಕ ನಿರ್ದೇಶಕ ರಂಗಸ್ವಾಮಿ ಅವರಿಗೆ ಪಟ್ಟಣದ ಕೃಷಿಕ ಸಮಾಜದಲ್ಲಿ ಕೃಷಿ ಇಲಾಖೆ, ಅತ್ಮ ಯೋಜನೆ ರೈತ ಸಂಘ ಗುರುವಾರ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾ ಡಿದರು.
ಸರ್ಕಾರಿ ಅಧಿಕಾರಿಗಳು ಸರ್ಕಾರಿ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ನೇರವಾಗಿ ವಿತರಿಸುವ ಜತೆಯಲ್ಲಿ, ಇಲಾಖೆಯಲ್ಲಿ ಸರ್ಕಾರದಿಂದ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳ ಸಮಗ್ರ ಮಾಹಿತಿ ಸಕಾಲದಲ್ಲಿ ಅರ್ಹ ಫಲಾನುಭವಿಗಳಿಗೆ ತಿಳಿಸುವ ಕೆಲಸ ಮಾಡಬೇಕು. ಹಣವು ಸಂಬಳದ ರೂಪದಲ್ಲಿ ಸರ್ಕಾರ ನೀಡುತ್ತದೆ. ಆದರೆ ಹೆಸರು ಮಾಡಬೇಕಾದರೆ ಕರ್ತವ್ಯದಲ್ಲಿ ಪ್ರಾಮಾಣಿಕತೆ ಮುಖ್ಯವಾಗಲಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೃಷಿ ಸಹಾಯಕ ನಿರ್ದೇಶಕ ರಂಗಸ್ವಾಮಿ, ನೀರಿಲ್ಲದ ಈ ಪ್ರದೇಶದಲ್ಲಿನ ರೈತರು ಕಷ್ಟ ಜೀವಿಗಳಾಗಿದ್ದು, ಸಿಗುವ ಅಲ್ಪ ನೀರಿನಲ್ಲಿ ಪ್ರಗತಿ ತೋರಿಸುತ್ತಿದ್ದಾರೆ. ಕೃಷಿಯಲ್ಲಿ ಕೌಶಲ್ಯ ಹೊಂದಿರುವ ಇಲ್ಲಿನ ರೈತರ ಜತೆಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ ತೃಪ್ತಿ ಇದೆ ಎಂದರು. ರೈತ ಮುಖಂಡರಾದ ಬಚ್ಚೇಗೌಡ, ಕೋಟಿಗಾನಹಳ್ಳಿ ಗಣೇಶ್, ಮಾಲೂರು ಅಶ್ವಥ್ ರೆಡ್ಡಿ, ಕೋಡೂರು ಗೋಪಾಲ್, ಗುಡ್ನಹಳ್ಳಿ ವೆಂಕಟೇಶ್, ಕಾಟೇರಿ ಮರಿಸ್ವಾಮಿ ಮಾತನಾಡಿದರು.
ತಾಲೂಕಿನ ಪ್ರಗತಿ ಪರ ರೈತರು, ಕೃಷಿ ವಿಶ್ವವಿದ್ಯಾಲಯ ಜಿಕೆವಿಕೆ ವಿದ್ಯಾರ್ಥಿಗಳು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

