ಕೋಲಾರ

ಕೆಂಪೇಗೌಡರ ಭಾವಚಿತ್ರ ಅಪಮಾನಕ್ಕೆ ಖಂಡನೆ

Published On :

ಕೋಲಾರ: ಚಿಕ್ಕಬಳ್ಳಾಪುರ ಜಿಲ್ಲೆಯ ಚೀಮನಹಳ್ಳಿ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರಗಳಿಗೆ ಹಾನಿ ಮಾಡಿರುವ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ, ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಾಡಪ್ರಭು ಕೆಂಪೇಗೌಡ ಯುವ ಸೇನೆ ಜಿಲ್ಲಾ ಗೌರವಾಧ್ಯಕ್ಷ ವಿ.ಇ.ರಾಮಚಂದ್ರ, ಜಿಲ್ಲಾಧ್ಯಕ್ಷ ಕೆ.ವಿ.ಹರೀಶ್, ಪ್ರಧಾನ ಕಾರ್ಯದರ್ಶಿ ಬಿ.ಆರ್.ಲಕ್ಷ್ಮಣ, ಪತ್ರಿಕಾ ಕಾರ್ಯದರ್ಶಿ ಎಂ.ರವಿಕುಮಾರ್ ಮತ್ತಿತರರು ಸರ್ಕಾರವನ್ನು ಒತ್ತಾಯಿಸಿದ್ದಾರೆ.  ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೆಗೌಡರು ರಾಜ್ಯ ಕಂಡ ಮಹಾನ್ ಸ್ವಾಭಿಮಾನಿ ನಾಯಕರು. ಇಂತಹ ನಾಯಕನ ಭಾವಚಿತ್ರವನ್ನು ಅಪಮಾನಗೊಳಿಸುವುದು ಖಂಡನೀಯ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಹಾಗೂ  ನಾಡಿನಾದ್ಯಂತ ಇರುವ ಕೆಂಪೇಗೌಡ ಪ್ರತಿಮೆಗಳಿಗೆ ರಕ್ಷಣೆ ನೀಡಬೇಕು  ಎಂದು ಅವರು ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.

ಮುಸ್ಲಿಂ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳ ಆಯ್ಕೆ
ಚಿಂತಾಮಣಿ:
ಕರ್ನಾಟಕ ಮುಸ್ಲಿಂ ಹಿತರಕ್ಷಣಾ ವೇದಿಕೆಯ ತಾಲೂಕು ಮತ್ತು ನಗರ ಘಟಕದ ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆಂದು ತಾಲೂಕು ಅಧ್ಯಕ್ಷ ಇಮ್ರಾನ್‌ಪಾಷಾ ತಿಳಿಸಿದ್ದಾರೆ.  ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸಭೆ ಸೇರಿ ವೇದಿಕೆ ಅಸ್ತಿತ್ವಕ್ಕೆ ಬಂದು ಈ ಕೆಳಗಂಡ ಪದಾಧಿಕಾರಿಗಳನ್ನು ಆಯ್ಕೆ ಮಾಡಿರುವುದಾಗಿ ತಿಳಿಸಿದ್ದಾರೆ. ತಾಲೂಕು ಗೌರವಾಧ್ಯಕ್ಷರಾಗಿ ಕೆ.ಶಬೀರ್ ಪಾಷಾ, ಉಪಾಧ್ಯಕ್ಷರಾಗಿ ಸಮೀವುಲ್ಲಾ, ಕಾರ್ಯಾಧ್ಯಕ್ಷರಾಗಿ ನಯಾಜ್ ಪಾಷಾ, ಕಾರ್ಯದರ್ಶಿಯಾಗಿ ಮೆಹಬೂಬ್ ಪಾಷಾ ಹಾಗೂ ಶಫೀವುಲ್ಲಾ, ಇಲಿಯಾಸ್ ಪಾಷಾ, ಜಾಕೀರ್ ಹುಸೇನ್, ಎಂ.ಡಿ.ಅಸ್ಲಂರನ್ನು ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಯಿತು. ನಗರ ಘಟಕದ ಅಧ್ಯಕ್ಷ ಅಕ್ರಂ ಪಾಷಾ, ಗೌರವಾಧ್ಯಕ್ಷ ಸಯ್ಯದ್ ಅನ್ಸರ್, ಉಪಾಧ್ಯಕ್ಷ ಜಮೀವುಲ್ಲಾ, ಕಾರ್ಯದರ್ಶಿ, ಸಲೀಂ ಷರೀಫ್ ಸೇರಿದಂತೆ ಇನ್ನೂ ಹಲವು ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.