ಕಾಂಗ್ರೆಸ್ಸಿಗರ ಕಂಬನಿ
ಕೋಲಾರ: ಮೈಸೂರು ರಾಜ ವಂಶಸ್ಥರ ಕೊನೆಯ ಕೊಂಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಿಧನದ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಜಿಲ್ಲಾ ಕಚೇರಿಯಲ್ಲಿ ಬುಧವಾರ ಸಂತಾಪ ವ್ಯಕ್ತಪಡಿಸಿದರು.
ಮುಖಂಡರಾದ ಸಿ.ಎಂ.ವೆಂಕಟಪತಿ ಹಾಗೂ ಬೆಳಗಾನಹಳ್ಳಿ ಮುನಿವೆಂಕಟಪ್ಪ ಅವರು ಒಡೆಯರ್ ಕುರಿತು ಮಾತನಾಡಿ, ಮೈಸೂರು ರಾಜ ಮನೆತನದ ಯದುಕುಲ ತಿಲಕ ಶ್ರೀಕಂಠದತ್ತ ನರಸಿಂಹರಾಜ ಒಡೆಯರರ್ನಿಧನದಿಂದಾಗಿ ರಾಜ್ಯಕ್ಕೆ ನಷ್ಟವಾಗಿದೆ, ಮೈಸೂರು ಅರಮನೆದೀಪ ಅರಿದಂತಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕಪ್ಪು ರತ್ನ ದಿ. ನೆಲ್ಸನ್ ಮಂಡೇಲ ಅವರ ಆತ್ಮಕ್ಕೂ ಶಾಂತಿ ಕೋರಲಾಯಿತು. ಕೋಲಾರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಪ್ರಸಾದ್ ಬಾಬು, ಅಬ್ದುಲ್, ಕೆ. ಜಯದೇವ್, ರೇಲ್ವೆ ಸಲಹಾ ಸಮಿತಿ ಸದಸ್ಯ ಕೆ.ಜಯದೇವ್, ಮುಖಂಡರಾದ ಕುಮಾರ್, ಸಲ್ಲಾ ಉದ್ದೀನ್ಬಾಬು, ಊರುಬಾಗಿಲು ಶ್ರೀನಿವಾಸ್, ಗುಪ್ತಾ, ಅತಾವುಲ್ಲಖಾನ್, ಇನಾಯಿತುಲ್ಲಾ, ಜಪ್ರುಲ್ಲಾಖಾನ್, ಪಾಲ್ಗುಣ, ಪ್ಯಾರೇಜಾನ್, ಜಮೀರ್ಪಾಷಾ, ಮುಕ್ತಿಯಾರ್ ಅಹಮದ್, ಸಜ್ಜಾದೌಲ ಇದ್ದರು.
ನಗರಸಭೆಯಲ್ಲೂ ಒಡೆಯರ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ನಗರಸಭೆ ಸದಸ್ಯರಾದ ಮುರಳಿಗೌಡ, ರವೀಂದ್ರ, ಸೋಮಶೇಖರ್, ಶೇಕ್ಚಂದ್ಪಾಷ, ಮಹ್ಮದ್ ಅಸ್ಲಾಮ್ ಹಾಗೂ ನಗರಸಭೆ ಸಿಬ್ಬಂದಿ ಇದ್ದರು.
ನಗರದ ಸರ್ಕಾರಿ ಬಸ್ ನಿಲ್ದಾಣದ ಬಳಿ ಜಯ ಕರ್ನಾಟಕ ಸಂಘಟನೆಯಿಂದ ಕ್ಯಾಂಡಲ್ಗಳನ್ನು ಬೆಳಗಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಂಘಟನೆಯ ಜಿಲ್ಲಾಧ್ಯಕ್ಷ ತ್ಯಾಗರಾಜ್ ನೇತೃತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

