ಕಾಲು ಜಾರಿ ಕುಂಟೆಯಲ್ಲಿ ಬಿದು ವೃದ್ಧೆ ಸಾವು
ಕೆಜಿಎಫ್: ವಾಯುವಿಹಾರಕ್ಕೆ ಹೋಗಿದ್ದ ವೃದ್ಧೆಯೊಬ್ಬರು ಕಾಲು ಜಾರಿ ಕುಂಟೆಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ನಗರದ ಆಂಡ್ರಸನ್ಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಸ್ಕಂ ಎ. ಬ್ಲಾಕ್ ವ್ಯಾಪ್ತಿಯ ನಿವಾಸಿ ಬಾಲಕೃಷ್ಣಾರೆಡ್ಡಿ ಎಂಬವರ ಪತ್ನಿ ಸರೋಜಮ್ಮ(76) ಬೆಳಗ್ಗೆ ಕುಂಟೆಯಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಆಂಡ್ರಸನ್ಪೇಟೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ನಕಲಿ ಕಂಡಕ್ಟರ್ಗೆ ಗೂಸಾ
ಚಿಂತಾಮಣಿ: ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಂದ ಬಸ್ ಟಿಕೆಟ್ ಹಣ ಅನಧಿಕೃತವಾಗಿ ವಸೂಲಿ ಮಾಡಿ ವಂಚಿಸುತ್ತಿದ್ದ ಯುವಕನನ್ನು ಸಾರ್ವಜನಿಕರು ಹಿಡಿದು ಗೂಸಾ ನೀಡಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಗುರುವಾರ ಅಪರಿಚಿತ ಯುವಕನೊಬ್ಬ ನಿಲ್ದಾಣದಲ್ಲಿರುವ ಖಾಸಗಿ ಬಸ್ ಪ್ರಯಾಣಿಕರ ಬಳಿ ಹೋಗಿ ನಾನು ಕಂಡೆಕ್ಟರ್ ಎಂದು ವಂಚಿಸಿ ಟಿಕೆಟ್ ನೀಡದೇ ಹಣ ವಸೂಲಿ ಮಾಡುತ್ತಿರುವುದನ್ನು ಕಂಡು ಅನುಮಾನಗೊಂಡ ಸ್ಥಳೀಯ ವಿಚಾರಿಸಿದಾಗ ಈತ ಪರಾರಿಯಾಗಲು ಯತ್ನಿಸಿದ್ದು, ಸಾರ್ವಜನಿಕರು ಹಿಡಿದು ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ. ಕಳೆದ 2 ದಿನಗಳಿಂದ ಅಪರಿಚಿತ ಯುವಕರು ಕಾಕಿ ಸಮವಸ್ತ್ರ ಧರಿಸಿ ಪ್ರಯಾಣಿಕರನ್ನು ಯಾಮಾರಿಸುತ್ತಿರುವ ಘಟನೆ ಪೊಲೀಸ್ ಠಾಣೆ ಹಿಂಭಾಗದಲ್ಲೇ ನಡೆಯುತ್ತಿರುವುದರಿಂದ ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಗುಡಿಬಂಡೆಯಲ್ಲಿ ಯೋಗ ಶಿಬಿರ
ಗುಡಿಬಂಡೆ: ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಪಟ್ಟಣದ ಸಾರ್ವಜನಿಕರ ಆರೋಗ್ಯ ಉತ್ತಮ ಪಡಿಸುವ ನಿಟ್ಟಿನಲ್ಲಿ ಡಿ.16 ರಿಂದ 21ರತನಕ ಆರು ದಿನಗಳ ಯೋಗ ಶಿಬಿರ ಆಯೋಜಿಸಿದೆ. ಶಿಬಿರದಲ್ಲಿ ಉಸಿರಾಟ ಪ್ರಕ್ರಿಯೆ, ಪರಸ್ಪರ ಸಂವಾದ ಮತ್ತು ಸುದರ್ಶನ ಭಕ್ತ ಕ್ರಿಯೆ ಬಗ್ಗೆ ಬೋಧಿಸಲಾಗುತ್ತದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಶಿಬಿರದ ಆಯೋಜಕರಾದ ಭಾರತಿ ಸುರೇಂದ್ರನಾಥ 9986248546, ಶ್ರೀ ಗೌರಿ 9448741716 ಅಥವಾ ಮಹೇಶ್ 9379525804 ಗೆ ಸಂಪರ್ಕಿಸಬಹುದು.
ಗ್ರಾಪಂ ನೌಕರರಿಂದ ಪ್ರತಿಭಟನೆ
ಕೋಲಾರ: ಗ್ರಾಮ ಪಂಚಾಯಿತಿ ನೌಕರರು ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಎಲ್ಲಾ ನೌಕರರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು, ಭವಿಷ್ಯ ನಿಧಿ, ಸೌಲಭ್ಯ ಕಲ್ಪಿಸಬೇಕು, ಖಾಲಿಯಾದ ಬಿಲ್ ಕಲೆಕ್ಟರ್ ಹುದ್ದೆಗೆ ಅರ್ಹ ಗ್ರಾಮ ಪಂಚಾಯಿತಿ ನೌಕರರನ್ನು ನೇಮಕ ಮಾಡಬೇಕೆಂದು ಗ್ರಾಪಂ ನೌಕರರು ಒತ್ತಾಯಿಸಿದರು. ನೌಕರರಿಗೆ ಬಾಕಿ ಇರುವ ವೇತನವನ್ನು ತಕ್ಷಣ ಪಾವತಿಸಬೇಕು, ಗಣಕಯಂತ್ರ ಸಹಾಯಕರನ್ನು ಸೆಕ್ಷನ್ 113ರ ಪ್ರಕಾರ ಗ್ರಾಮ ಪಂಚಾಯತ್ ನೌಕರರೆಂದು ಪರಿಗಣಿಸಬೇಕು, ಸಮವಸ್ತ್ರ, ಗ್ರೇಡ್-2 ಕಾರ್ಯದರ್ಶಿ ಹುದ್ದೆಗೆ ಬಡ್ತಿ, ಸೇವಾ ಪುಸಕ್ತ ಹಾಗೂ ಹಾಜರಾತಿ ಪುಸಕ್ತದಲ್ಲಿ ಸಹಿ ಮಾಡುವುದಕ್ಕೆ ಅವಕಾಶ ಸೇರಿದಂತೆ ಇನ್ನಿತರ ಬಾಕಿ ಇರುವ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.
ಆರೋಗ್ಯ ಉಚಿತ ತಪಾಸಣ ಶಿಬಿರ
ಶಿಡ್ಲಘಟ್ಟ: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರಿಗೆ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯಲ್ಲಿ ಆರೋಗ್ಯ ಉಚಿತ ತಪಾಸಣ ಶಿಬಿರ ಏರ್ಪಡಿಸಲಾಗಿತ್ತು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಬೆಂಗಳೂರಿನ ನಾರಾಯಣ ಹೃದಯಾಲಯದ 10 ಮಂದಿ ವೈದ್ಯರ ತಂಡ ಪಾಲ್ಗೊಂಡು ರೋಗಿಗಳಿಗೆ ಉಚಿತವಾಗಿ ತಪಾಸಣೆ ನಡೆಸಿತು. ನೂರಾರು ಮಂದಿ ರೋಗಿಗಳು ಶಿಬಿರದಲ್ಲಿ ಚಿಕಿತ್ಸೆ ಪಡೆದರು.
ಕಣ್ಣಿನ ತಪಾಸಣಾ ಶಿಬಿರ
ಶಿಡ್ಲಘಟ್ಟ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನೇತ್ರ ಉಚಿತ ತಪಸಣಾ ಶಿಬಿರ ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ಮೂವತ್ತಕ್ಕೂ ಹೆಚ್ಚು ರೋಗಿಗಳು ನೇತ್ರ ಪರೀಕ್ಷೆಗೆ ಒಳಗಾದರು. ಹೆಚ್ಚಿನ ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

