ದೇಗುಲದಲ್ಲಿ ದರೋಡೆ: ಆಭರಣ ಕಳವು
ಕ.ಪ್ರ.ವಾರ್ತೆ ಮಾಲೂರು ಡಿ.12
ಪಟ್ಟಣದ ಕೋಲಾರ ರಸ್ತೆಯಲ್ಲಿರುವ ಶ್ರೀ ಸೌಮ್ಯ ಸ್ವರೂಪಿನಿ ಕಾಳಿಕಾಂಬ ದೇವಾಲಯಕ್ಕೆ ನುಗ್ಗಿದ ಕಳ್ಳರು ದೇವಿ ಪ್ರತಿಮೆ ಮೇಲಿದ್ದ 25 ಗ್ರಾಂ ಚಿನ್ನ ಸೇರಿದಂತೆ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
7 ತಿಂಗಳ ಹಿಂದೆ ಇಲ್ಲಿನ ಕೋಲಾರ ರಸ್ತೆಯ ಟೇಕಲ್ ಕ್ರಾಸ್ ಬಳಿಯಲ್ಲಿ ನೂತನವಾಗಿ ಸ್ಥಾಪಿಸಲಾಗಿದ್ದ ದೇವಾಲಯದಲ್ಲಿ ಈ ಘಟನೆ ನಡೆದಿದ್ದು, ಕಾಣಿಕೆ ಹುಂಡಿಯನ್ನೇ ಕಳ್ಳತನ ಮಾಡಿರುವ ಕಳ್ಳರು ಹುಂಡಿಯನ್ನು ಪಕ್ಕ ನೀಲಗಿರಿ ತೋಪಿನಲ್ಲಿ ಹುಂಡಿಯನ್ನು ಹೊಡೆದು ಹಣ ದೋಚಿದ್ದಾರೆ.
ಈ ಸಂಬಂಧ ದೇವಾಲಯದ ಅರ್ಚಕ ಸುಬ್ರಮಣ್ಯ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅದರ ಪ್ರಕಾರ ದೇವಿಪ್ರತಿಮೆ ಮೇಲಿದ್ದ 25 ಗ್ರಾಂ ಚಿನ್ನ, ಹಿತ್ತಾಳೆ ಪಾತ್ರೆಗಳು, ಸೀರೆಗಳು ಸೇರಿದಂತೆ ಲಕ್ಷಾಂತರ ರು. ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ. ನಿತ್ಯ ಮಲಗುತ್ತಿದ್ದ ಕಾವಲುಗಾರ ಸಂಬಂಧಿಕರ ಮದುವೆಗೆ ತೆರಳಿದ್ದು, ಬುಧವಾರ ರಾತ್ರಿ ದೇವಾಲಯಲ್ಲಿ ಯಾರು ಇರಲಿಲ್ಲ ಎಂದಿರುವ ಅರ್ಚಕ ಸುಬ್ರಮಣಿ ದೇವಾಲಯದ ಪ್ರಾರಂಭವಾದ ದಿನದಿಂದ ಹುಂಡಿಯಲ್ಲಿ ಸಂಗ್ರಹವಾಗಿದ್ದ ಹಣವನ್ನು ದೋಚಿದ್ದು, ಸುಮಾರು 30 ಸಾವಿರ ರು. ಇರಬಹುದೆಂದು ಅಂದಾಜಿಸಿದ್ದಾರೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಕೊಂಡು ತನಿಖೆ ಮುಂದುವರೆಸಿದ್ದಾರೆ.
ಅಪರಿಚಿತ ಶವ ಪತ್ತೆ
ಚಿಂತಾಮಣಿ: ಅಪರಿಚಿತ ಪುರುಷನ ಶವವೊಂದು ಕೈವಾರ ಕೆರೆಯಲ್ಲಿ ಗುರುವಾರ ಸಂಜೆ ಕಾಣಿಸಿಕೊಂಡಿದೆ.
ಸುಮಾರು 50 ವರ್ಷ ವಯಸ್ಸುಳ್ಳ ವ್ಯಕ್ತಿಯ ಶವ ಕೊಳೆತು ನಾರುತ್ತಿದ್ದು, ಕುರಿ ಕಾಯುವವರು ಕಂಡು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಗ್ರಾಮಾಂತರ ಠಾಣೆಸಬ್ ಇನ್ಸ್ ಪೆಕ್ಟರ್ ರಾಘವೇಂದ್ರ ಶವ ಹೊರ ತೆಗೆಸಿ ನಗರದ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ಕಳುಹಿಸಲಾಗಿದೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಜೂಜಾಟ; 15 ಮಂದಿ ಬಂಧನ
ನಗರದ ಶ್ರೀರಾಮನಗದ ತೋಪೊಂದರಲ್ಲಿ ಗುರುವಾರ ಸಂಜೆ ಅಂದರ್ ಬಾಹರ್ ಆಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ಪೊಲೀಸರು ದಾಳಿ ನಡೆಸಿ 12,540 ನಗದು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಾದ ಮಂಜು, ಕುಮಾರ್, ಹರೀಶ, ಭಾಷಾ, ಷಹಜಾನ್, ಗೋವಿಂದಪ್ಪ, ನವಾಜ್, ಚಾಂದ್ ಪಾಷ, ಮಂಜುನಾಥ, ಪ್ರಕಾಶರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಮಾಡಿಕೆರೆಯಲ್ಲಿ 5 ಮಂದಿ ಬಂಧನ
ತಾಲೂಕಿನ ಶ್ರೀನಿವಾಸಪುರ ರಸ್ತೆಯ ಮಾಡಿಕೆರೆ ಕ್ರಾಸ್ನ ಕೆರೆ ಅಂಗಳದಲ್ಲಿ ಅಂದರ್ ಬಾಹರ್ ಆಡುತ್ತಿದ್ದ ನಾಗರಾಜ್, ಶಂಕರ, ಚಿಕ್ಕವೆಂಕಟಪ್ಪ, ರಾಜೇಶ್, ಮಹೇಶ್ರನ್ನು ಬಂಧಿಸಿರುವ ಪೊಲೀಸರು ಅವರಿಂದ 5,200 ನಗದು ವಶಪಡಿಸಿಕೊಂಡು ಪ್ರಕರಣ ಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

