ವಿಜ್ಞಾನದ ಜೊತೆಗೆ ಆಧ್ಯಾತ್ಮವೂ ಮುಖ್ಯ'
ಬಂಗಾರಪೇಟೆ: ದೇಶದ ಅಭಿವೃದ್ಧಿಗೆ ವಿಜ್ಞಾನದ ಜೊತೆಗೆ ಆಧ್ಯಾತ್ಮ, ಮಾನವೀಯತೆ ಬೆಳೆಯಬೇಕೆಂದು ಆದಿ ಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮಿಜಿ ಹೇಳಿದರು.
ತಾಲೂಕಿನ ಪಾಕರಹಳ್ಳಿಯ ಶ್ರೀ ಮಹೇಶ್ವರಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡ್ತಿ, ಇಂದಿನ ಪರಿಸ್ಥಿತಿಯಲ್ಲಿ ಆಲಮ ಮರದ ಕೊಂಬೆಗಳು ವಿಜ್ಞಾನವಾಗಿದ್ದು, ಬೇರುಗಳು ಆಧ್ಯಾತ್ಮಿಕವಾಗಿವೆ ಎಂದರು. ವಿಜ್ಞಾನ ಬೆಳೆದಂತೆ ಮನುಷ್ಯರಲ್ಲಿ ಮಾನಿವೀಯತೆ ಬೆಳೆಯದಿರುವುದು ಶೋಚನೀಯವಾಗಿದೆ. ಸತ್ಯದ ಬೆಳಕಿಲ್ಲಿ ಮನುಷ್ಯ ಮಾತನಾಡಬೇಕು ಎಂದರು. ದೇವಾಲಯದ ಧರ್ಮಾಧಿಕಾರಿ ಮುನಿಯಪ್ಪಗೌಡ, ಜಿಪಂ ಸದಸ್ಯ ಎಂ.ಎಸ್. ಆನಂದ್, ಆ.ಮು. ಲಕ್ಷ್ಮೀನಾರಾಯಣ, ಆರ್. ನಾರಾಯಣರೆಡ್ಡಿ, ಚಿಕ್ಕಅಂಕಂಡಹಳ್ಳಿ ಪಂಚಾಯ್ತಿ ಅಧ್ಯಕ್ಷೆ ಅನಿತಾಚಂದ್ರಯ್ಯಶೆಟ್ಟಿ, ಸಿಪಿಐ ವೆಂಕಟಾಚಲಪತಿ, ಶಿವಕುಮಾರ್, ಕೃಷ್ಣಾರೆಡ್ಡಿ, ಮುನಿಯಪ್ಪ, ಯಲವಹಳ್ಳಿ ರಮೇಶ್, ವಕ್ಕಲೇರಿ ರಾಮು ಇದ್ದರು.
ಅಕ್ರಮ ನೀರು ಸಂಪರ್ಕ: ನಗರಸಭೆ ಸದಸ್ಯೆಯಿಂದ ದೂರು
ಕೋಲಾರ: ನಗರದ 27 ನೇ ವಾರ್ಡಿಗೆ ಸೇರಿದ ಮುನೇಶ್ವರ ನಗರದ 1ನೇ ಮುಖ್ಯರಸ್ತೆಯಲ್ಲಿರುವ ಮೈನ್ಪೈಪ್ನಿಂದ ಖಾಸಗಿಯವರು ನೀರು ಸಂಪರ್ಕವನ್ನು ಪಡೆದು ಟ್ಯಾಂಕರ್ಗಳ ಮೂಲಕ ನೀರು ಮಾರಾಟ ಮಾಡುತ್ತಿದ್ದಾರೆಂದು ನಗರಸಭೆ ಸದಸ್ಯೆ ಸಾಕಮ್ಮ ರಾಜಣ್ಣನವರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಗುರುವಾರ ತಮ್ಮ ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ನಿಯೋಗ ಬಂದು ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಹೆಡ್ಮುನ್ಷಿ ಕೃಷ್ಣೇಗೌಡರಿಗೆ ದೂರು ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.
ಮೈನ್ಪೈಪ್ನಿಂದ ಖಾಸಗಿಯವರು ನೀರು ಪಡೆದು ಅದನ್ನು ಟ್ಯಾಂಕರ್ಗಳ ಮೂಲಕ ಮಾರಾಟ ಮಾಡುತ್ತಿದ್ದಾರೆಂದು ನಗರಸಭೆಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ತಿಳಿಸಿದರು. ತಕ್ಷಣ ಸಂಬಂಧಪಟ್ಟ ಇಂಜಿನಿಯರ್ಗಳನ್ನು ಸ್ಥಳಕ್ಕೆ ಕಳುಹಿಸಿ ಸೂಕ್ತ ಕ್ರಮಕ್ಕೆ ಸೂಚಿಸುವಂತೆ ನಗರಸಭೆ ಸದಸ್ಯೆ ಸಾಕಮ್ಮ ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜಣ್ಣ, ಗೋಪಾಲಕೃಷ್ಣ, ನಾಗರಾಜ, ನಾರಾಯಣಸ್ವಾಮಿ, ಗುಣಶೇಖರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

