ಕೋಲಾರ

ವೈಭವ ಕಳೆದುಕೊಂಡ ಮಾಲೂರು ಸಂತೆ ಮೈದಾನ

Published On :

ಮಾಲೂರು: ಸಂತೆ ಮೈದಾನಪ್ರದೇಶದ ಬಗ್ಗೆ ದಾಖಲೆ ಹೊಂದಿರದ ಇಲ್ಲಿನ ಪುರಸಭೆ ಸಂತೆ ಇತಿಹಾಸವುಳ್ಳ ಸಂತೆ ಮೈದಾನವನ್ನು ದಾರಿಹೋಕರಿಗೆ ಆಶ್ರಯ ತಾಣ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ.
ಉಳಿದಿರುವ ಸಂತೆ ಮೈದಾನದಲ್ಲಿ ಶುಚಿತ್ವ ಕಾಪಾಡದೆ ಸಂತೆಯಲ್ಲಿ ಸೇರುವ ಬೆರಳೆಣಿಕೆ ವ್ಯಾಪಾರಸ್ಥರು-ಗ್ರಾಹಕರು ಹುಳ ಹುಪ್ಪಟೆಗಳ ಕಾಟದ ಮಧ್ಯೆ ವ್ಯಾಪಾರ ಮಾಡಬೇಕಾಗಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಸುತ್ತಮುತ್ತಲ ಪ್ರದೇಶದಲ್ಲಿ ಹೆಸರು ವಾಸಿಯಾಗಿದ್ದ ಇಲ್ಲಿನ ಗುರುವಾರ ಸಂತೆಗೆ ಇತರೆ ತಾಲೂಕುಗಳಿಂದ ಹಿಂದಿನ ದಿನವೇ ಬಂದು ಸಂತೇ ಮೈದಾನದಲ್ಲಿ ಕಲ್ಪಿಸಿರುವ ಕಲ್ಲಿನ ಮಂಟಪದಲ್ಲಿ ವಿಶ್ರಮಿಸುತ್ತಿದ್ದರು. ಊರು ಹೂರವಲಯದಲ್ಲಿದ್ದ ಸಂತೆಗೆ ಕಾಲ್ನಡಿಗೆ-ಬಂಡಿಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬರುತ್ತಿದ್ದ ಜನರು ಈಗ ನೂರಾರು ಸಂಖ್ಯೆಯಲ್ಲಿಯೂ ಸುಳಿಯುತ್ತಿಲ್ಲ. ಇದಕ್ಕೆ ಕಾರಣ ಇಲ್ಲಿನ ಪುರಸಭೆ ನಿರ್ಲಕ್ಷ್ಯ.
ಸಂತೆಗೆ ಬರುತ್ತಿದ್ದ ವ್ಯಾಪರಸ್ಥರ ವಿಶ್ರಾಂತಿಗಾಗಿ ನಿರ್ಮಿಸಿದ್ದ ಕಲ್ಲಿನ ಮಂಟಪ ದಾರಿಹೋಕರ ಪಾಲಾಗಿದ್ದು, ಉಳಿದಿರುವ ಜಾಗದಲ್ಲಿ ಪುರಸಭೆ ನಿರ್ಲಕ್ಷ್ಯದಿಂದ ಬೆಳದಿರುವ ಗಿಡಗುಂಟೆಗಳ ನಡುವೆ ಸಂತೆ ನಡೆಯುತ್ತಿದೆ. ಇಲ್ಲಿನ ಸಂತೆ ಮೈದಾನದ ಕೆಟ್ಟ ಪರಿಸರದ ಹಿನ್ನೆಲೆಯಲ್ಲಿ ಸಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುವಂತಾಗಿದೆ ಎನ್ನುತ್ತಾರೆ ಸಾರ್ವಜನಿಕರು.
ಈ ಬಗ್ಗೆ ಪುರಸಭೆ ಹಾಗೂ ಶಾಸಕರು ಗಮನ ಹರಿಸಬೇಕು. ಸಂತೆಯನ್ನು ಹಿಂದಿನ ವೈಭವಕ್ಕೆ ಮರಳಿಸಬೇಕು ಎಂದು ಅಗ್ರಹಿಸುವ ವ್ಯಾಪರಸ್ಥರು ಈಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕೆಂದು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.