ಕೋಲಾರ

ಮಹಾಲಕ್ಷ್ಮಿ ಕೋಟಿ ಕುಂಕುಮಾರ್ಚನೆ

Published On :

ಚಿಕ್ಕಬಳ್ಳಾಪುರ: ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಗಾಯತ್ರಿ ಸೇವಾ ಸಮಿತಿ ಹಾಗೂ ಗಾಯತ್ರಿ ಮಹಿಳಾ ಮಂಡಳಿ ವತಿಯಿಂದ ಶ್ರೀ ಮಹಾಲಕ್ಷ್ಮಿ ಕೋಟಿ ಕುಂಕುಮಾರ್ಚನೆ ಕಾರ್ಯಕ್ರಮ ಭಾನುವಾರ ನಡೆಯಿತು.  
ಸುಮಾರು 1200 ಕ್ಕೂ ಅಧಿಕ ಮಹಿಳೆಯರು ಯಾವುದೇ ಜಾತಿ ಭೇದವಿಲ್ಲದೇ ಮಹಾಲಕ್ಷ್ಮಿಕೋಟಿ ಕುಂಕುಮಾರ್ಚನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಖ್ಯಾತ ಜ್ಯೋತಿಷಿ ಆನಂದ ಗುರೂಜಿ, ಧಾರ್ಮಿಕ ಕೈಂಕರ್ಯಗಳ ಮೂಲಕ ಸಮಾಜದ ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯ.ಆಗಾಗಿ ಎಲ್ಲರೂ ಧಾರ್ಮಿಕ ಕೈಂಕರ್ಯಗಳಲ್ಲಿ ಹೆಚ್ಚಿಗೆ ಪಾಲ್ಗೊಳ್ಳಬೇಕೆಂದರು.
ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತಾವು ಮೈಮರೆಯುವುದು ಸರ್ವೆ ಸಾಮಾನ್ಯ. ಒಂದಷ್ಟು ಒಳಿತನ್ನು ಮಾಡುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದ ಅವರು, ಚಿಕ್ಕಬಳ್ಳಾಪುರದಲ್ಲಿ ಇಷ್ಟು ದೊಡ್ಡಮಟ್ಟದಲ್ಲಿ ಸಾಮೂಹಿಕವಾಗಿ ಸುಮಂಗಲಿಯರೆಲ್ಲರೂ ಒಂದೆಡೆ ಸೇರಿ ಶ್ರೀ ಮಹಾಲಕ್ಷ್ಮಿ ಕುಂಕುಮಾರ್ಚನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಅಖಿಲ ಕರ್ನಾಟಕ ಬ್ರಾಹ್ಮಣ ಸಂಘದ ರಾಜ್ಯಾಧ್ಯಕ್ಷ ಡಾ.ಬಿ.ಎನ್.ವಿ. ಸುಬ್ರಹ್ಮಣ್ಯ ಮಾತನಾಡಿ,ಸೇವಾ ಕೈಂಕರ್ಯ ಹಾಗೂ ಧಾರ್ಮಿಕ ಕೈಂಕರ್ಯಗಳು ಒಂದೇ ನಾಣ್ಯದ ಎರಡು ಮುಖಗಳು. ಸರಿ ಸಮಾನವಾದ ಈ ಕಾರ್ಯಗಳಿಂದ ಜೀವನದ ಸದೃಢತೆಯನ್ನು ಸಾಧಿಸಬಹುದಾಗಿದೆ ಎಂದರು.
ರಾಯಲ್ಪಾಡುವಿನ ಖ್ಯಾತ ಜೋತಿಷ್ಯ ವೆಲ್ಲಾಲ ಸತ್ಯನಾರಾಯಣಶಾಸ್ತ್ರಿ, ಶಾಸಕ ಕೆ. ಸುಧಾಕರ್, ಬ್ರಾಹ್ಮಣರ ಸಂಘದ ಜಿಲ್ಲಾಧ್ಯಕ್ಷ ಎಂ. ವಾಸುದೇವರಾವ್, ತಾಲೂಕು ಅಧ್ಯಕ್ಷ ಎಸ್. ಶೇಷಭಟ್, ನಿವೃತ್ತ ತಹಸೀಲ್ದಾರ್ ಕೆ.ಎಸ್. ವೆಂಕಟೇಶಯ್ಯ, ಶ್ರೀ ಕೋದಂಡರಾಮಸ್ವಾಮಿ ಆಲಯದ ಪ್ರಧಾನ ಅರ್ಚಕ ನಾರಾಯಣಶಾಸ್ತ್ರಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಉಪಾಧ್ಯಕ್ಷ ಪದ್ಮಾಶೇಷಾದ್ರಿ, ಮಹಿಳಾ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿ ಪೂರ್ಣಿಮಾ, ನಾಗಲಕ್ಷ್ಮಿ, ಸಮಿತಿಯ ಎಸ್.ಎನ್. ರಮೇಶ್, ಕೆ.ಪಿ. ನವಮೋಹನ್, ಶ್ರೀಧರ್ ಬಾಬು, ಕೃಷ್ಣಮೂರ್ತಿ ಸೇರಿದಂತೆ ಗಾಯತ್ರಿ ಸೇವಾ ಸಮಿತಿ ಹಾಗೂ ಗಾಯತ್ರಿ ಮಹಿಳಾ ಮಂಡಳಿಯ ಪದಾಧಿಕಾರಿಗಳು ಹಾಜರಿದ್ದರು.  ಸಂಜೆ ಖ್ಯಾತ ಹಿನ್ನೆಲೆ ಗಾಯಕಿ ಮೈಸೂರಿನ ಲಕ್ಷ್ಮಿನಾಗರಾಜ್, ಕು.ಇಂದು ನಾಗರಾಜ್ ನಡೆಸಿಕೊಟ್ಟ ಸುಗಮ ಸಂಗೀತ ಎಲ್ಲರ ಮನಸೊರೆಗೊಂಡಿತು. ಸತ್ಯಸಾಯಿ ಲೋಕಸೇವಾ ಟ್ರಸ್ಟ್  ನಬಿ.ಎನ್. ನರಸಿಂಹಮೂರ್ತಿರವರನ್ನು ಸನ್ಮಾನಿಸಲಾಯಿತು. ಗಾಯತ್ರಿ ಸೇವಾ ಸಮಿತಿಯ ಎಸ್.ಎನ್. ರಮೇಶ್ ಸ್ವಾಗತಿಸಿದರೆ, ಕೃಷ್ಣಮೂರ್ತಿ ನಿರೂಪಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಕೆ.ಪಿ. ನವಮೋಹನ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.