ಕೋಲಾರ

ಸರ್ದಾರ್ ಪಟೇಲ್ ಸ್ಮರಣಾರ್ಥ ಏಕತಾ ಓಟ

Published On :

ಕ.ಪ್ರ.ವಾರ್ತೆ ಕೋಲಾರ ಡಿ. 15
ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಪುಣ್ಯತಿಥಿಯ ಪ್ರಯುಕ್ತ ನಗರದಲ್ಲಿ ಭಾನುವಾರ ಏಕತಾ ಓಟ ಹಮ್ಮಿಕೊಳ್ಳಲಾಗಿತ್ತು. ನೂರಾರು ಸಂಖ್ಯೆಯಲ್ಲಿ ಜನರು ಓಟದಲ್ಲಿ ಭಾಗವಹಿಸಿ ಪಟೇಲ್ ಅವರಿಗೆ ಗೌರವ ಸಮರ್ಪಿಸಿದರು. ನಗರದ ಡೂಂ ಲೈಟ್ ವೃತ್ತದಿಂದ ಆರಂಭವಾದ ಓಟವನ್ನು ಪಟೇಲ್ ಏಕತಾ ಪ್ರತಿಮೆ ಲೋಹ ಸಂಗ್ರಹ ಸಮಿತಿಯಿಂದ ಸಂಘಟಿಸಲಾಗಿತ್ತು.
ಮಕ್ಕಳಾದಿಯಾಗಿ ಹಿರಿಯರು, ಮಹಿಳೆಯರು ಹಾಗೂ ವಿದ್ಯಾರ್ಥಿ ಯುವ ಜನತೆ ಪಾಲ್ಗೊಂಡಿದ್ದ ಓಟಕ್ಕೆ ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ ಚಾಲನೆ ನೀಡಿದರು.
ಓಟದಲ್ಲಿ ಭಾಗವಹಿಸಿದ್ದ ಜನರು ಘೋಷಣೆಗಳ ಮೂಲಕ ಐಕ್ಯತೆ ಸಾರಿದರು. ಪಟೇಲ್ ಅವರ ಗುಣಗಾನ ಮಾಡುವ ಹಾಗೂ ಭಾರತ ಮಾತೆಯನ್ನು ಸ್ಮರಿಸುವ ಘೋಷವಾಕ್ಯಗಳು ಮೊಳಗಿದವು.
ಮಾಜಿ ಶಾಸಕ ವೈ. ಸಂಪಂಗಿ, ಎಂ. ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ, ಡಾ. ಶಿವಣ್ಣ, ಶಂಕರ ನಾರಾಯಣ ರೆಡ್ಡಿ, ಯಶ್ವಂತ್ರಾವ್, ಜೆ.ಎಸ್. ಪಾರ್ಥಸಾರಥಿ, ಓಂಶಕ್ತಿ ಚಲಪತಿ, ಪ್ರಮೋದ್, ಶಿಳ್ಳಂಗೆರೆ ಮಹೇಶ್, ಮಾಗೇರಿ ನಾರಾಯಣಸ್ವಾಮಿ, ಗೂಟ್ಲೂರು ಮಂಜುನಾಥ್, ಚಲಪತಿ, ನಾಗಪ್ರಕಾಶ್, ಜುಂಜನಹಳ್ಳಿ ನಾರಾಯಣಸ್ವಾಮಿ, ಗಾಂಧಿನಗರ ವೆಂಕಟೇಶ್, ಹಾರೋಹಳ್ಳಿ ನಾರಾಯಣಸ್ವಾಮಿ, ಕೆಂಬೋಡಿ ನಾರಾಯಣ ಸ್ವಾಮಿ, ಜಾವೀದ್, ನೀಲಿ ಜಯಶಂಕರ್, ಮು. ರಾಘವೇಂದ್ರ, ಯಲ್ದೂರು ಪದ್ಮನಾಭ್, ವೇಮಗಲ್ ಓಹೀಲೇಶ್, ಅಲ್ಲಿಕುಂಟೆ ಶ್ರೀನಿವಾಸ್, ರಾಘವೇಂದ್ರ, ಸತ್ಯನಾರಾಯಣರಾವ್, ಮಾರ್ಕಂಡೇಗೌಡ, ನರಸಿಂಹರಾಜು, ಛಲಪತಿ, ಕೆ. ಪ್ರಹ್ಲಾದ್ರಾವ್, ವಿ. ಬಾಬು, ಪುನೀತ್, ಅಪ್ಪಿಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.