ಕೆಜಿಎಫ್: ವಿಜೃಂಭಣೆಯ ಅಯ್ಯಪ್ಪ ವಿಳಕ್ಕು ಉತ್ಸವ
ಕೆಜಿಎಫ್: ನಗರದ ಸುಪ್ರಸಿದ್ಧ ಅಯ್ಯಪ್ಪ ದೇವಸ್ಥಾನದಲ್ಲಿ 43ನೇ ಅಯ್ಯಪ್ಪ ಜ್ಯೋತಿ ಉತ್ಸವವನ್ನು ಅತಿ ವಿಜೃಂಭಣೆಯಿಂದ ಆಚರಿಸಲಾಯಿತು. ಅಯ್ಯಪ್ಪ ವಿಳಕ್ಕು ಎಂದು ಕರೆಯಲ್ಪಡುವ ಈ ಜ್ಯೋತಿ ಉತ್ಸವದ ಪೂಜೆಗಾಗಿ ಕರಿಮಲೆಗೆ ಕಲ್ಲಿಡುವುದು, ಚಪ್ಪರದಲ್ಲಿ ವಿಗ್ರಹ ಪ್ರತಿಷ್ಠಾಪನೆ ಮತ್ತು ಡಬಲ್ ತಾಯಂಬಕ ಪೂಜೆ ನೆರವೇರಿಸಿ ಸಂಜೆ 4 ಗಂಟೆಗೆ ದೇವಸ್ಥಾನದಲ್ಲಿ ಅಯ್ಯಪ್ಪ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ನಗರದ ವಿವಿಧ ಬಡಾವಣೆಗಳಿಂದ ಭಕ್ತಾಧಿಗಳು ದೀಪಗಳನ್ನು ತಂದು ದೇವರಿಗೆ ಪೂಜೆಯನ್ನು ಸಲ್ಲಿಸಿ ಅಯ್ಯಪ್ಪ ಸ್ವಾಮಿ ಉತ್ಸವ ರಥದಲ್ಲಿ ಪಾಲಕೊಂಬಿನೊಂದಿಗೆ ಪ್ರಸನ್ನ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದಿಂದ ನೂರಾರು ಭಕ್ತಾಧಿಗಳು ತಮ್ಮ ಕೈಯಲ್ಲಿ ದೀಪಗಳ ಜ್ಯೋತಿ ಹೊತ್ತು ನಗರದ ಗೀತಾ ರಸ್ತೆ, ಸೂರಜ್ಮುಲ್ ವೃತ್ತ, ಗಾಂಧಿ ವೃತ್ತ, ಎಂ.ಜಿ.ಮಾರುಕಟ್ಟೆ ರಸ್ತೆ, ಪ್ರಿಚರ್ಡ್ರಸ್ತೆ ಮೂಲಕ ಹಾದು ರಾತ್ರಿ 9ಕ್ಕೆ ದೇವಸ್ಥಾನವನ್ನು ತಲುಪಿದರು.
ಮೆರವಣಿಗೆಯಲ್ಲಿ ಕೇರಳಾ ರಾಜ್ಯದಿಂದ ಮಳಯಾಲಿ ಅವರಿಂದ ವಿವಿಧ ರೀತಿಯ ವಿಶೇಷ ಕಲಾ ತಂಡಗಳು, ಡೊಳ್ಳು ಬಾರಿಸಿಕೊಂಡು ರಸ್ತೆಯಲ್ಲಿ ನೃತ್ಯವನ್ನು ಮಾಡುವ ಮೂಲಕ ಭಕ್ತರನ್ನು ಮತ್ತು ಸಾರ್ವಜನಿಕರನ್ನು ಆಕರ್ಷಿಸಿದರು.
ಅದೇ ರೀತಿ ದೇವಸ್ಥಾನ ಸಮಿತಿ ವತಿಯಿಂದ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ನಡೆಯಿತು. ರಾತ್ರಿಯಿಂದ ಬೆಳಗ್ಗೆ 6ರ ವರೆಗೆ ಅಯ್ಯಪ್ಪ ದೇವಸ್ಥಾನದಲ್ಲಿ ಕೋಟ್ಟಪಾಡಿ ನಾರಾಯಣ ಗುರುಸ್ವಾಮಿ ಮತ್ತು ತಂಡದವರಿಂದ ಅಯ್ಯಪ್ಪ ಸ್ವಾಮಿಗೆ ವಿವಿಧ ರೀತಿಯ ವಿಶೇಷ ಪೂಜೆಗಳು, ಕಲಾ ತಂಡದವರಿಂದ ಕತ್ತಿ ನೃತ್ಯ, ವಾದ್ಯಗೋಷ್ಠಿ, ಭಜನೆ, ಸಂಗೀತ ಸೇರಿದಂತೆ ಇತರೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಭಾನುವಾರ ಮುಂಜಾನೆ 5 ಗಂಟೆಗೆ ಅಯ್ಯಪ್ಪ ಭಕ್ತರಿಗೆ ಮತ್ತು ಸಾರ್ವಜನಿಕರಿಗೆ ಅಗ್ನಿಕುಂಡವನ್ನು ಏರ್ಪಡಿಸಲಾಗಿತ್ತು.
ವರ್ಷಕ್ಕೊಮ್ಮೆ ಅತಿ ವಿಜೃಂಭಣೆಯಿಂದ ನಡೆಯುವ ಈ ಅಯ್ಯಪ್ಪ ಜ್ಯೋತಿ ಪೂಜೆ ಮತ್ತು ಉತ್ಸವಕ್ಕೆ ಕೆಜಿಎಫ್ ನಗರ ಮತ್ತು ಗ್ರಾಮೀಣ ಪ್ರದೇಶ ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

