ಅಧಿಕಾರಿಗಳನ್ನೇ ಕೂಡಿ ಹಾಕಿದರು!
ಮುಳಬಾಗಿಲು: ತಾಲ್ಲೂಕಿನ ಗೊಲ್ಲಹಳ್ಳಿ ಗ್ರಾ.ಪಂ. ಅಧಿಕಾರಿ ಸಿಬ್ಬಂದಿಯನ್ನು ಮಂಗಳವಾರ ಕಚೇರಿಯಲ್ಲಿ ಕೂಡಿ ಹಾಕಿ ಪ್ರತಿಭಟನೆ ನಡೆಸಿರುವ ಪ್ರಕರಣ ವರದಿಯಾಗಿದೆ. ಕಳೆದ ವಾರ ಗ್ರಾಮ ಪಂಚಾಯತಿಗೆ ಸೇರಿದ 25 ಎಕರೆ ಜಮೀನನ್ನು ಅಕ್ರಮ ಸಾಗುವಳಿಯಿಂದ ತೆರವುಗೊಳಿಸಿ ಪಂಚಾಯತಿ ವಶಕ್ಕೆ ನೀಡಲಾಗಿತ್ತು. ಇದರಿಂದ ಕುಪಿತ ಗೊಂಡಿದ್ದ ಗ್ರಾಮದ ಕೆಲವರು ಸದರಿ ಜಮೀನುಗಳನ್ನು ತಾವು ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದು ತಮಗೇ ಜಮೀನು ಬಿಟ್ಟುಕೊಡುವಂತೆ ಒತ್ತಾಯಿಸಿದರು.
ಇದರಿಂದ ಕುಪಿತಗೊಂಡ ಅವರು ಗ್ರಾಮ ಪಂಚಾಯತಿ ಅಧಿಕಾರಿ ರಾಜಗೋಪಾಲ್, ಸಿಬ್ಬಂದಿ ಶ್ರೀನಿವಾಸ್ ಮತ್ತು ನಾರಾಯಣ ಸ್ವಾಮಿಯವರನ್ನು ಎರಡು ಗಂಟೆಗಳ ಕಾಲ ಕೂಡಿಹಾಕಿದ್ದರು. ವಿಷಯ ತಿಳಿದ ತಹಸೀಲ್ದಾರ್ ಡಿ.ವಿ. ರಾಮಮೂರ್ತಿ, ತಾ.ಪಂ. ಅಧಿಕಾರಿ ಅರುಣಕುಮಾರ್, ರಾಜಸ್ವ ನಿರೀಕ್ಷಕ ಸಿ. ಸುಬ್ರಮಣಿ ಗ್ರಾಮಕ್ಕೆ ಭೇಟಿ ನೀಡಿ, ಸಿಬ್ಬಂದಿಯನ್ನು ಬಿಡುಗಡೆಗೊಳಿಸಿ ಪ್ರತಿಭಟನಾಕಾರರಿಂದ ಮನವಿ ಪತ್ರ ಪಡೆದು ಮುಂದಿನ ಕ್ರಮ ಜರುಗಿಸುವ ಭರವಸೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

