ಬೆಳೆ ಸಮೀಕ್ಷೆ ಸಮನ್ವಯ ಅಗತ್ಯ
ಮುಳಬಾಗಲು: ಕೃಷಿ ಸಮೀಕ್ಷೆ ದೇಶದ ಎಲ್ಲ ಯೋಜನೆಗಳಿಗೂ ಅತ್ಯಗತ್ಯವಾಗಿದೆ. ಆದರೆ ಕೃಷಿ, ತೋಟಗಾರಿಕೆ, ಸಣ್ಣ ನೀರಾವರಿ ಹಾಗೂ ಕಂದಾಯ ಇಲಾಖೆಗಳ ನಡುವೆ ಸಮನ್ವಯದ ಅಗತ್ಯವಿದೆ ಎಂದು ಕೋಲಾರ ಜಿಲ್ಲಾ ಸಂಖ್ಯಾಧಿಕಾರಿ ವಿ.ಶಂಕರನಾರಾಯಣ್ ಅಭಿಪ್ರಾಯಪಟ್ಟರು. ತಾಲ್ಲೂಕಿನ ದೊಡ್ಡಬಂಡಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ಬೆಳೆ ಕಟಾವು ಪ್ರಯೋಗ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಆದಾಯ, ಬೆಳೆ ವಿಮೆ, ಕೃಷಿ ಬೆಳೆಯಲ್ಲಿನ ನಿಖರವಾದ ದಾಖಲೆಗಳ ಮೇಲೆ ಸರ್ಕಾರದ ನೀತಿ ನಿರೂಪಣೆಗಳು ಅವಲಂಬಿತವಾಗಿದೆ ಎಂದು ನುಡಿದ ಅವರು ಬೆಳೆ ಕಟಾವು ಪ್ರಯೋಗದಲ್ಲಿ ಉಪಯೋಗಿಸುವ ಅನಿಯಮಿತ ಸಂಖ್ಯೆ ಮೂಲಕ ಮಾಡುವ ಪ್ರಯೋಗದ ವಿಶ್ವದಲ್ಲಿಯೇ ಮಾನ್ಯತೆ ಪಡೆದಿದೆ ಎಂದರು.
ಪ್ರಪಂಚದ ಎಲ್ಲಾ ಭಾಗದಲ್ಲೂ ಅನಿಯನಿತ ಸಂಖ್ಯೆಯ ಆಧಾರದ ಮೇಲೆ ಕಟಾವು ಅಂದಾಜು, ಇಳುವರಿ ಅಂದಾಜು ನಡೆಸಲಾಗುವುದು ಎಂದರು. ನಿಖರವಾದ ಬೆಳೆ ದಾಖಲೆಗೆ ಸರ್ಕಾರ ಕಟ್ಚುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಬೆಳೆ ದಾಖಲಿಗೆ ಗ್ರಾಮ ಲೆಕ್ಕಾಧಿಕಾರಿಗಳ ಜೊತೆಗೆ ತೋಟಗಾರಿಕೆ, ಕೃಷಿ ಮತ್ತು ಸಣ್ಣ ನೀರಾವರಿ ಇಲಾಖೆಗಳು ಸಹ ಸಮನ್ವಯತೆ ಕಾಪಾಡಿಕೊಂಡು ನಿಖರವಾಗಿ ದಾಖಲಿಸಬೇಕಾಗಿದೆ ಎಂದರು.
ಮುಂಗಾರು, ಹಿಂಗಾರು ಮತ್ತು ಬೇಸಿಗೆ - ಮೂರು ಋತುಗಳಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ನಿಖರವಾಗಿ ಬೆಳೆಗಳನ್ನು ದಾಖಲು ಮಾಡದಿದ್ದಲ್ಲಿ ರೈತರಿಗೆ ಅಗತ್ಯ ಸೌಲಭ್ಯ ಒದಗಿಸಲು ಕಷ್ಟವಾಗುತ್ತದೆ. ಇದನ್ನು ಸಿಬ್ಬಂದಿ ವರ್ಗ ಅರಿತು ಕೆಲಸ ಮಾಡಬೇಕು ಎಂದರು. ಬೆಂಗಳೂರು ಅರ್ಥಿಕ ಮತ್ತು ಸಂಖ್ಯಿಕ ನಿರ್ದೇಶಕ ಇಲಿಯಾಸ್ ಪಾಷ, ತಹಸೀಲ್ದಾರ್ ಡಿ.ವಿ. ರಾಮಮೂರ್ತಿ, ತೋಟಗಾರಿಕೆ ಅಧಿಕಾರಿ ಶಿವಪ್ರಸಾದ್, ಜಿಲ್ಲಾ ಸಹಾಯಕ ಸಂಖ್ಯಾಧಿಕಾರಿ ಎಸ್. ಪ್ರಸಾದ್, ಎನ್. ವೆಂಕಟರವಣಪ್ಪ, ಉಪ ತಹಶೀಲ್ದಾರ್ ಆನಂದ್, ವೆಂಕಟೇಶಯ್ಯ, ಸಿ. ಸುಬ್ರಮಣ್ಯಂ ಮುಂತಾದವರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

