ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿಗೆ ಬರಲಿ
ಕೋಲಾರ: ಮೂಢನಂಬಿಕೆಗಳಿಂದ ಬಡವರು, ಅಮಾಯಕರು ಬಲಿಪಶುಗಳಾಗುತ್ತಿದ್ದಾರೆ, ಸರ್ಕಾರ ಜಾರಿಗೆ ತರಲು ಉದ್ದೇಶಸಿರುವ ಮೂಢ ನಂಬಿಕೆ ನಿಷೇಧ ಕಾಯಿದೆಗೆ ರಾಜ್ಯದ ಜನತೆ ಬೆಂಬಲ ನೀಡುವ ಮೂಲಕ ಪ್ರಗತಿಪರ ಸಮಾಜ ನಿರ್ಮಾಣಕ್ಕೆ ಸಹಕಾರ ನೀಡಬೇಕೆಂದು ಖ್ಯಾತ ಗಾಯಕ ಪಿಚ್ಚಹಳ್ಳಿ ಶ್ರೀನಿವಾಸ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್ಪ್ರಿನಿರ್ವಾಣ ಕಾರ್ಯಕ್ರಮ ಹಾಗೂ ನಂಬಿಕೆ ಮತ್ತು ಮೂಢನಂಬಿಕೆ ಕುರಿತು ಚಿಂತನಾ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. ಕೆಲವರು ನಿಧಿ ಆಸೆಗೋಸ್ಕರ ಮಕ್ಕಳನ್ನು ಬಲಿಕೊಡಲು ಮುಂದಾಗಿದ್ದಾರೆ ಇದು ಹೀನಾಯ ಕೃತ್ಯವಲ್ಲದೆ ಹಾಗೂ ಮೌಢ್ಯತೆ ಅಲ್ಲದೆ ಮತ್ತೇನು ಎಂದು ಪ್ರಶ್ನಿಸಿದ ಅವರು, ಭಯದಿಂದ ಬದುಕುವುದನ್ನು ಬಿಡದಿದ್ದರೆ ಸಮಾಜದಲ್ಲಿ ಧೈರ್ಯವಾಗಿ, ಮುಕ್ತವಾಗಿ ಜೀವನ ಮಾಡಲಾಗುವುದಿಲ್ಲ ಎಂದರು.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಢನಂಬಿಕೆಯ ನಿಷೇದ ಕಾಯ್ದೆಯನ್ನು ನಾವೇಲ್ಲ ಸ್ವಾಗತಿಸಬೇಕು ಮತ್ತು ಈ ನಿಷೇದ ಕಾಯ್ದೆಯನ್ನು ಮುಖ್ಯ ಮಂತ್ರಿಗಳು ಹಿಂತೆಗೆದುಕೊಳ್ಳಬಾರದು ಎಂದು ಒತ್ತಾಯಿಸಿದರು.
ನಿಡುಮಾಡಿ ಸ್ವಾಮಿಯವರ ವಿರುದ್ಧ ಯಾರಾದಾರು ಟೀಕೆ ಮಾಡುವುದು, ತಪ್ಪು ಹೇಳಿಕೆಗಳನ್ನು ನೀಡಿದರೆ ದಲಿತ ಸಂಘಟನೆಗಳು ಒಂದಾಗಿ ಹಳ್ಳಿಹಳ್ಳಿಯಿಂದ ದೊಣ್ಣೆಗಳನು ಹಿಡಿದು ಸ್ವಾಮಿಜಿಗಳ ರಕ್ಷಣೆಗೆ ನಿಲುವುದಾಗಿ ಅವರು ಎಚ್ಚರಿಕೆ ನೀಡಿದರು. ಕಾರ್ಯಕ್ರಮದಲ್ಲಿ ವಿಭಾಗೀಯ ಸಂಚಾಲಕ ಎ. ಮಂಜುನಾಥ್, ಪತ್ರಕರ್ತ ಸಿ.ವಿ. ನಾಗರಾಜ್, ಬೆಂಗಳೂರು ಜಿಲ್ಲಾ ಸಂಚಾಲಕ ಐ.ಆರ್. ನಾರಾಯಣಸ್ವಾಮಿ, ಹಿರೇಕರಪನಹಳ್ಳಿ ಯಲ್ಲಪ್ಪ, ದೊಡ್ಡಮಲೆ ರವಿಕುಮಾರ್, ಮಾರ್ಜೆನಹಳ್ಳಿ ಮುನಿಸ್ವಾಮಿ, ವಿಜಿ ಕುಮಾರ್, ಮಹಿಳಾ ಅಧ್ಯಕ್ಷೆ ಉಮಾ ವೆಂಕಟರಾಮಣಸ್ವಾಮಿ, ನಾಗ, ಯಲ್ಲಪ್ಪ, ಮುನಿರಾಜು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

