ಡಾ. ಜಯಂತಿಗೆ ವೈದ್ಯಶ್ರೀ ಪ್ರಶಸ್ತಿ
ಚಿಂತಾಮಣಿ: ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಎನ್.ಆರ್.ಜಯಂತಿ ರವರಿಗೆ ವೈದ್ಯಶ್ರೀ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ. ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ವತಿಯಿಂದ ಚಿಕ್ಕಬಳ್ಳಾಪುರ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಡಾ.ವೀರಭದ್ರಯ್ಯ,ಗೌರವಾಧ್ಯಕ್ಷ ಡಾ.ರವೀಂದ್ರ,ಉಪಾಧ್ಯಕ್ಷ ಡಾ.ಶ್ರೀನಿವಾಸ್,ಕಾರ್ಯದರ್ಶಿ ಡಾ.ಬೆಟ್ಟುಸ್ವಾಮಿ ಡಾ.ಜಯಂತಿಯವರಿಗೆ ವೈದ್ಯಶ್ರೀ ಪ್ರಶಸ್ತಿ ವಿತರಿಸಿ ಗೌರವಿಸಿದರು. ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಂಗಸ್ವಾಮಿ, ಜಿಲ್ಲಾ ಸರ್ಜನ್ ಡಾ.ಮಂಜುಳ,ಡಿಪಿಎಂಓ ಡಾ.ವೆಂಕಟೇಶ್,ಡಿಟಿಓ ಡಾ.ಬಾಬುರೆಡ್ಡಿ, ಜಿಲ್ಲಾ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ಅನಿಲ್ಕುಮಾರ್ ಸೇರಿದಂತೆ ಜಿಲ್ಲೆಯ ಆಡಳಿತ ವೈದ್ಯಾಧಿಕಾರಿಗಳಿದ್ದರು.
ಸಹಕಾರಿ ರಂಗದ ಮಾಹಿತಿ ಪಠ್ಯದಲ್ಲಿ ಅಳವಡಿಕೆಗೆ ಆಗ್ರಹ
ಕೋಲಾರ: ದೇಶದ ಆರ್ಥಿಕ ಪ್ರಗತಿಯಲ್ಲಿ ಮಹತ್ತರವಾದ ಪಾತ್ರ ನಿರ್ವಹಿಸುತ್ತಿರುವ ಸಹಕಾರ ಕ್ಷೇತ್ರದ ಇತಿಹಾಸ, ಬೆಳವಣಿಗೆ, ಉದ್ದೇಶಗಳನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸಬೇಕೆಂದು ಜಿಲ್ಲಾ ಸಹಕಾರಿ ಯೂನಿಯನ್ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸರ್ಕಾರವನ್ನು ಆಗ್ರಹಿಸಿದರು. ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರಿ ಯೂನಿಯನ್, ಬೆಂಗಳೂರು ಮಾಂಟೋಸರಿ ಪ್ರೌಢಶಾಲೆಗಳ ಸಂಯುಕ್ತಾಶ್ರಯದಲ್ಲಿ ನಗರದ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಸಹಕಾರ ಕುರಿತು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರಬಂಧ, ಚರ್ಚಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡುತ್ತಿದ್ದರು. ತೀರ್ಪುಗಾರರಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್ ಭಾಗವಹಿಸಿದ್ದರು. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪಿ.ಎನ್. ಕೃಷ್ಣಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಯೂನಿಯನ್ ನಿರ್ದೇಶಕ ಉರಿಗಿಲಿ ರುದ್ರಸ್ವಾಮಿ, ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಶಿವಣ್ಣ, ಹುಸೇನ್ ದೊಡ್ಡಮುನಿ, ಡಿ. ಮಹದೇವಯ್ಯ ಇದ್ದರು.
ಚರ್ಚಾಸ್ಪರ್ಧೆ: ಪ್ರಥಮ-ಜೀನಿಯಸ್, ಪಿಯು ಕಾಲೇಜಿನ ಎಂ. ಗೌತಮಿ, ದ್ವಿತೀಯ-ಬಿಜಿಎಸ್ ಪಿಯು ಕಾಲೇಜಿನ ಸ್ವಾತಿ, ತೃತೀಯ-ಜೀನಿಯಸ್ ಕಾಲೇಜಿನ ಕೆ.ಎನ್. ಚರಣ್ರಾಜ್ ಆಯ್ಕೆಯಾದರು.
ಪ್ರಬಂಧ ಸ್ಪರ್ಧೆ: ಪ್ರಥಮ-ಬೆಮೆಲ್ ಪ್ರೌಢಶಾಲೆ ಕೆಜಿಎಫ್ನ ಪ್ರಜ್ಞ ವೈದ್ಯ, ದ್ವಿತೀಯ- ಸರ್ದಾರ್ ಬಾಲಕಿಯರ ಕಾಲೇಜು ಮುಳಬಾಗಿಲಿನ ವಿ.ಎಸ್. ಸೌಮ್ಯ, ತೃತೀಯ-ಬೆಮೆಲ್ ಸಂಯುಕ್ತ ಪಿಯು ಕಾಲೇಜಿನ ರಾಘವೇಂದ್ರ ಆಚಾರ್ಯ ಮತ್ತು ಚಿನ್ಮಯ ವಿದ್ಯಾಲಯದ ಸ್ನೇಹಾ ನಾಯರ್ ಆಯ್ಕೆಯಾಗಿ ಬಹುಮಾನ ಪಡೆದರು.
ಸಂಚಾರಿ ನಿಯಮ ಉಲ್ಲಂಘನೆ: ದಂಡ
ಚಿಂತಾಮಣಿ: ಸಂಚಾರಿ ನಿಯಮ ಗಾಳಿಗೆ ತೂರಿದ ಖಾಸಗಿ ಬಸ್ ಚಾಲಕ ಹಾಗೂ ನಿರ್ವಾಹಕನಿಂದ ದಂಡ ಕಟ್ಟಿಸಿದ ನಗರಠಾಣೆ ಎಸ್ಐ ಮುರಳಿ ಕಾರ್ಯವೈಖರಿ ಬಗ್ಗೆ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರು ಓಡಾಡುವ ರಸ್ತೆಯಲ್ಲಿಯೇ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಚಾಲಕ ಹಾಗೂ ನಿರ್ವಾಹಕ ಪಾದಚಾರಿಗಳಿಗೆ ತೊಂದರೆ ನೀಡಿ ಸಂಚಾರಿ ನಿಯಮಗಳನ್ನು ಪಾಲಿಸದಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಸ್ಐ ಮುರಳಿಗೆ ದೂರು ನೀಡಿದ್ದರು. ರಸ್ತೆ ಬಳಿಯೇ ನಿಲ್ಲಿಸುತ್ತಿದ್ದ ಪರಿಣಾಮ ವಿದ್ಯಾರ್ಥಿನಿಯರು, ಮಹಿಳೆ, ವೃದ್ಧರು ಪಾದಚಾರಿಗಳಿಗೆ ಸಂಚರಿಸಲು ತೊಂದರೆಯಾಗುತ್ತಿತ್ತು. ಗುರುವಾರ ಎಸ್ಐ ಮುರಳಿ ಸಿಬ್ಬಂದಿ ಜತೆ ಸ್ಥಳಕ್ಕಾಗಮಿಸಿ ಖಾಸಗಿ ಬಾಲಾಜಿ ಬಸ್ ಚಾಲಕ ಹಾಗೂ ನಿರ್ವಾಹಕನಿಗೆ ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಲು ಎಚ್ಚರಿಸಿ 500 ರು. ದಂಡ ವಿಧಿಸಿದರು. ಸಾರ್ವಜನಿಕರ ಕುಂದು ಕೊರತೆಗಳಿಗೆ ಸ್ಪಂದಿಸಿ ನಗರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಎಸ್ಐ ಮುರಳಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

