ಗ್ರಾಮಸಭೆಗೆ ಬಂದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ
ಬಂಗಾರಪೇಟೆ: ಜನರು ಕೆಲಸ ಕಾರ್ಯಗಳಿಗೆ ವಿನಾಕಾರಣ ಕಚೇರಿಗಳಿಗೆ ಅಲೆಯುವುದನ್ನು ನಿಯಂತ್ರಿಸಲು ಗ್ರಾಮ ಸಭೆಗಳನ್ನು ಹಮ್ಮಿಕೊಳ್ಳಲಾಗಿದ್ದು ಗ್ರಾಮ ಸಭೆಗಳಲ್ಲಿ ಗ್ರಾಮಸ್ಥರು ಪಾಲ್ಗೊಂಡು ತಮ್ಮ ಗ್ರಾಮದ ಸಮಸ್ಯೆಗಳನ್ನು ಸಭೆ ಗಮನಕ್ಕೆ ತಂದು ಈಡೇರಿಸಿಕೊಳ್ಳಬೇಕು ಎಂದು ಶಾಸಕ ಎಂ. ನಾರಾಯಣಸ್ವಾಮಿ ಹೇಳಿದರು.
ಭಾನುವಾರ ತಾಲೂಕಿನ ಬೆಂಗನೂರು ಗ್ರಾಮ ಪಂಚಾಯ್ತಿಯಲ್ಲಿ ನಡೆದ ವಿಶೇಷ ಗ್ರಾಮ ಸಬೆಯಲ್ಲಿ ಗ್ರಾಮಸ್ಥರಿಂದ ಅಹವಾಲುಗಳನ್ನು ಆಲಿಸಿ ನಂತರ ಮಾತನಾಡುತ್ತಾ, ಬರಗಾಲದಲ್ಲಿ ರೈತರು ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವುಗಳನ್ನು ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ತಿಳಿಸಲು ಕಚೇರಿಗಳಿಗೆ ಪ್ರತಿದಿನ ಅಲೆಯುವುದನ್ನು ತಪ್ಪಿಸಲು ಜನರ ಬಳಿಗೆ ಎಲ್ಲಾ ಅಧಿಕಾರಿಗಳೊಂದಿಗೆ ನಿಮ್ಮ ಪಂಚಾಯ್ತಿಗೆ ಬಂದಿದ್ದೇವೆ. ನಿಮ್ಮ ಅಹವಾಲುಗಳನ್ನು ಸಲ್ಲಿಸಿ ಬಗೆಹರಿಸಿಕೊಳ್ಳಿ ಎಂದು ಹೇಳಿದರಲ್ಲದೆ ತಾವು ಪ್ರತಿ ಪಂಚಾಯ್ತಿಗೆ ಭೇಟಿ ಕೊಟ್ಟಾಗ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಬಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಆದರೆ ಈ ಪಂಚಾಯ್ತಿಯಲ್ಲಿ ಮಾತ್ರ ಜನರು ಹೆಚ್ಚಾಗಿ ಭಾಗವಹಿಸದಿರುವುದಕ್ಕೆ ಆಶ್ಚರ್ಯಗೊಂಡರು.
ಸರ್ಕಾರ ಕ್ಷೇತ್ರವನ್ನು ಗುಡಿಸಲು ಮುಕ್ತ ಕ್ಷೇತ್ರವಾಗಿ ರೂಪಿಸಲು ಹತ್ತು ಸಾವಿರ ಮನೆಗಳನ್ನು ಬಸವ ವಸತಿ ಯೋಜನೆಯಲ್ಲಿ ನೀಡಿದೆ. ಆರು ಸಾವಿರ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು ಉಳಿದಿರುವ ನಾಲ್ಕು ಸಾವಿರಕ್ಕೆ ಪ್ರತಿ ಪಂಚಾಯ್ತಿಗೆ 150 ಮನೆಗಳನ್ನು ಹಂಚಲಾಗಿದ್ದು, ಇದಕ್ಕಾಗಿ 82 ಕೋಟಿ ವೆಚ್ಚ ಮಾಡಲಾಗುತ್ತಿದೆ ಇಷ್ಟೊಂದು ಮೊತ್ತದ ಹಣವನ್ನು ಈ ಹಿಂದೆ ಯಾವ ಸರ್ಕಾರ ಸಹ ನೀಡಿಲ್ಲ ಎಂದು ತಮ್ಮ ಸರ್ಕಾರವನ್ನು ಹೊಗಳಿದರು. ಬೆಂಗನೂರು ಗ್ರಾಮದಲ್ಲಿ ಶಾಸಕರು ಕಾಮಗಾರಿಯೊಂದಕ್ಕೆ ಹಾಕಿದ್ದ ನಾಮಫಲಕವನ್ನು ಗ್ರಾಮದ ಕೆಲವರು ರಾತ್ರೋರಾತ್ರಿ ಕಿತ್ತು ಹಾಕಿರುವುದನ್ನು ಖಂಡಿಸಿ ಕೂಡಲೆ ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಪಿಡಿಒ ವೆಂಕಟೇಶ್ ಅವರಿಗೆ ಸೂಚಿಸಿದರು.
ತಾಪಂ ಅಧ್ಯಕ್ಷೆ ರೇಣುಕಾಬಾಲಚಂದ್ರ, ಪಂಚಾಯ್ತಿ ಅಧ್ಯಕ್ಷೆ ಮಂಜುಳಾ, ಕೀಲುಕುಪ್ಪ ಶ್ರೀನಿವಾಸ್, ತಾಪಂ ಸದಸ್ಯೆ ಚಂದ್ರಮ್ಮನಾಗರಾಜ್, ಉಪಾಧ್ಯಕ್ಷ ಬೈಚಪ್ಪ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

