'ವರಪ್ರಸಾದರೆಡ್ಡಿ ದಕ್ಷ, ಪ್ರಾಮಾಣಿಕ ಅಧಿಕಾರಿ'
ಗೌರಿಬಿದನೂರು: ರಾಜ್ಯ ಸರ್ಕಾರದಿಂದ ಗಣರಾಜ್ಯ ದಿನದಂದು ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆದ ಬಿ.ಎನ್. ವರಪ್ರಸಾದರೆಡ್ಡಿ ಗೌರಿಬಿದನೂರು ತಾಲೂಕಿನ ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ತನ್ನದೇ ಆದಂತಹ ಕೊಡುಗೆ ನೀಡಿದ ಹುಣಿಸೇನಹಳ್ಳಿ (ಚಿಂತಲಪಲ್ಲಿ)ಗ್ರಾಮದವರು.
ಹುಣಸೇನಹಳ್ಳಿಯಲ್ಲಿ ಜನಿಸಿದ ಬಿ.ಎನ್. ವರಪ್ರಸಾದರೆಡ್ಡಿಯವರಿಗೆ ಪ್ರಶಸ್ತಿ ದೊರಕಿರುವುದು ಉತ್ತಮ ದಕ್ಷ, ಪ್ರಾಮಾಣಿಕ ಅಧಿಕಾರಿಗೆ ಸಂದ ಗೌರವ ಎನ್ನಬಹುದು.
ಭ್ರಷ್ಟಾಚಾರ, ಸ್ವಜನಪಕ್ಷಪಾತ, ಸ್ವಾರ್ಥ ತಾಂಡವವಾಡುತ್ತಿರುವ ಇಂದಿನ ದಿನಗಳಲ್ಲಿ ಜನಸೇವೆಯೇ ಜನಾರ್ಧನ ಸೇವೆ ಎಂಬಂತೆ ದುಡಿಯುತ್ತಿರುವ ಇವರು ಗೌರಿಬಿದನೂರಿನಲ್ಲಿ ಪ್ರಾಥಮಿಕ, ಫ್ರೌಢ ಶಿಕ್ಷಣ ಹಾಗೂ ಎಇಎಸ್ ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ ಮತ್ತು ಸ್ನಾತಕೋತ್ತರ ಹಾಗೂ 98ರ ಬ್ಯಾಚ್ನಲ್ಲಿ ಕೆಎಎಸ್ ನಲ್ಲಿ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ನೊಂದಿಗೆ ಪಡೆದು ಚನ್ನರಾಯಪಟ್ಟಣ ತಹಶೀಲ್ದಾರಾಗಿ ಕಾರ್ಯನಿರ್ವಹಿಸುತ್ತಿದ್ದಾಗ 5ವರ್ಷಗಳಲ್ಲಿ 33ಲಕ್ಷ ಭೂದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಿ ಭದ್ರಪಡಿಸಿ ದೇಶದಲ್ಲೇ ಹೆಸರು ಪಡೆದವರು. ತಾಲೂಕು ಕಚೇರಿಗಳಲ್ಲಿ ದಿನನಿತ್ಯದ ಕಡತ ವಿಲೇವಾರಿ ಆದೇಶಗಳು ಮುಂತಾದವುಗಳನ್ನು ನಿರ್ವಹಿಸಲು ಹೊಸ ತಂತ್ರಾಂಶ ಆವಿಷ್ಕರಿಸಿದ ಕೀರ್ತಿಗೆ ಭಾಜನರಾಗಿದ್ದಾರೆ.
ಚನ್ನರಾಯಪಟ್ಟಣ ತಾಲೂಕು ಕಚೇರಿಯನ್ನು ಮಾದರಿ ಕಚೇರಿಯನ್ನಾಗಿ ಸರ್ಕಾರ ಘೋಷಿಸಿರುವುದು ವಿಶೇಷವಾಗಿದೆ. ಈಗ ಸರ್ಕಾರದ ಹೊಸ ಯೋಜನೆಯಾದ ಸಕಾಲ ಯೋಜನೆಗೆ ಸಹಾಯ ಕಮೀಷನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಧಾರಣ ರೈತ ಕುಟುಂಬದಿಂದ ಬಂದ ಇವರು ಈಗಲೂ ಹುಣಸೇನಹಳ್ಳಿ ಯಲ್ಲಿ ಹೆಂಚಿನ ಮನೆಯನ್ನು ಹೊಂದಿದ್ದಾರೆ. ಸರ್ವೋತ್ತಮ ಸೇವಾಪ್ರಶಸ್ತಿಯನ್ನು ಗಣತಂತ್ರ ದಿನದಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ವರಪ್ರಸಾದರೆಡ್ಡಿಗೆ ನೀಡಿ ಗೌರವಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

