'ಶಾಸಕರಿಂದ ಮುಗ್ಧರಿಗೆ ಮನೆ ಹಂಚಿಕೆ ವಂಚನೆ'
ಬಂಗಾರಪೇಟೆ: ಮನೆ ಹೀನರಿಗೆ 6000 ಮನೆಗಳನ್ನು ಹಂಚಲಾಗಿದೆ ಎಂದು ಮುಗ್ಧರನ್ನು ವಂಚಿಸುವ ಕೆಲಸ ಶಾಸಕ ಎಂ.ನಾರಾಯಣಸ್ವಾಮಿ ನಾಜೂಕಾಗಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎಸ್.ಎನ್.ನಾರಾಯಣಸ್ವಾಮಿ ಟೀಕಿಸಿದರು.ಬೂದಿಕೋಟೆ ಹಾಗೂ ಕಾಮಸಮುದ್ರ ಹೋಬಳಿ ಕೇಂದ್ರಗಳಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರಕ್ಕೆ ಒಟ್ಟು 10000 ಮನೆಗಳನ್ನು ತರಲಾಗಿದೆ. ಈಗಾಗಲೇ 6000 ಮನೆಗಳನ್ನು ಬಡವರಿಗೆ ವಿತರಣೆ ಮಾಡಲಾಗಿದೆ ಎಂದು ಎಲ್ಲಾ ಕಡೆ ಹೇಳಿಕೊಳ್ಳುತ್ತಿದ್ದಾರೆ ವಾಸ್ತವಂಶ ಏನೆಂದರೆ ಇದುವರೆಗೂ ಕೇವಲ 800 ಮನೆಗಳು ಮಾತ್ರ ಕ್ಷೇತ್ರದಲ್ಲಿ ನಿರ್ಮಾಣವಾಗಿದೆಯೆ ವಿನಃ 6000 ಎಂಬುದು ಬರೀ ಸುಳ್ಳು. ಇದು ಸಾಲದೆಂಬಂತೆ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದೆ. ಇದರಿಂದ ಇನ್ನೂ 4000 ಮನೆಗಳು ಬಂದಿದೆ. ಅರ್ಹರನ್ನು ಗುರುತಿಸಲು ತಾವೇ ಪಂಚಾಯ್ತಿಗಳಿಗೆ ಹೋಗುತ್ತಾ ಮುಗ್ಧರಿಂದ ಅರ್ಜಿಗಳನ್ನು ಸಹ ಪಡೆದುಕೊಳ್ಳುತ್ತಿರುವುದು ಹಾಸ್ಯಸ್ಪದ ಎಂದರು.
ತಾಲೂಕಿನ ಕೆರೆಗಳಿಗೆ ಹರಿಸಿ ಅಂತರ್ಜಲ ವೃದ್ಧಿಸುವುದೇ ಮೊದಲ ಕೆಲಸ ಎಂದು ಪ್ರತಿಜ್ಞೆ ಮಾಡಿದರು.
ಇದೇ ವೇಳೆ ಬೂದಿಕೋಟೆ ಮತ್ತು ಕಾಮಸಮುದ್ರ ಹೋಬಳಿಗಳಲ್ಲಿ ಹಲವು ಮಂದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

