ಕೋಲಾರ

ಶ್ರೀನಿವಾಸಗೌಡ ವಿರುದ್ಧ ಮುನಿಯಪ್ಪ ಕಿಡಿ

Published On :

ಬಂಗಾರಪೇಟೆ: ಮಾಜಿ ಸಚಿವ ಕೆ.ಶ್ರೀನಿವಾಸಗೌಡ ತಮ್ಮ ರಾಜಕೀಯ ಜೀವನದಲ್ಲೇ ಮಂತ್ರಿಯಾಗುವ ಯೋಗವಿರಲಿಲ್ಲ. ಅಂತಹವರನ್ನು ಕಾಂಗ್ರೆಸ್‌ಗೆ ಕರೆ ತಂದು ಮಂತ್ರಿ ಮಾಡಿದ ಪಕ್ಷಕ್ಕೆ ಇಂದು ದ್ರೋಹ ಬಗೆಯುವ ಕೆಲಸದಲ್ಲಿ ತೊಡಗಿದ್ದಾರೆ. ಇವರಿಗೆ ಮತದಾರರು ತಕ್ಕೆ ಪಾಠ ಕಲಿಸುವ ಕಾಲ ದೂರವಿಲ್ಲ ಎಂದು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಆರೋಪಿಸಿದರು.ತಾಲೂಕಿನ ಬೂದಿಕೋಟೆ ಮತ್ತು ಕಾಮಸಮುದ್ರ ಹೋಬಳಿ ಕೇಂದ್ರಗಳಲ್ಲಿ ಕಾಂಗ್ರೆಸ್ ಭವನ ಉದ್ಘಾಟಿಸಿ ನಂತರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಉಪ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಸಚಿವ ವರ್ತೂರು ಪ್ರಕಾಶ್ ಒಳಒಪ್ಪಂದದಿಂದ ಕಾಂಗ್ರೆಸ್ ಸೋಲಬೇಕಾಯಿತೇ ವಿನಃ ಬೇರೇ ಕಾರಣವಿಲ್ಲ. ಜೆಡಿಎಸ್ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡಿದ್ದರೆ ಮಾಜಿ ಸಚಿವ ಶ್ರೀನಿವಾಸಗೌಡ ಕಾಂಗ್ರೆಸ್ ಸುಲಭವಾಗಿ ಗೆಲುವು ಸಾಧಿಸುತ್ತಿತ್ತು. ಆದರೆ, ಗೌಡರು ಪಕ್ಷ ದ್ರೋಹ, ಕುತಂತ್ರದಿಂದಾಗಿ ಬಿಜೆಪಿ ಗೆಲ್ಲುವಂತಾಗಿತ್ತು. ಇದರ ಪರಿಣಾಮವನ್ನು ಬರುವ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಮತದಾರರು ಕಲಿಸಲಿದ್ದಾರೆ. ಶ್ರೀನಿವಾಸಗೌಡ ಅವರ ರಾಜಕೀಯ ಜೀವನ ಅಂತ್ಯವಾಗಲಿದೆ ಎಂದು ಭವಿಷ್ಯ ಹೇಳಿದರು.
ಇವರಂತೆಯೇ ಸಚಿವ ವರ್ತೂರು ಪ್ರಕಾಶ್ ಅವರೂ ಸಹ ಸಮುದಾಯಗಳ ನಡುವೆ ವಿಷ ಬೀಜ ಜಿಲ್ಲೆಯ ರಾಜಕೀಯ ಚಿತ್ರಣವನ್ನೇ ಏರುಪೇರು ಮಾಡಿ ಕಲುಷಿತಗೊಳಿಸಿದ್ದಾರೆ. ಇವರಿಗೂ ಜನರು ವರ್ತೂರಿಗೆ ಗೇಟ್ ಪಾಸ್ ನೀಡಲು ಕಾತುರದಿಂದ ಕಾಯುತ್ತಿದ್ದಾರೆ ಎಂದರು.
ಅಭ್ಯರ್ಥಿ ಎಸ್.ಎನ್. ನಾರಾಯಣಸ್ವಾಮಿ, ಪುರಸಭೆ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಬ್ಲಾಕ್ ಅಧ್ಯಕ್ಷ ಮಂಜುನಾಥ್,ಪಾರ್ಥಸಾರಥಿ, ಜಿಪಂ ಸದಸ್ಯ ಕೃಷ್ಣ, ಮಾಜಿ ಸದಸ್ಯ ಟಿ.ಮುನಿರಾಜು, ತಾಪಂ ಮಾಜಿ ಸದಸ್ಯ ಗೋವಿಂದರಾಜು, ಮುಖಂಡರಾದ ಎಸ್.ಎಂ. ಗೋಪಾಲ್, ವರದಾಂಜನೇಯಗೌಡ, ವೆಂಕಟೇಶಗೌಡ, ನಾಗವೇಣಿ, ಸದಸ್ಯ ಎಂ.ಗೋಪಿನಾಥ್ ಮತ್ತಿತರರು ಇದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.