ಕೋಲಾರ

ಕೃಷ್ಣಯ್ಯಶೆಟ್ಟಿ ಗಿಮಿಕ್ ರಾಜಕೀಯ: ನಂಜೇಗೌಡ ಆರೋಪ

Published On :

ಟೇಕಲ್: ಮಾಲೂರು ತಾಲೂಕಿನ ಜನತೆ ಭಿಕ್ಷೆ ಬೇಡುವ ಜನರಲ್ಲ, ಕಷ್ಟಪಟ್ಟು ತಾವು ಕೂಲಿ ಮಾಡಿ ಸಂಪಾದನೆ ಮಾಡಿ ಊಟ ಮಾಡುತ್ತಾರೆ. ಆದರೆ ಶಾಸಕ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಅವರು ಜನರಿಗೆ ತಟ್ಟೆ, ಕೊಟ್ಟು ಸರತಿ ಸಾಲಿನಲ್ಲಿ ಅನ್ನ ಹಾಕುವ ಕೀಳು ಸಂಸ್ಕೃತಿ ಬಿಡಲಿ ಎಂದು ತಾ.ಪಂ.ಮಾಜಿ ಅಧ್ಯಕ್ಷ ಕೆ.ವೈ.ನಂಜೇಗೌಡ ಕಿಡಿಕಾರಿದ್ದಾರೆ.
ಅವರು ತೊರಲಕ್ಕಿ ಗ್ರಾಮದಲ್ಲಿ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಳ್ಳಿಗಳಲ್ಲಿ ಕುಡಿಯುವ ನೀರು, ಮೂಲಭೂತ ಸೌಕರ್ಯಗಳು ಇಲ್ಲದೆ ಜನ ಪರಿತಪಿಸುವಂತಾಗಿದೆ. 9 ವರ್ಷದಿಂದ ಯಾವುದೆ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಕ್ರಮ ಆಗದೆ ನಿರ್ಲಕ್ಷ್ಯ ತೋರಲಾಗಿದೆ ಎಂದು ಆರೋಪಿಸಿದರು.
ಜೆಡಿಎಸ್ ಮುಖಂಡ ಮಂಜುನಾಥಗೌಡ ಮಾತನಾಡಿ,  ಶಾಸಕರು ತಾಲೂಕಿನಲ್ಲಿ ಗಿಮಿಕ್ ರಾಜಕೀಯ ಮಾಡುತ್ತಿದ್ದು, ಬಹುತೇಕ ದನ ಕರುಗಳಿಗೆ ಯಾವುದೇ ಮೇವು ಇಲ್ಲದೆ, ರೈತನಿಗೆ ನೀರಿಲ್ಲದೇ ದನಕರುಗಳು ಬಳಲುತಿವೆ ಎಂದರು. ಟೇಕಲ್‌ನಲ್ಲಿ ಜೆಡಿಎಸ್ ಅಲೆ ಉಂಟಾಗಿದೆ ಎಂದರು.  
ಕೆ.ಜಿ.ಹಳ್ಳಿ ಗ್ರಾ.ಪಂ.ನ ಹಳೇಪಾಳ್ಯ ಗ್ರಾಮದ ಮುನಿರೆಡ್ಡಿ, ವೆಂಕಟಸ್ವಾಮಿ ಹಾಗೂ ನೂರಾರು ಕಾರ್ಯಕರ್ತರು ಬಿಜೆಪಿ ತೊರೆದು ಜೆಡಿಎಸ್ ಸೇರಿದರು. ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್‌ಗೌಡ, ಜಿ.ಪಂ.ಮಾಜಿ ಸದಸ್ಯ ಹೆಚ್.ಹನುಮಂತಪ್ಪ, ಎಸ್.ಮುನಿಶಾಮಿ, ಚಿನ್ನಸ್ವಾಮಿ, ಕೆ.ಬಿ.ನಾರಾಯಣಸ್ವಾಮಿ, ಬಿ.ಜಿ.ಮುನಿಶಾಮಿಗೌಡ, ಬನಹಳ್ಳಿ ಗ್ರಾ.ಪಂ.ಮಾಜಿ ಅದ್ಯಕ್ಷ ರಾಮಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.