ಕೋಲಾರ

ಪ್ರೇಮಿಗಳ ದಿನ ವಿರೋಧಿಸಿ ಕರಪತ್ರ ಹಂಚಿಕೆ

Published On :

ಕೋಲಾರ: ಪ್ರೇಮಿಗಳ ದಿನ (ವ್ಯಾಲೆಂಟೈನ್ಸ್ ಡೇ) ಆಚರಿಸದಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿರುವ ಶ್ರೀರಾಮ ಸೇನೆ, ಯಾರಾದರೂ ಪ್ರೇಮಿಗಳ ದಿನಾಚರಣೆ ನೆಪದಲ್ಲಿ ಪಾರ್ಕ್, ಬೆಟ್ಟ ಗುಡ್ಡಗಳಲ್ಲಿ ಕಾಣಿಸಿಕೊಂಡು ಅಸಭ್ಯವಾಗಿ ವರ್ತಿಸುವುದು ಕಂಡು ಬಂದಲ್ಲಿ ಫೋಟೋ ಮತ್ತು ವಿಡಿಯೋ ಮೂಲಕ ಪೋಷಕರ ಗಮನಕ್ಕೆ ತರಲಾಗುವುದು ಎಂದು ಎಚ್ಚರಿಕೆ ನೀಡಿದೆ. ವಿದೇಶಿ ಸಂಸ್ಕೃತಿಯ ಕೊಡುಗೆಯಾದ ಪ್ರೇಮಿಗಳ ದಿನಾಚರಣೆ ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿದ್ದು ಫೆ.14 ರಂದು ವಿದ್ಯಾರ್ಥಿ ವಿದ್ಯಾರ್ಥಿನಿಯರು, ಯುವಕರು ಈ ಅನಿಷ್ಟ ಪದ್ಧತಿ ಆಚರಣೆ ಮಾಡಬಾರದೆಂದು ಶ್ರೀರಾಮ ಸೇನೆಯ ಕಾರ್ಯಕರ್ತರು ನಗರದ ವಿವಿಧ ಕಾಲೇಜುಗಳಿಗೆ ಬುಧವಾರ ಭೇಟಿ ನೀಡಿ ಕರಪತ್ರ ವಿತರಿಸಿದರು. ಪ್ರೀತಿಗೆ ನಮ್ಮ ವಿರೋಧವಿಲ್ಲ ಇಂತಹ ಪವಿತ್ರವಾದ ಪ್ರೀತಿಯನ್ನು ಪಾರ್ಕ್, ಪಬ್ಬು, ಐಸ್‌ಕ್ರೀಂಪಾರ್ಲರ್‌ಗಳು, ರೆಸ್ಟೋರೆಂಟ್, ಕಾಫಿ, ಟೀ ಅಂಗಡಿಗಳಲ್ಲಿ ರಸ್ತೆ ಬದಿಗಳಲ್ಲಿ ಪ್ರದರ್ಶನಕ್ಕೆ ಇಡುವ ಮೂಲಕ ಅಮರ ಪ್ರೇಮವನ್ನು ಅಪಮಾನ ಮಾಡುವುದು ಸರಿಯಲ್ಲವೆಂದು ಸೇನೆಯ ಮುಖಂಡರು ಮನವಿ ಮಾಡಿದರು.
ನೈತಿಕ ನೆಲಗಟ್ಟಿಲ್ಲದ ಪ್ರಣಯ-ಪ್ರೇಮ ಮತ್ತು ಉಡುಗೊರೆಗಳ ಮೂಲಕ ವ್ಯಕ್ತಪಡಿಸುವ ತೋರಿಕೆ ನಿಜವಾದ ಪ್ರೇಮವಲ್ಲ, ಪವಿತ್ರತೆ ಹಾಗೂ ಪೂಜ್ಯಳಾದ ಮಹಿಳೆಯನ್ನು ಕೇವಲ ಆಕರ್ಷಣೆ ಹಾಗೂ ಪ್ರದರ್ಶನದ, ಭೋಗದ ವಸ್ತುವನ್ನಾಗಿ ಕಾಣುವ ಇಂತಹ ಪ್ರೇಮದ ಒಂದು ದಿನದ ಪ್ರೀತಿಯನ್ನು ಧಿಕ್ಕರಿಸಬೇಕೆಂದು ತಿಳಿಸಿದ್ದಾರೆ. ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಪ್ರವೀಣ್‌ಗೌಡ, ಜಿಲ್ಲಾ ಕಾರ್ಯದರ್ಶಿ ರಮೇಶ್‌ರಾಜ್, ಜಿಲ್ಲಾ ಸಂಚಾಲಕ ಪ್ರಮೋದ್, ಸುನಿಲಲ್ಕಾರ್ಯಕರ್ತರಾದ ವರುಣ್, ನಾಗೇಶ್, ಕಾರ್ತಿಕ್, ವೆಂಕಟೇಶ್, ಕುಮಾರ್, ನರೇಶ್ ಕರಪತ್ರ ಚಳವಳಿಯಲ್ಲಿ ಇದ್ದರು.
ಓದಿನ ಜೊತೆಗೆ  ಕ್ರೀಡೆಗೂ ಒತ್ತು ನೀಡಿ
ಚಿಂತಾಮಣಿ: ವಿದ್ಯಾರ್ಥಿಗಳು ಓದಿನ ಜೊತೆಗೆ ದೈಹಿಕ ಹಾಗೂ ಮಾನಸಿವಾಗಿ ವಿಕಾಸ ಹೊಂದಲು ಕ್ರೀಡೆಗಳಲ್ಲಿಯೂ ಭಾಗವಹಿಸಬೇಕೆಂದು ಪೊಲೀಸ್ ವೃತ್ತ ನಿರೀಕ್ಷಕ ನಂಜಪ್ಪ ಕರೆ ನೀಡಿದರು. ಇಲ್ಲಿನ ಎಂ.ಸಿ.ಆಂಜನೇಯರೆಡ್ಡಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳು  ಶೈಕ್ಷಣಿಕ ಜೊತೆಗೆ ಕ್ರೀಡೆಗಳಲ್ಲಿಯೂ ಹೆಚ್ಚು ಗಮನ ಹರಿಸಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಅಭಿವೃದ್ಧಿ ಹೊಂದಲು ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಿ.ರಂಗಯ್ಯ ಮಾತನಾಡಿ, ಕನ್ನಡ ಭಾಷೆಗೆ ಪ್ರಥಮ ಪ್ರಾಶಸ್ಯ ನೀಡಿ ಕನ್ನಡ ಶಾಲೆಗಳನ್ನು ಉಳಿಸಿ ಬೆಳಸಬೇಕೆಂದು ಹೇಳಿದರು.  ಸಂಸ್ಥೆ ಅಧ್ಯಕ್ಷೆ ಡಿ.ಎನ್.ನಾಗರತ್ನ, ಜಿ.ಎಸ್.ಶಿವಪ್ರಸಾದ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.