ಕೋಲಾರ

ನಾಯಿ ಕಡಿದಿದ್ದ ಬಾಲಕಿ ಸಾವು: ಶವವಿಟ್ಟು ಪ್ರತಿಭಟನೆ

Published On :

ಮಾಲೂರು:  ಬೀದಿ ನಾಯಿ ಕಡಿತದಿಂದ ಬಾಲಕಿ ಮೃತಪಟ್ಟಿದ್ದರಿಂದ ಆಕ್ರೋಶಗೊಂಡ ಪೋಷಕರು ಮತ್ತು ಸಾರ್ವಜನಿಕರು ಸ್ಥಳೀಯ ಪುರಸಭೆ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪಿಸಿ ಶವವಿಟ್ಟು ಪ್ರತಿಭಟಿಸಿದ ಘಟನೆ ಗುರುವಾರ ನಡೆಯಿತು.
ಪಟ್ಟಣದ ಹನುಮಂತನಗರದ ನಿವಾಸಿ ಸುಜಾತಮ್ಮಳ ಒಬ್ಬಳೇ ಮಗಳಾದ 7 ವರ್ಷದ ಪುಷ್ಪಾ ವಿವೇಕಾನಂದ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದಳು. ಫೆ.2ರಂದು ಮನೆ ಮುಂದೆ ಆಟವಾಡುತ್ತಿದ್ದಾಗ ನಾಯಿಯ ಧಾಳಿಗೆ ಸಿಲುಕ್ಕಿದ್ದಳು. ನಾಯಿ ಪುಷ್ಪಾಳ ಮುಖ, ಕುತ್ತಿಗೆಗೆ ಕಚ್ಚಿ ಗಾಯಗೊಳಿಸಿತ್ತು. ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ವತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಯೆ ಫಲಕಾರಿಯಾಗದೆ ಗುರುವಾರ ಬಾಲಕಿ ಸಾವನ್ನಪ್ಪಿದ್ದಾಳೆ. ಪುರಸಭೆ ನಿರ್ಲಕ್ಷದಿಂದ ಹೆಚ್ಚಾಗಿರುವ ನಾಯಿಗಳಿಂದ ಪುಷ್ಪಾ ಮೃತಪಟ್ಟಿದ್ದಾಳೆ. ಪರಿಹಾರ ಜೊತೆಯಲ್ಲಿ ಪಟ್ಟಣದಲ್ಲಿ ನಾಯಿಗಳ ಹಾವಳಿ ನಿಯಂತ್ರಿಸಬೇಕೆಂದು ಆಗ್ರಹಿಸಿ ಮೃತ ಬಾಲಕಿಯ ತಾಯಿ ಹಾಗೂ ಹನುಮಂತನಗರ ನಿವಾಸಿಗಳು ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಮೃತಳ ಕುಟುಂಬಕ್ಕೆ ಪರಿಹಾರ ನೀಡಬೇಕು.  1 ವರ್ಷದಿಂದ ಮನವಿ ಮಾಡುತ್ತಿದ್ದರೂ ನಾಯಿಗಳನ್ನು ನಿಯಂತ್ರಿಸಲು ವಿಫಲರಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅಗ್ರಹಿಸಿದರು.
ಮೃತ ಬಾಲಕಿಯ ತಾಯಿಯನ್ನು ಸಮಾಧಾನಪಡಿಸಿದ ಮುಖ್ಯಾಧಿಕಾರಿ ಸುಬ್ರಮಣಿ 2000 ಚೆಕ್‌ನ್ನು ಪುರಸಭೆ ವತಿಯಿಂದ ನೀಡಲಾಗುವುದು. ಜೊತೆಯಲ್ಲಿ ನಾಳೆಯಿಂದಲೇ ನಾಯಿಗಳನ್ನು ಹಿಡಿಯುವ ಕಾರ್ಯಾಚರಣೆ ಪ್ರಾರಂಭಿಸಲಾಗುವುದು. ಹೆಚ್ಚಿನ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗೆ ಬಾಲಕಿ ಸಾವಿನ ಬಗ್ಗೆ ವರದಿ ಕಳುಹಿಸಿ ಸರ್ಕಾರದಿಂದ ಇನ್ನಷ್ಟು ಪರಿಹಾರ ಕ್ರಮಕ್ಕೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಸ್ಥಳೀಯ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಮಂಜುನಾಥ್ ಗೌಡ ಮೃತ ಬಾಲಕಿಯ ತಾಯಿ ಸುಜಾತಮ್ಮ ಅವರಿಗೆ 2000 ಪರಿಹಾರಧನ ನೀಡಿದರು. ಹನುಮಂತನಗರದ ಮುಖಂಡ ಮುನಿನಾರಾಯಣಪ್ಪ, ಪುರಸಭೆ ಮಾಜಿ ಸದಸ್ಯ ಪ್ರದೀಪ್ ರೆಡ್ಡಿ, ಕರವೇ ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.