ಕೋಲಾರ

ವರ್ತೂರ್ ಹೇಳಿಕೆ ಮೂರ್ಖತನದ್ದು: ಶ್ರೀನಿವಾಸಗೌಡ

Published On :

ಕೋಲಾರ:  ಕೋಲಾರ ಕ್ಷೇತ್ರದಲ್ಲಿ ಸೋತವರು ಮತ್ತೆ ಗೆಲ್ಲುವುದಿಲ್ಲ ಎಂದು ಸಚಿವ ವರ್ತೂರ್ ಪ್ರಕಾಶ್ ಹೇಳಿರುವುದು ಮುರ್ಖತನದ ಪರಮಾವಧಿ. ಕೋಲಾರಮ್ಮ ದೇವಿಯ ಆಶೀರ್ವಾದದಿಂದ ಮೂರು ಬಾರಿ ಶಾಸಕ, ಸಚಿವನಾಗಿ ಜನರ ಸೇವೆ ಮಾಡಿದ್ದೇನೆ. ಮುಂದಿನ ಚುನಾವಣೆಯಲ್ಲಿ ಗೆಲ್ಲುವ ನಿರೀಕ್ಷೆಯಿದೆ ಎಂದು ಮಾಜಿ ಸಚಿವ ಕೆ.ಶ್ರೀನಿವಾಸಗೌಡ ತಿಳಿಸಿದರು.
ತಮ್ಮ ನಿವಾಸದಲ್ಲಿ ಶನಿವಾರ ವರ್ತೂರು ಬಣದಿಂದ ಕಳೆದ ಸಾರಿ 22ನೇ ವಾರ್ಡಿನಿಂದ ನಗರಸಭೆಗೆ ಆಯ್ಕೆಯಾಗಿದ್ದ ಹವೇಲಿ ಮೊಹಲ್ಲಾದ ನಸ್ರೀನ್ ತಾಜ್ ಈ ಬಾರಿ ಟಿಕೆಟ್ ಸಿಗದೆ ಬೇಸತ್ತು ಜೆಡಿಎಸ್ ಸೇರ್ಪಡೆಯಾದ ಸಂದರ್ಭ ಮಾತನಾಡಿದ ಶ್ರೀನಿವಾಸಗೌಡರು, ತಾವು ಕಳೆದ ಬಾರಿ ಸೋಲುವುದಕ್ಕೆ ಕೋಲಾರಮ್ಮನ ಅಪಕೃಪೆ ಕಾರಣವಲ್ಲ. ಕಾಂಗ್ರೆಸ್ ಸೇರಿದ್ದರಿಂದ ತಪ್ಪಾಯಿತು ಎಂದರು.
ರಾಜಕಾರಣದಲ್ಲಿ ಸೋಲು ಗೆಲುವು ಇದ್ದದ್ದೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅಂತಹ ಮಹಾನ್ ನಾಯಕರೂ ಚುನಾವಣೆಯಲ್ಲಿ ಸೋತಿದ್ದರು. ರಾಜಕಾರಣದಲ್ಲಿ ಕುರ್ಚಿ ಹಿಡಿದುಕೊಂಡು ಯಾರೂ ಕೂರಲು ಸಾಧ್ಯವಿಲ್ಲ. ಜನರ ಆಶೀರ್ವಾದವೊಂದಿದ್ದರೆ ಏನು ಬೇಕಾದರೂ ಆಗಬಹುದು ಎಂದು ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.
ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ನಸ್ರೀನ್ ತಾಜ್ ಮಾತನಾಡಿ, ಕಳೆದ ಐದು ವರ್ಷಗಳಿಂದಲೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಆದರೆ, ಸಚಿವರು ನನಗೆ ಮೋಸ ಮಾಡಿದ್ದಾರೆ. ಅಧಿಕಾರ ಇದ್ದಾಗ ಅವರ ಕಣ್ಣಿಗೆ ಜನರೇ ಕಾಣುವುದಿಲ್ಲ.
ಹಣ ಮತ್ತು ರೌಡಿಯಿಸಂ ಮಾಡುವವರಿಗೆ ಈ ಬಾರಿ ಚುನಾವಣೆಯಲ್ಲಿ ಅವಕಾಶ ಮಾಡಿಕೊಟ್ಟಿರುವುದು ದುರಾದೃಷ್ಟಕರ. ಇವರೆಲ್ಲಾ ನಗರಸಭೆಗೆ ಆಯ್ಕೆಯಾಗಿ ಬಂದರೆ ನಗರಸಭೆ ಸಂಪೂರ್ಣ ನಾಶವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಸಂದರ್ಭ ಜೆಡಿಎಸ್ ಮುಖಂಡರಾದ ಇಬ್ರತ್ ವುಲ್ಲಾಖಾನ್, ಮುದುವಾಡಿ ಮಂಜು, ಅಜೀಜ್ ಬೇಗ್, ಸೀಪುರ್ ಅಕ್ರಂ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.