ಇಂದು ಚೌಡೇಶ್ವರಿದೇವಿ ಜಾತ್ರೆ
ಮುಳಬಾಗಲು: ತಾಲೂಕಿನ ಮಂಡಿಕಲ್ ಗ್ರಾಮದ ಪ್ರಸನ್ನ ಚೌಡೇಶ್ವರಿ ಜಾತ್ರೆ ಫೆ.25ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೊತ್ತೂರು ಮಂಜುನಾಥ್ ಅಭಿಮಾನಿಗಳ ಬಳಗದ ವತಿಯಿಂದ ಕಬಡ್ಡಿ ಮತ್ತು ವಾಲಿಬಾಲ್ ಸ್ಪರ್ಧೆಏರ್ಪಡಿಸಲಾಗಿದೆ ಎಂದು ಬಳಗದ ಮುಖಂಡ ಮಂಡಿಕಲ್ ಎಂ.ಎಸ್. ವೆಂಕಟಾಚಲಪತಿಗೌಡ ತಿಳಿಸಿದ್ದಾರೆ. ಕಬಡ್ಡಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 20000, ದ್ವಿತೀಯ ಬಹುಮಾನ 15000, ತೃತೀಯ ಬಹುಮಾನ 10000 ಮತ್ತು 4ನೇ ಬಹುಮಾನವಾಗಿ 5000 ಘೋಷಿಸಲಾಗಿದೆ. ವಾಲಿಬಾಲ್ ಸ್ಪರ್ಧೆಗೆ ಪ್ರಥಮ ಬಹುಮಾನ 10000, 2ನೇ ಬಹುಮಾನ 5000 ಮತ್ತು 3ನೇ ಬಹುಮಾನ 3000 ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ..
ಪಿಸಿಎಆರ್‌ಡಿ ನಿಯೋಗ ಗುಡಿಬಂಡೆಗೆ
ಮುಳಬಾಗಲು: ತಾಲೂಕಿನ ಪಿಸಿಎಆರ್‌ಡಿ ಬ್ಯಾಂಕಿನ ಆಡಳಿತ ಮಂಡಳಿಯ ತಂಡ ಅಧ್ಯಕ್ಷ ಎಂ.ಸಿ.ನೀಲಕಂಠೇಗೌಡ ರವರ ನೇತೃತ್ವದಲ್ಲಿ ಶನಿವಾರ ಗುಡಿಬಂಡೆ ಪಟ್ಟಣದ ಪಿಸಿಎಆರ್‌ಡಿ ಬ್ಯಾಂಕ್‌ಗೆ ಭೇಟಿ ನೀಡಿ ಬ್ಯಾಂಕಿನಲ್ಲಿ ಜಾರಿಗೆ ತರಲಾಗಿರುವ ಅಂತರ್ಜಾಲದ ಮೂಲಕ ನಿತ್ಯಾನಂದ ನಿಧಿ ಠೇವಣೆ ಸಂಗ್ರಹಿಸುವುದನ್ನು ಪರಿಶೀಲಿಸಿದರು. ಬ್ಯಾಂಕ್ ವ್ಯವಸ್ಧಾಪಕ ಶ್ರೀನಿವಾಸ್ ರವೀಂದ್ರನಾಥ್ ಠೇವಣೆ ಸಂಗ್ರಹ ವಿವರಿಸಿದರು. ಈ ಸಂದರ್ಭ ನೀಲಕಂಠೇಗೌಡರು ಮಾತನಾಡಿ, ರಾಜ್ಯದಲ್ಲಿಯೆ ಪ್ರಥಮ ಸ್ಧಾನದಲ್ಲಿದ್ದು, ಮಾದರಿ ಬ್ಯಾಂಕ್ ಆಗಿದೆ. ಸರ್ಕಾರಿ ನೌಕರರಿಗೆ ಸಾಲ ನೀಡುವ ಯೋಜನೆ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ. ನಿಯೋಗದಲ್ಲಿ ಉಪಾಧ್ಯಕ್ಷ ಗಟ್ಟಪ್ಪ, ನಿರ್ದೇಶಕರಾದ ಉತ್ತನೂರು ಶ್ರೀನಿವಾಸ್, ಜಿ.ಹನುಮಂತರೆಡ್ಡಿ, ಶ್ರೀನಿವಾಸ್ ಮುಂತಾದವರು ಭಾಗವಹಿಸಿದ್ದರು.
ಇಡಗೂರಿನಲ್ಲಿ ಹೋಮ
ಗೌರಿಬಿದನೂರು: ತಾಲೂಕಿನ ಇಡಗೂರಿನಲ್ಲಿ ಶ್ಯಾನಭೋಗರ ವಂಶಸ್ಥರಿಂದ ಲೋಕ ಕಲ್ಯಾಣಕ್ಕಾಗಿ ವಿಜೃಂಭಣೆಯಿಂದ ಮೃತ್ಯುಂಜಯ ಹೋಮ, ಗಣಪತಿ ಹೋಮ, ಸುಬ್ರಹ್ಮಣ್ಯ ಹೋಮ, ನವಗ್ರಹ ಹೋಮಗಳು ನೆರವೇರಿತು. ಶ್ಯಾನಭೋಗರ ವಂಶಸ್ಥರು ಒಟ್ಟುಗೂಡಿ ಈ ದೈವಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಯಲಹಂಕದಲ್ಲಿ ನೆಲೆಸಿರುವ ಗೋಪಾಲಕೃಷ್ಣರಾವ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಹಳೇ, ಭಿನ್ನವಾದ ನಾಗರಶಿಲೆಗಳನ್ನು ತೆಗದು ಹೊಸದಾಗಿ ನಾಗಪ್ರತಿಷ್ಠೆ ಮಾಡಿಲಾಯಿತು. 3ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗ್ರಾಮದ ರಾಜ ಬೀದಿಗಳಲ್ಲಿ ರಾಮ, ಲಕ್ಷ್ಮಣ, ಸೀತೆ, ಆಂಜನೇಯ, ವೆಂಕಟರಮಣಸ್ವಾಮಿ, ಮೈಲಾರ ಲಿಂಗೇಶ್ವರನ ವಿಗ್ರಹಗಳನ್ನು ಮೆರವಣಿಗೆ ಮಾಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

