ಕೋಲಾರ

ಯಶಸ್ಸಿಗೆ ಜ್ಞಾನಾರ್ಜನೆ ಅವಶ್ಯ: ವಿಶ್ವನಾಥ್

Published On :

ಮಾಲೂರು:  ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಜ್ಞಾನಾರ್ಜನೆ ಮುಖ್ಯ ಎಂದು ಕೋಲಾರ ಜಿಲ್ಲಾಧಿಕಾರಿ ಡಾ. ಡಿ.ಎಸ್. ವಿಶ್ವನಾಥ್ ಹೇಳಿದರು.
ಪಟ್ಟಣದ ಹೊರವಲಯದ ಗುಡ್ನಹಳ್ಳಿ ರಸ್ತೆಯ ಬಾಪೂಜಿ ವಿದ್ಯಾ ಸಂಸ್ಥೆ ಬುಧವಾರ ಆಯೋಜಿಸಿದ್ದ 13ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಶ್ರಮ, ಏಕಾಗ್ರತೆ ಹಾಗೂ ಗುರಿ ಹೊಂದಿದ್ದಾಗ ಮಾತ್ರ ವಿದ್ಯಾರ್ಥಿ ಭವಿಷ್ಯದಲ್ಲಿ ಸಾಧನೆ ಮಾಡಲು ಸಾಧ್ಯ. ಉತ್ತಮ ಜೀವನ ಸಾಧಿಸಬೇಕಾದರೆ ವಿದ್ಯಾಭ್ಯಾಸದ ಜೊತೆಯಲ್ಲಿ ಜೀವನ ಕೌಶಲ್ಯ ಪಡೆಯಬೇಕು ಎಂದರು.
ವಿದ್ಯಾರ್ಥಿಗಳಲ್ಲಿ ಹೆಚ್ಚು ಆಲಿಸುವ ಪ್ರವೃತ್ತಿ ಬರಬೇಕು.  ಅವರಲ್ಲಿ ಆತ್ಮವಿಶ್ವಾಸ ಕುಂದಿಸುವ ವಾತಾವರಣ ಸೃಷ್ಟಿಯಾಗದಂತೆ ಪೋಷಕರು- ಶಿಕ್ಷಕರು ನೋಡಿಕೊಳ್ಳಬೇಕು. ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸಬೇಕು ಎಂದ ಜಿಲ್ಲಾಧಿಕಾರಿಗಳು, ಸೃಜನಶೀಲತೆ ಮೂಲಕ ಕುಟುಂಬ-ರಾಷ್ಟ್ರ ಅಭಿವೃದ್ಧಿಪಡಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡಬೇಕಾದ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಮಕ್ಕಳಿಗೆ ಸಹಾನುಭೂತಿ ತೋರುವ ಬದಲು ಇಂದಿನ ಸಮಾಜ ಅನುಭೂತಿ ತೋರಬೇಕು. ಸಮಾನತೆಯ ಸಮಾಜ ನಿರ್ಮಿಸಲು ಸಹಕರಿಸಬೇಕು ಎಂದರು.
ಮಾಜಿ ಶಾಸಕ ಎ.ನಾಗರಾಜ್, ಕಾರ್ಲ್ ಮಾರ್ಕ್ಸ್ ಸೇರಿದಂತೆ ಅನ್ಯ ದೇಶಿ ಮಹನೀಯರ ನೀತಿಯಂತೆ ಇರುವ ನಮ್ಮ ಶಿಕ್ಷಣ ವ್ಯವಸ್ಥೆ ಇಂದು ಗಾಂಧೀಜಿ ಅವರ ಚಿಂತನೆಯಂತೆ ಬದಲಾಗಬೇಕಾಗಿದೆ ಎಂದರು.
ಖ್ಯಾತ ಹಾಸ್ಯ ಸಾಹಿತಿ ಎಂ.ಎಸ್. ನರಸಿಂಹಮೂರ್ತಿ ತಮ್ಮ ಹಾಸ್ಯ ಮಿಶ್ರಿತ ಭಾಷೆಯಲ್ಲಿ ವಿದ್ಯಾರ್ಥಿಗಳನ್ನು ರಂಜಿಸಿದರು. ಮಾಜಿ ಸಚಿವ ಎಚ್.ಎಂ. ರೇವಣ್ಣ, ನಿವೃತ್ತ ಜಿಲ್ಲಾ ಅರಣ್ಯಾಧಿಕಾರಿ ಆಂಜಿನಪ್ಪ, ಅಂಜನಿ ಸೋಮಣ್ಣ, ಕಸಾಪ ಅಧ್ಯಕ್ಷ ಎ.ಅಶ್ವತ್ಥ್‌ರೆಡ್ಡಿ, ಜಿಲ್ಲಾ ಅಬಕಾರಿ ಉಪಅಧೀಕ್ಷಕ ರಂಗಪ್ಪ, ವೆಂಕಟಸ್ವಾಮಿ ರೆಡ್ಡಿ, ಆರ್.ವೆಂಕಟೇಶ್, ಕೆ.ಆರ್. ರುದ್ರಪ್ಪ, ಸಂಸ್ಥೆಯ ಅಧ್ಯಕ್ಷ ಎಂ.ವಿ. ಹನುಮಂತಯ್ಯ, ಮುಖ್ಯೋಪಾಧ್ಯಾಯ ಬಿ.ಸಿ. ವೆಂಕಟರಮಣ ಇದ್ದರು. ಸಂಸ್ಥೆಯ ಪಿ.ವೆಂಕಟೇಶ್ ಸ್ವಾಗತಿಸಿದರು.
ಶಿಕ್ಷಕ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.