ದಲಿತರ ಸಮಸ್ಯೆಗಳ ನಿವಾರಣೆಗೆ ಒತ್ತಾಯಿಸಿ ಧರಣಿ
ಕ.ಪ್ರ. ವಾರ್ತೆ , ಕೋಲಾರ , ಜು.1
ಜಿಲ್ಲೆಯಲ್ಲಿನ ಪರಿಶಿಷ್ಟ ಜಾತಿಗೆ ಸೇರಿದವರ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಒತ್ತಾಯಿಸಿ ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸೋಮವಾರ ಧರಣಿ ನಡೆಯಿತು.
ಸಮಿತಿಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡು ರಾಜ್ಯದಲ್ಲೇ ಅತಿ ಹೆಚ್ಚು ಸಂಖ್ಯೆಯಲ್ಲಿ ದಲಿತರು ಜಿಲ್ಲೆಯಲ್ಲಿದ್ದು ಸಮಸ್ಯೆಗಳು ನಿವಾರಣೆ ಮಾಡಲು ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ನೀಡುತ್ತಿಲ್ಲವೆಂದು ಆರೋಪಿಸಿದರು.
ಜಿಲ್ಲೆಯ ಐದು ತಾಲೂಕುಗಳಲ್ಲಿ ಸುಮಾರು 10-15 ವರ್ಷಗಳಿಂದ 2500ಕ್ಕೂ ಹೆಚ್ಚು ದಲಿತರು ಜಮೀನು ಮಂಜೂರಾತಿಗಾಗಿ ನಮೂನೆ 50 ಮತ್ತು 53 ನ್ನು ಸಲ್ಲಿಸಿ ಸಾಗುವಳಿ ಚೀಟಿಗಾಗಿ ಕಾಯುತ್ತಿದ್ದು ಸರ್ಕಾರ ಶಾಸಕರ ನೇತೃತ್ವದಲ್ಲಿ ಭೂ ಸಕ್ರಮಾತಿ ಸಮಿತಿ ರಚಿಸಿ ಸಾಗುವಳಿದಾರರಿಗೆ ನ್ಯಾಯ ಒದಗಿಸಬೇಕು, ಆಹಾರ ಪಡಿತರ ಚೀಟಿ ವಿತರಣೆಯಲ್ಲಿ ಹೊಸ ಆದೇಶದಿಂದ ಅಧಿಕಾರಿಗಳು ಕೇಳಿದ ನಾಲ್ಕು ದಾಖಲಾತಿಗಳು ಒದಗಿಸಲಾಗದೆ ಪ್ರತಿ ನಿತ್ಯ ತಹಸೀಲ್ದಾರ್ ಕಚೇರಿ, ಜಿಲ್ಲಾಧಿಕಾರಿಗಳ ಕ:ಕೇರಿಗೆ ಅಲೆಯುವಂತಾಗಿರುವುದರಿಂದ ಹಳೆ ಕಾರ್ಡ್ ಹೊಂದಿರುವ ಎಲ್ಲರಿಗೂ ಬಿ.ಪಿ.ಎಲ್. ಕಾರ್ಡ್ ವಿತರಣೆ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪಿ.ಟಿ.ಸಿ.ಎಲ್. ಕೇಸುಗಳಿಂದ ದಲಿತರಿಗೆ ದಕ್ಕಿದ ಜಮೀನುಗಳಿಗೆ ಪ್ರವೇಶ ಮಾಡಲು ಕಂದಾಯ ಅಧಿಕಾರಿಗಳ ಜೊತೆ ಪೊಲೀಸ್ ಇಲಾಖೆಯು ಸಕ್ರಿಯವಾಗಿ ಭಾಗವಹಿಸಿ ಭೂಮಿಯನ್ನು ಬಿಡುಗಡೆಗೊಳಿಸಬೇಕೆಂಬ ನಿಯಮವಿದೆ. ಆದರೆ ಈ ಜಿಲ್ಲೆಯಲ್ಲಿ ನಿಯಮ ಪಾಲಿಸದ ಕಾರಣ ಸರ್ಕಾರ ಕ್ರಮ ಕೈಗೊಳ್ಳಬೇಕು,ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಆಹಾರ ಪೂರೈಕೆ ಮಾಡುವ ಎನ್.ಸಿ.ಸಿ.ಎಫ್ ನಿಲಯಕ್ಕೆ ಆಹಾರ ಸರಬರಾಜು ಮಾಡದೇ ಆಯಾ ಕ್ಷೇಮ ಪಾಲಕರಿಗೆ ತಿಂಗಳ ವ್ಯವಹಾರಕ್ಕಾಗಿ 5 ರಿಂದ 10 ಸಾವಿರ ಮಾತ್ರ ಹಣ ಕೊಟ್ಟು ಹಾಸ್ಟೆಲ್ ವ್ಯವಸ್ಥೆ ಸಂಪೂರ್ಣವಾಗಿ ಹದಗೆಡಲು ಕಾರಣವಾಗಿರುವುದರಿಂದ ಕೂಡಲೇ ಸಮಸ್ಯೆ ನಿವಾರಣೆ ಮಾಡುವಂತೆ ಒತ್ತಾಯಿಸಿದರು.
ಜಿಲ್ಲೆಯಾದ್ಯಂತ ದಲಿತರ ಸ್ಮಶಾನ ವಿಚಾರದಲ್ಲಿ ಪದೇ ಪದೇ ದಲಿತರಿಗೂ ಮತ್ತು ಸವರ್ಣೀಯರಿಗೂ ಗಲಾಟೆಗಳು ಮರುಕಳಿಸುತ್ತಿವೆ. ಇದಕ್ಕೆ ಶಾಶ್ವತ ಪರಿಹಾರವೆಂದರೆ ಪ್ರತಿಯೊಂದು ತಾಲೂಕಿನಲ್ಲಿ ಆಯಾ ಹಳ್ಳೀಯ ದಲಿತರ ಸ್ಮಶಾನವನ್ನು ಸರ್ವೆಮಾಡಿ ನಕ್ಷೆ ನಿಗದಿಮಾಡಬೇಕು. ಮತ್ತು ಆ ಹಳ್ಳಿಯಲ್ಲಿ ದಲಿತರಿಗೆ ಸ್ಮಶಾನ ಇಲ್ಲವೆಂದರೆ ಜಿಲ್ಲಾಡಳಿತವೇ ಅದನ್ನು ಖರೀದಿಸಿ, ಸ್ಮಶಾನಕ್ಕಾಗಿ ಕಾಯ್ದಿರಿಸಬೇಕು ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ದಲಿತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ತಪ್ಪಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ದಲಿತ ಸಂಘಟನೆಯ ಮುಖಂಡರಾದ ಗಂಗಾಧರಪ್ಪ, ನಾಗನಾಳ ಮುನಿಯಪ್ಪ, ರೋಜರಪಲ್ಲಿ ವೆಂಕಟರವಣ, ಮುನಿಚೌಡಪ್ಪ, ರಮಣ ಕುಮಾರ್, ಮದನಹಳ್ಳಿ ವೆಂಕಟೇಶ್ ಹಾಗೂ ಗೋವಿಂದರಾಜು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

