'ಪ್ರಾಮಾಣಿಕ ಕಾರ್ಯ ನಿರ್ವಹಿಸಿದ ತೃಪ್ತಿ ಇದೆ'
ಚಿಂತಾಮಣಿ: ಸರ್ಕಾರಿ ಸೇವೆಯಿಂದ ಕಪ್ಪುಚುಕ್ಕೆಯಿಲ್ಲದೆ ನಿವೃತ್ತಿ ಹೊಂದುವುದು ಪೂರ್ವಜನ್ಮದ ಪುಣ್ಯದ ಕೆಲಸವೆಂದು ಭಾವಿಸಿದ್ದೇನೆಂದು ಶ್ರೀನಿವಾಸಪುರ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಎ.ಆರ್. ರಾಜಕುಮಾರ್ ಚೌದರಿ ಹೇಳಿದರು. ಅವರು ಪಟ್ಟಣದ ಫಿಲ್ಟರ್ಬೆಡ್ ಬಳಿ ಇರುವ ತಮ್ಮ ಮನೆಯಲ್ಲಿ ವಿವಿಧ ತಾಲೂಕು ಸರ್ಕಾರಿ ಸಂಘ, ಸಂಸ್ಥೆಗಳಿಂದ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದರು. ಾಜ್ಯದ ವಿವಿಧ ಪ್ರದೇಶಗಳಲ್ಲಿ ಸಕ್ರಿಯವಾಗಿ ಹಾಗೂ ಪ್ರಾಮಾಣಿಕವಾಗಿ ಹಾಲು ಉತ್ಪಾದಕ ಸದಸ್ಯರ ಹಾಗೂ ರೈತರಿಗೆ ದೊರೆಯುವಂತಹ ಸರ್ಕಾರದ ಸೌಲತ್ತುಗಳ ಬಗ್ಗೆ ಅರಿವು ಮೂಡಿಸಿ ಜನರಿಗೆ ಉತ್ತಮ ಸೇವೆ ಸಲ್ಲಿಸಿರುವ ತೃಪ್ತಿ ನನಗಿದೆಯೆಂದು ಹೇಳಿದರು. ನಂತರ ಮಾತನಾಡಿದ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಆರ್. ವೆಂಕಟರಮಣಾರೆಡ್ಡಿ ಮಾತನಾಡಿ, ಎ.ಆರ್. ರಾಜಕುಮಾರ್ ಚೌದರಿ ಸೇವೆ ಬಗ್ಗೆ ಶ್ಲಾಘಿಸಿದರು. ತಾಲೂಕು ಸರ್ಕಾರಿ ಗೃಹ ನಿರ್ಮಾಣ ನೌಕರರ ತಾಲೂಕು ಅಧ್ಯಕ್ಷ ಪ್ರಕಾಶರೆಡ್ಡಿ, ಸದಸ್ಯರಾದ ಲಕ್ಷ್ಮಿರೆಡ್ಡಿ, ಗಂಗುಲಪ್ಪ, ತಾಲೂಕು ವಕ್ಕಲಿಗರ ಸಂಘದ ಮಹದೇವರೆಡ್ಡಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

