'ಸವಲತ್ತು ಸದುಪಯೋಗ ಪಡೆದು ಆರ್ಥಿಕ ಲಾಭ ಗಳಿಸಿ'
ಕ.ಪ್ರ. ವಾರ್ತೆ , ಕೋಲಾರ , ಜು.2
ಬ್ಯಾಂಕುಗಳು ನೀಡುವ ಸಾಲಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಲಾಭವನ್ನು ಗಳಿಸಬೇಕು. ಅದೇ ರೀತಿ ಸಾಲವನ್ನು ಪಡೆದುಕೊಳ್ಳುವಾಗ ಹೊಂದಿರುವ ಭಾವನೆಯಲ್ಲಿ ಸಾಲವನ್ನು ಮರು ಪಾವತಿ ಮಾಡಬೇಕೆಂದು ಎಸ್ಬಿಎಂನ ಕೋಲಾರದ ವ್ಯವಸ್ಥಾಪಕ (ಎಜಿಎಂ) ವಾಸು ಸಲಹೆ ನೀಡಿದರು.
ತಾಲೂಕಿನ ಮೈಲಪ್ಪನಲ್ಲಿ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸ್ಟೇಟ್ ಬ್ಯಾಂಕ್ ೈಸೂರು ಮುದ್ದೇನಹಳ್ಳಿ ಶಾಖೆ ಮತ್ತು ಲಯನ್ಸ್ ಕ್ಲಬ್ ಆಯೋಜಿಸಿದ್ದ ಜೈ ಕಿಸಾನೆ ರೈತ ಕೂಟ ಉದ್ಘಾಟನೆ ಮತ್ತು ಸ್ವಸಹಾಯ ಗುಂಪುಗಳಿಗೆ ಸಾಲ ಮತ್ತು ಶಾಲೆಗೆ ಫ್ಯಾನ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಸಸ್ಬಿಎಂ ಬ್ಯಾಂಕ್ 1913 ರಲ್ಲಿ ಅಕ್ಟೋಬರ್ 2 ರಂದು ಪ್ರಾರಂಭವಾಗಿದ್ದು ಇನ್ನೂ 3 ತಿಂಗಳಲ್ಲಿ ಶತಕವನ್ನು ಪೂರೈಸಲಿದೆ. ಈ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮವನ್ನು ಆಯೋಜಿಸಲು ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಎಸ್ಬಿಎಂ ಬ್ಯಾಂಕ್ ವಿಮೆಯ ರೂಪದಲ್ಲಿ ಆರೋಗ್ಯಕ್ಕೆ, ಸಾಲದ ವ್ಯಾಪಾರಗಳಿಗೆ ಮತ್ತು ವ್ಯವಸಾಯಕ್ಕೆ ಆರ್ಥಿಕ ನೆರವನ್ನು ಒದಗಿಸುತ್ತಿದೆ. ಯಾವುದೇ ಭದ್ರತೆ ಇಲ್ಲದೆ 4 ಲಕ್ಷ ರು. ಸಾಲ ಮತ್ತು ಶಿಕ್ಷಣಕ್ಕೆ 7 ಲಕ್ಷ ರೂಗಳ ಭದ್ರತೆ ಸಾಲ, ಹೊರ ದೇಶದಲ್ಲಿ ಶಿಕ್ಷಣವನ್ನು ಪಡೆಸಲು 20 ಲಕ್ಷ ರು. ಸಾಲ ಕೊಡುತ್ತದೆ ಎಂದರು.
ಬೃಹತ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ನಡೆಸುತ್ತಿರುವ ಎಸ್ಬಿಎಂ 20 ಸಾವಿರಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಇದು ಕೇವಲ ಸಾಲ ಸೌಲಭ್ಯವನ್ನು ಒದಗಿಸುವುದು ಮಾತ್ರವಲ್ಲ, ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ. ಈಗಾಗಲೇ ಅನೇಕ ಶಾಲೆಗಳಿಗೆ ಶುದ್ದವಾದ ಕುಡಿಯವ ನೀರಿನ ವ್ಯವಸ್ಥೆಯನ್ನು ಒದಗಿಸಿದ್ದು ಶಾಲಾ ಮಕ್ಕಳಿಗೆ ಕಲಿಕೋಪಕರಣಗಳನ್ನು ವಿತರಿಸುವುದು.ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದು ಸೇರಿದಂತೆ ನಾನಾ ರೀತಿಯಲ್ಲಿ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ಕೇವಲ ಬಡ್ಡಿ ಪಡೆಯವುದೇ ಬ್ಯಾಂಕಿನ ಉದ್ದೇಶವಲ್ಲ. ನಮ್ಮ ಸುತ್ತಮುತ್ತಲಿನ ಜನರ ಅನುಕೂಲಕ್ಕಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರಗತಿಯನ್ನು ಸಾಧಿಸುವಂತೆ ಮಾಡುವ ಗುರಿಯನ್ನು ಹೊಂದಿದೆ ಎಂದರು.
ಶೇ.96 ಅಂಕಗಳನ್ನು ಪಡೆದ ಪಿಯುಸಿ ವಿದ್ಯಾರ್ಥಿ ಪವನ್ ಗೌಡಗೆ, ಸ್ತ್ರೀ ಶಕ್ತಿ ಸಂಘಗಳಾದ ಎಚ್.ಕೆ.ಜಿ.ಎನ್ ಸಂಘಕ್ಕೆ 3 ಲಕ್ಷ, ಸಹನ ಸಂಘಕ್ಕೆ 2 ಲಕ್ಷ, ಸ್ಪಂದನ ಸಂಘಕ್ಕೆ 2 ಲಕ್ಷ, ಮಲ್ಲಿಗೆ ಸಂಘಕ್ಕೆ 1.5 ಲಕ್ಷ ರು. ಸಾಲಸೌಲಭ್ಯವನ್ನು ಒದಗಿಸಲಾಯಿತು.
ಬಿಇಓ ರಘನಾಥರೆಡ್ಡಿ, ಗ್ರಾ.ಪಂ. ಅಧ್ಯಕ್ಷೆ ತುಳಸಿ, ಸದಸ್ಯರಾದ ಪ್ರಭಾಕರ್, ಮುನಿರಾಜು, ಕರಗಪ್ಪ, ಲಯನ್ಕ್ಲಬ್ನ ಭದ್ರಾಚಲಂ, ಸಿಡಿಪಿಓ ರಾಮ್ರಾಜ್, ತೋಟಗಾರಿಕೆ ಇಲಾಖೆಯ ಗಾಯಿತ್ರಿ, ಶಾಲಾ ಮುಖ್ಯಶಿಕ್ಷಕಿ ವೀನಾಕ್ಷಿ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

