ಕೋಲಾರ

'ಬಿಜಿಎಂಎಲ್ ಚಿನ್ನದ ಗಣಿ ಪ್ರಕರಣ ತೀರ್ಪು 9ಕ್ಕೆ ಮುಂದೂಡಿಕೆ'

Published On :

ಕೆಜಿಎಫ್: ಸುಪ್ರೀಂ ಕೋರ್ಟ್‌ನಲ್ಲಿ ಕಾಯ್ದಿರಿಸಿದ್ದ ಕೆಜಿಎಫ್‌ನ ಬಿಜಿಎಂಎಲ್ ಚಿನ್ನದ ಗಣಿ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ತೀರ್ಪನ್ನು ಇದೇ ತಿಂಗಳು 9ಕ್ಕೆ ಮುಂದೂಡಲಾಗಿದೆ ಎಂದು ಕೆಜಿಎಫ್‌ನ ಕಾರ್ಮಿಕರ ಒಕ್ಕೂಟ ಸಂಘದ ಅಧ್ಯಕ್ಷ ಯಶ್ವಂತ್‌ರಾಜ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಬಿಜಿಎಂಎಲ್ ಚಿನ್ನದ ಗಣಿಯನ್ನು ಗ್ಲೋಬಲ್ ಟೆಂಡರ್‌ಗೆ ನೀಡಲು ಅನುಮತಿ ಕೋರಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರಾದ ಅಲ್‌ಥಾಮಸ್ ಕಬೀರ್ ಅವರು ಈ ಪ್ರಕರಣಕ್ಕೆ ಸಂಬಂಧಿಸಿ ಜುಲೈ 5ರಂದು ಮಹತ್ವದ ತೀರ್ಪನ್ನು ಕಾಯ್ದಿರಿಸಿದ್ದರು.ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳು  ತೀರ್ಪನ್ನು ಮುಂದಿನ ವರ್ಷಅಂದರೆ ಆಗಸ್ಟ್ 14, 2014ಕ್ಕೆ ಮುಂದೂಡಿದ್ದರು. ತೀರ್ಪನ್ನು ಕುರಿತು ವಾದ ಮಂಡಿಸಿದ ವಕೀಲರಾದ ಮೀನಾಕ್ಷಿ ಅರೋರ, ರಂಜೀತ್‌ಪ್ರಕಾಶ್ ಮತ್ತು ಬಿಜಿಎಂಎಲ್ ಕಾರ್ಮಿಕರ ಪರ ವಕೀಲರಾದ ಭಾರತಿರೆಡ್ಡಿ ಅವರುಗಳು ಈಗಾಗಲೇ ಬಿಜಿಎಂಎಲ್ ಚಿನ್ನದ ಗಣಿಯನ್ನು ಮುಚ್ಚಿ 13 ವರ್ಷಗಳಾಗುತ್ತಿದ್ದು ಕಾರ್ಮಿಕರಿಗೆ ನೀಡಬೇಕಾದ ಶೇ.100 ವಿಆರ್‌ಎಸ್ ಬಡ್ಡಿ ಹಣ ಮತ್ತು ಗ್ರಾಚ್ಯುಟಿ ಹಣವನ್ನು ಕೇಂದ್ರ ಸರ್ಕಾರ ಉಳಿಸಿಕೊಂಡಿದೆ ಮತ್ತು ಬಿಜಿಎಂಎಲ್‌ನ ಅಪಾರ ಆಸ್ತಿ ನಾಶವಾಗುತ್ತಿದೆ. ಈ ನಿಟ್ಟಿನಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿ ಅತಿ ಶೀಘ್ರದಲ್ಲಿ ತೀರ್ಪುನ್ನು ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಗೆ ನ್ಯಾಯಾಧೀಶರಾದ ಅಲ್‌ಥಾಮಸ್‌ಕಬೀರ್ ಅವರು ತೀರ್ಪನ್ನು ಇದೇ ತಿಂಗಳು 9ಕ್ಕೆ ಕಾಯ್ದಿರಿಸಿದ್ದಾರೆ ಎಂದು ಬಿಜಿಎಂಎಲ್ ಕಾರ್ಮಿಕರ ಒಕ್ಕೂಟ ಸಂಘದ ಅಧ್ಯಕ್ಷ ಯಶ್ವಂತ್‌ರಾಜ್, ಸದಸ್ಯರಾದ ಗುಣಶೇಖರ್ ತಿಳಿಸಿದ್ದಾರೆ.

ಜಲಪ್ರಳಯ ನೆರವಿಗೆ 50,000
ಶಿಡ್ಲಘಟ್ಟ:
ಕರ್ಣಶ್ರೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗೌಡರ ಹುಟ್ಟು ಹಬ್ಬದ ಸಂದರ್ಭದಲ್ಲಿ ಉತ್ತರಾಂಚಲದ ಜಲಪ್ರಳಯ ನೆರವಿಗಾಗಿ 50,000 ಚೆಕ್‌ನ್ನು ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ವಿತರಿಸಲಾಯಿತು.  ತಮ್ಮ ಹುಟ್ಟು ಹಬ್ಬದ ಸಂದರ್ಭದಲ್ಲಿ ಹುಟ್ಟು ಹಬ್ಬವನ್ನು ತುಂಬ ಸರಳವಾಗಿ ಪಟ್ಟಣದ ಬಸವಣ್ಣನ ದೇವಸ್ಥಾನದಲ್ಲಿ ಪೂಜೆ ಮಾಡಿಸಿ ನೆರೆ ಸಂತ್ರಸ್ತರಿಗೆ ಚೆಕ್ ನೀಡುವ ಮೂಲಕ ಆಚರಿಸಿದ್ದು ಅವರ ಆದರ್ಶವನ್ನು ತೋರಿಸುತ್ತದೆ ಎಂದು ಪ್ರೊ ಪಿ. ರಾಜು ತಿಳಿಸಿದರು. ಶಿವಕುಮಾರ್‌ಗೌಡರ ಅಭಿಮಾನಿ ಬಳಗದಿಂದಲೂ 5000 ರು. ಚೆಕ್‌ನ್ನು ನೆರೆಯ ಸಂತ್ರಸ್ತರಿಗೆಂದು ನೀಡಿದ್ದು ಶಿವಕುಮಾರ್ ಗೌಡರ ಮೇಲಿನ ಅಭಿಮಾನವನ್ನು ತೋರಿಸುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೆಜೆಪಿ ಜಿಲ್ಲಾ ಸಂಚಾಲಕ ನಂದೀಶ್, ರಾಜಸ್ವ ಇಲಾಖೆಯ ಮಂಜುನಾಥ್, ಡಿ.ಕೆ ಶಿವಕುಮಾರ್‌ಗೌಡರ ಅಭಿಮಾನಿ ಬಳಗ ಮತ್ತಿತರರು ಹಾಜರಿದ್ದರು.

ಗೃಹಿಣಿ ನಾಪತ್ತೆ
ಕೋಲಾರ: 
ವೇಮಗಲ್ ಪೊಲೀಸ್ ಠಾಣಿ ವ್ಯಾಪ್ತಿಯ ಸಿಂಗೇಹಳ್ಳಿ ಗ್ರಾಮದ ಎಸ್. ಬಸವರಾಜು ಎಂಬುವವರ ಪತ್ನಿ ಸುಮಾರು 22 ವರ್ಷದ ಭವ್ಯ ಜೂ.11 ರಂದು ಹೊಸೂರಿನಲ್ಲಿ ಡಿಗ್ರಿ ಪರೀಕ್ಷೆ ಬರೆದು ಬರುತ್ತೇನೆ ಎಂದು ಹೋದವರು ಮನೆಗೆ ಬಂದಿಲ್ಲವೆಂದು ವೇಮಗಲ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.  ಭವ್ಯ ಬೆಳ್ಳಗಿದ್ದಾರೆ, ಚೂಡಿದಾರ್ ಧರಿಸಿದ್ದರು, ನಕ್ಲೀಸ್, 4 ಉಂಗುರ 3 ಸೆಟ್ ಓಲೆ ಎತ್ತಿಕೊಂಡು ಹೋಗಿರುತ್ತಾರೆಂದು ಪತಿ ಎಸ್. ಬಸವರಾಜು ದೂರಿದ್ದಾರೆ.  ಸುಳಿವು ಸಿಕ್ಕಲ್ಲಿ 9036495004 ತಿಳಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.