ಆರೋಗ್ಯ ಸೇವೆಗೆ ಹೆಚ್ಚಿನ ಹಣ ಒದಗಿಸಲು ಒತ್ತಾಯ
ಕ.ಪ್ರ.ವಾರ್ತೆ , ಕೋಲಾರ , ಜು.6
ಆರೋಗ್ಯ ಸೇವೆಗಾಗಿ ಪ್ರಸ್ತುತ ಮೀಸಲಿಟ್ಟಿರುವ ಹಣವನ್ನು ಈ ಸಾಲಿನ ಬಜೆಟ್ನಲ್ಲಿ ಏರಿಕೆ ಮಾಡುವ ಮೂಲಕ ಪ್ರತಿಯೊಬ್ಬ ಬಡ ರೋಗಿಗೆ ಸಂಪೂರ್ಣ ಉಚಿತ ಆರೋಗ್ಯ ಸೇವೆ ಕಲ್ಪಿಸಬೇಕೆಂದು ಒತ್ತಾಯಿಸಿ ಭ್ರಷ್ಟಾಚಾರ ವಿರೋಧಿ ಹೋರಾಟ ವೇದಿಕೆಯಿಂದ ಶನಿವಾರ ಜಿಲ್ಲಾ ಅಪರ ಜಿಲ್ಲಾಧಿಕಾರಿ ಡಾ. ವೆಂಕಟೇಶಮೂರ್ತಿ ಅವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಆರೋಗ್ಯ ಸುಧಾರಣಾ ಆಡಳಿತ ವ್ಯವಸ್ಥೆಯು ಸಂಪೂರ್ಣವಾಗಿ ಹದಗೆಟ್ಟಿದೆ. ಒಂದೇ ರೀತಿಯ ಶಸ್ತ್ರ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲಿ ಬೇರೆ ಬೇರೆ ರೀತಿಯಲ್ಲಿ ಹಣ ಪಡೆಯುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿಯೂ ವಿವಿಧ ಶಸ್ತ್ರ ಚಿಕಿತ್ಸೆಗಳಿಗೆ ರೋಗಿಗಳಿಂದ ಹಣ ಪಡೆಯುತ್ತಿದ್ದರೂ ಸಂಬಂಧಪಟ್ಟವರು ಕ್ರಮ ಕೈಗೊಳ್ಳುತ್ತಿಲ್ಲವೆಂದು ಮನವಿ ಸಲ್ಲಿಸಿದ ವೇದಿಕೆ ಅಧ್ಯಕ್ಷ ಕೆ. ನರೇಂದ್ರಬಾಬು ದೂರಿದರು.
ಸರ್ಕಾರಿ ಆಸ್ಪತ್ರೆಗಳಿಗೆ ಮಂಜೂರಾದ ಔಷಧಿಗಳನ್ನು ರೋಗಿಗಳಿಗೆ ವಿತರಿಸದೇ ಖಾಸಗಿ ಔಷಧಿಗಳನ್ನು ಹೊರಗೆ ಖರೀಧಿಸುವಂತೆ ವೈದ್ಯರು ಚೀಟಿಗಳನ್ನು ಬರೆದುಕೊಟ್ಟು ಔಷಧಿ ಕಂಪನಿಗಳ ಉದ್ಧಾರ ಮಾಡಿ ಕಮೀಷನ್ ಪಡೆಯುತ್ತಿದ್ದಾರೆ. ಹಣವಿಲ್ಲದೇ ಸರ್ಕಾರಿ ಆಸ್ಪತ್ರೆಯಿಂದ ಸತ್ತ ಹೆಣವನ್ನೂ ಹೊರ ತರಲು ಇವರ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಕ್ಕರೆ ಖಾಯಿಲೆ, ಬಿ.ಪಿ., ಮೂರ್ಛೆರೋಗ, ಆಸ್ತಮಾ ಮೊದಲಾದ ರೋಗಗಳಿಗೆ ದಿನನಿತ್ಯ ಬಶಸುವ ಮಾತ್ರೆಗಳು ಸಿಗುತ್ತಿಲ್ಲವೆಂದಿರುವ ಅವರು. ಸರ್ಕಾರ ಈ ಬಾರಿಯ ಬಜೆಟ್ನಲ್ಲಿ ರೋಗಿಗಳ ಉಚಿತ ಸೇವೆಗಾಗಿ ಹೆಚ್ಚಿನ ಹಣ ಮೀಸಲಿಟ್ಟು ಗುಣ ಮಟ್ಟದ ಔಷಧಿಗಳನ್ನು ಒದಗಿಸಬೇಕೆಂದು ಆಗ್ರಹಿಸಿದರು.
ಆಸ್ಪತ್ರೆಗಳಲ್ಲಿ ಉಚಿತವಾಗಿ ಜೆನೆರಿಕ್ ಮೆಡಿಸಿನ್ ವಿತರಣೆಯಾಗಬೇಕು. ಬೇಡಿಕೆ ಇರುವ ಔಷಧಿಗಳನ್ನಷ್ಟೇ ಆಸ್ಪತ್ರೆಗಳಿಗೆ ವಿತರಿಸಬೇಕೇ ಹೊರತು ಅನಾವಶ್ಯಕ ಔಷಧಿಗಳನ್ನು ಕಮೀಷನ್ ಆಸೆಗೆ ಖರೀಧಿಸಿ ತಿಪ್ಪೆಗೆಸೆಯಬಾರದು. ಬೇಡಿಕೆ ಇರುವ ಎಲ್ಲಾ ಔಷಧಿಗಳನ್ನು ಖಾಸಗಿ ಕಂಪನಿಗಳಿಂದ ದುಬಾರಿ ವೆಚ್ಚಕ್ಕೆ ಖರೀದಿಸಿ ಹಗರಣ ನಡೆಸುವ ಬದಲು ಸರ್ಕಾರಿ ಔಷಧ ತಯಾರಿಕಾ ಘಟಕದಲ್ಲಿಯೇ ತಯಾರಿಸಿ ವೆಚ್ಚ ಇಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸುಮನ್.ಕೆ, ಎ.ವಿ.ಆನಂದ್, ಆರ್. ಸೋಮಶೇಖರ್, ಎಚ್. ಚಂದ್ರಪ್ಪ ಎಸಿಎಮ್, ಎನ್. ವೆಂಕಟೇಶಪ್ಪ, ಎಚ್. ಆನಂದ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

