ಗುರುಪೌರ್ಣಿಮೆ: 20ರಿಂದ ಗುರುಪೂಜೆ, ಸಂಗೀತೋತ್ಸವ
ಕ.ಪ್ರ.ವಾರ್ತೆ , ಚಿಂತಾಮಣಿ , ಜು. 6
ಗುರುಪೌರ್ಣಿಮೆ ವಿಶೇಷವಾಗಿ ಗುರುಪೂಜಾ ಮತ್ತು ಸಂಗೀತೋತ್ಸವ ಶ್ರೀಕ್ಷೇತ್ರ ಕೈವಾರದಲ್ಲಿ ಜು.20 ರಿಂದ 3 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಕೈವಾರ ಶ್ರೀಯೋಗಿನಾರೇಯಣ ಮಠದ ಧರ್ಮಾಧಿಕಾರಿ ಡಾ. ಎಂ.ಆರ್. ಜಯರಾಮ ಹೇಳಿದರು.
ಮಠದ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಗುರುಪೂಜಾ ಮಹೋತ್ಸವದ ವಿವರ ನೀಡಿದರು.
ಸನಾತನ ಸಂಸ್ಕೃತಿ ಉಳಿಸಿ ಬೆಳೆಸುವುದು, ಸಮಾಜದಲ್ಲಿ ಅನ್ಯೂನ್ಯತೆ ಉಂಟು ಮಾಡುವುದು, ಎಲ್ಲರಲ್ಲಿಯೂ ಧಾರ್ಮಿಕ ಜಾಗೃತಿ ಮೂಡಿಸುವುದು ಮತ್ತು ಪ್ರಕೃತಿಯ ರಕ್ಷಣೆಯ ಈ ಗುರುಪೂಜಾ ಮಹೋತ್ಸವ ಮತ್ತು ಸಂಗೀತೋತ್ಸವದ ಮೂಲ ಉದ್ದೇಶ ಎಂದರು.
ಜು.20ರಂದು ಬೆಳಿಗ್ಗೆ 6 ಗಂಟೆಗೆ ಸಂಗೀತೋತ್ಸವ ಆರಂಭವಾಗುತ್ತದೆ. ಅಂದು ಸಂಜೆ 5 ಗಂಟೆಗೆ ವಿಶೇಷ ಕಾರ್ಯಕ್ರಮಗಳಲ್ಲಿ ಸಿ.ಕೆ. ಪತಂಜಲಿ ಕೊಳಲು ವಾದನ, ಮಾರುತಿ ಪ್ರಸಾದ್ ಗಾಯನ, ಎ.ಕನ್ಯಾಕುಮಾರಿ ಪಿಟೀಲು ಸೋಲೋ, ಅಭಿಷೇಕ್ ರಘುರಾಮ ಗಾಯನ, ಭರತನಾಟ್ಯ, ಹರಿಕಥೆ, ಬುರ್ರಕಥೆ ಕಾರ್ಯಕ್ರಮಗಳಿರುತ್ತವೆ ಎಂದರು.
ಜು.21ರಂದು ಶ್ರೇಯಸ್ ಕೃಷ್ಣ, ಶ್ವೇತಾ ಕೇಶವ್, ರಂಜನಿ ವಾಸುಕಿ, ಆಕೊಂಡಿ ಕಾಕಿನಾಡ ಶ್ರೀನಿವಾಸರಾಜಾರಾವು, ಶ್ರೀನಿಧಿ ಹೈದರಾಬಾದ್, ಎನ್.ವಿಶ್ವೇಶ್ವರ್ ಕೊಳಲುವಾದನ ಮತ್ತು ಸಂಜೆ ವಿಶೇಷ ಕಾರ್ಯಕ್ರಮಗಳಲ್ಲಿ ಚೆನ್ನೈನ ಮಹತಿ ಗಾಯನ, ದೆಹಲಿಯ ಸರಸ್ಪತಿ ರಾಜಗೋಪಾಲ್ ಅವರಿಂದ ವೀಣಾವಾದನ, ವಿಜಯವಾಡ ಮಲ್ಲಾದಿ ಸಹೋದರರಿಂದ ಗಾಯನ, ಕದ್ರಿ ಗೋಪಾಲನಾಥ್ರಿಂದ ಸ್ಯಾಕ್ಸೋಪೋನ್ ವಾದನ, ಚೇತನ ಸುಂದರೇಶ್ ತಂಡ ಭರತನಾಟ್ಯ, ರಾತ್ರಿ ತವಿಲ್ ವಿದ್ವಾನ್ ಪದ್ಮಶ್ರೀ ಡಾ. ಹೊಳೆಯಪಟ್ಟಿ ಎ.ಆರ್. ಸುಬ್ರಮಣ್ಯಂ ತಂಡದಿಂದ ನಾದಸ್ವರ ವಾದನವಿರುತ್ತದೆ.
ಜು.22ರಂದು ಗುರುಪೌರ್ಣಿಮೆ ದಿನದಂದು ಬೆಳಿಗ್ಗೆ 10.30ಕ್ಕೆ ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರ ಗುರುಪೂಜೆ ಶ್ರದ್ಧಾಭಕ್ತಿಗಳಿಂದ ಆಚರಿಸಲಾಗುವುದು. ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಸಂಗೀತ ವಿದ್ವಾಂಸ ಕಲಾನಿಧಿ ಡಾ. ನೇದನೂರಿ ಕೃಷ್ಣಮೂರ್ತಿ ಆಗಮಿಸಿ ಸಂಕೀರ್ತನಾ ಉಪನ್ಯಾಸ ನೀಡಲಿದ್ದಾರೆ.
ನಂತರ ಬೆಂಗಳೂರಿನ ಬಿ.ಕೆ.ಚಂದ್ರಮೌಳಿ ನೇತೃತ್ವದಲ್ಲಿ ತಾಳವಾದ್ಯ ಕಚೇರಿ, ಡಾ. ಸುಮಾ ಸುಧೀಂದ್ರ ತಂಡದಿಂದ ವೀಣವಾದನ, ಎಂ.ಎಸ್. ವಿದ್ಯಾ, ವಿನಯ ಸ್ವರಗಾಯನ, ನಾಗಭೂಷಣಯ್ಯ ತಂಡದಿಂದ ಪಿಟೀಲು ಸೋಲೋ ಕಾರ್ಯಕ್ರಮವಿರುತ್ತದೆ. ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕರಾದ ವಾನರಾಶಿ ಬಾಲಕೃಷ್ಣ ಭಾಗವತರ್, ಮಠದ ಆಡಳಿತಾಧಿಕಾರಿಗಳಾದ ಕೆ.ಲಕ್ಷ್ಮಿನಾರಾಯಣ ಮತ್ತು ಪ್ರವಚನಕಾರ ತಳಗವಾರ ಟಿ.ಎಲ್.ಆನಂದ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

