ಒತ್ತಡ ನಿವಾರಣೆಗೆ ಸಂಗೀತ ರಾಮಬಾಣ
ಚಿಂತಾಮಣಿ: ಮಾನವನಿಗೆ ಆಧುನಿಕ ಯುಗದಲ್ಲಿ ವಿವಿಧ ಕೆಲಸ ಕಾರ್ಯಗಳ ಒತ್ತಡದಿಂದ ಮುಕ್ತಿ ಹೊಂದಲು ಸಂಗೀತ ಎಂಬ ರಾಮ ಬಾಣ ಮನುಷ್ಯನಿಗೆ ನೆಮ್ಮದಿ ನೀಡಲು ಒಂದೇ ಅಸ್ತ್ರವೆಂದು ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ನುಡಿದರು.
ಪಟ್ಟಣದಲ್ಲಿನ ಬೆಂಗಳೂರು ರಸ್ತೆ ಬಳಿ ಇರುವ ಪ್ರಭಾಕರ್ ಬಡಾವಣೆಯಲ್ಲಿರುವ ಚಿಂತಾಮಣಿ ಗಾಯನ ಸಮಾಜ ಮತ್ತು ಗಾನಕಲಾ ಟ್ರಸ್ಟ್ ಸಂಗೀತ ವಿದ್ಯಾಲಯದಲ್ಲಿ ಭಾನುವಾರ ನಡೆದ ಕೆಂಪೇಗೌಡ ಪ್ರಶಸ್ತಿ ಪಡೆದ ಬೆಂಗಳೂರಿನ ಸಂಗೀತ ವಿದ್ವಾನ್ ಎಸ್.ವಿ. ಗಿರಿಧರ್ ಸನ್ಮಾನ ಕಾರ್ಯಕ್ರಮದಲ್ಲಿ ನೆರೆದಿದ್ದ ಕಲಾವಿದ ಸಂಗೀತ ಅಭಿಮಾನಿ ಹಾಗೂ ಕಲಾಪೋಷಕರನ್ನು ಉದ್ದೇಶಿಸಿ ಮಾತನಾಡಿದರು. ಕಳೆದ ಹಲವು ವರ್ಷಗಳಿಂದ ಜಿಲ್ಲಾ ಹಾಗೂ ರಾಜ್ಯದ ವಿವಿಧ ಮೂಲಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತ ವಿದ್ಯಾಭ್ಯಾಸವನ್ನು ಶಿಕ್ಷಣ ನೀಡಿರುವ ಮೂಲಕ ಮಾದರಿಯಾಗಿರುವ ಗಾನ ಕಲಾಚಂದ್ರ ಹಾಗೂ ಸಂಗೀತ ವಿದ್ವಾನ್ ಎಲ್.ವೈ.ಶ್ರೀನಿವಾಸರೆಡ್ಡಿಯವರ ಸೇವೆ ಬಗ್ಗೆ ಮುಕ್ತ ಕಂಠದಿಂದ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ತಾಲೂಕು ಪಂಚಾಯ್ತಿ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಕೆ.ವಿ. ರೆಡ್ಡೆಪ್ಪ ಮಾತನಾಡಿ ಚಿಂತಾಮಣಿ ಪಟ್ಟಣದಲ್ಲಿ ಸಾವಿರಾರು ಮಕ್ಕಳಿಗೆ ಸಂಗೀತ ಅಭ್ಯಾಸವನ್ನು ನೀಡಿ ಸಮಾಜದಲ್ಲಿ ಉತ್ತಮ ಕಲಾವಿದರನ್ನು ಹೊರ ತರಲು ಪ್ರಯತ್ನಿಸುತ್ತಿರುವ ಚಿಂತಾಮಣಿ ಸಂಗೀತ ವಿದ್ಯಾಲಯದಲ್ಲಿ ವಿದ್ಯಾರ್ಥಿ ವೃಂದದವರಿಂದ ಹಾಡುಗಾರಿಕೆ ಮುಖಾಂತರ ರಾಜ್ಯದ ಹಾಗೂ ರಾಷ್ಟ್ರ ಮಟ್ಟಕ್ಕೆ ಸಂಗೀತಾಭ್ಯಾಸದಲ್ಲಿ ಬೆಳೆಯಲು ಸಹಕಾರ ನೀಡುತ್ತಿರುವ ಇಂತಹ ಸಂಗೀತ ಮಹಾ ವಿದ್ಯಾಲಯಗಳು ಹೆಚ್ಚು ಹೆಚ್ಚು ಸಂಗೀತ ಕಲಾವಿದರನ್ನು ಬೆಳೆಸಿ ಪೋಷಿಸಲಿ ಎಂದು ನುಡಿದರು.
ಕಾರ್ಯಕ್ರಮಕ್ಕೂ ಮುಂಚೆ ಶ್ರೀ ಸದ್ಗುರು ತ್ಯಾಗರಾಜ ಸ್ವಾಮಿ ಹಾಗೂ ಪುರಂದರ ದಾಸರ ಭಾವಚಿತ್ರಗಳಿಗೆ ದೇವತಾ ಪೂಜೆ ನೆರವೇರಿಸಿ ನಂತರ ಮುಖ್ಯಮಂತ್ರಿಗಳಿಂದ ಕೆಂಪೇಗೌಡ ಪ್ರಶಸ್ತಿ ಪಡೆದ ಸಂಗೀತ ವಿದ್ವಾನ್ ಎಸ್.ವಿ. ಗಿರಿಧರ್ ಅವರನ್ನು ಸಭೆಯಲ್ಲಿ ಎಲ್ಲಾ ಗಣ್ಯರು ಸನ್ಮಾನಿಸಿದರು.
ಸಂಗೀತ ವಿದ್ವಾನ್ ಎಲ್.ವೈ. ಶ್ರೀನಿವಾಸರೆಡ್ಡಿ, ಗಾನಕಲಾ ಟ್ರಸ್ಟ್ ಅಧ್ಯಕ್ಷರಾದ ನಾಮ ಪ್ರಭಾಕರ್, ವಿದ್ವಾನ್ ಡಾ.ಎಂ.ವಿ. ಶ್ರೀನಿವಾಸಮೂರ್ತಿ, ವಕೀಲರಾದ ಬಿ.ಆರ್.ಶ್ರೀನಾಥ್ ಮತ್ತು ಪ್ರಭಾಕರ್ ಸೇರಿದಂತೆ ಕಾಲವಿದರು, ಸಂಗೀತ ಅಭಿಮಾನಿಗಳು, ಕಲಾಪೋಷಕರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

