ಕೋಲಾರ

'ವಿದ್ಯಾರ್ಥಿಗಳಲ್ಲಿ ರಕ್ತದಾನದ ಅರಿವು ಮೂಡಿಸಿ'

Published On :

ಮಾಲೂರು: ವಿದ್ಯಾರ್ಥಿ ದೆಸೆಯಲ್ಲಿ ವಿದ್ಯಾರ್ಥಿಗಳು ರಕ್ತದಾನದ ಮಹತ್ವ ತಿಳಿದುಕೊಳ್ಳುವ ಜತೆಯಲ್ಲಿ ಅಮೂಲ್ಯ ಜೀವ ಉಳಿಸುವ ನಿಟ್ಟಿನಲ್ಲಿ ರಕ್ತದಾನದಲ್ಲಿ ತಪ್ಪದೆ ಭಾಗವಹಿಸುವ ಸಂಕಲ್ಪ ತೊಡಬೇಕು ಎಂದು ಕ್ಷೇತ್ರಶಿಕ್ಷಣಾಧಿಕಾರಿ ಹೆಚ್.ವಿ.ಸುಬ್ರಮಣ್ಯಂ ಕಿವಿಮಾತು ಹೇಳಿದರು.
ಇಲ್ಲಿನ ವಿಶ್ವ ಮಾನವ ವಿದ್ಯಾರ್ಥಿ ಯುವ ವೇದಿಕೆ ಹಾಗೂ ವಿವೇಕಾನಂದ ಶಿಕ್ಷಣ ಸಂಸ್ಥೆ ವತಿಯಿಂದ ವಿವೇಕಾನಂದ ಶಾಲಾ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಮಾಲೂರು ವಿಧಾನಸಭಾ ಕ್ಷೇತ್ರದ ರಕ್ತದಾನಿಗಳಿಗೆ ಅಭಿನಂದನೆ ಹಾಗೂ ರಕ್ತದಾನ ಜಾಗೃತಿ ಜಾಥಾ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಒಬ್ಬ ಆರೋಗ್ಯವಂತ ಮನುಷ್ಯ ತನ್ನ ರಕ್ತವನ್ನು ದಾನ ಮಾಡುವ ಮೂಲಕ ವರ್ಷಕ್ಕೆ 12 ಜನರ ಪ್ರಾಣ ಉಳಿಸಬಹುದು.  ಈ ನಿಟ್ಟಿನಲ್ಲಿ ಮನುಷ್ಯನ ಜೀವನದಲ್ಲಿ ರಕ್ತದಾನಕ್ಕಿಂತ ಮಿಗಿಲಾದ ಇನ್ನೂಂದು ದಾನವಿಲ್ಲ. ರಕ್ತದ ಮಹತ್ವ ಬಗ್ಗೆ ಪ್ರೌಢಶಾಲಾ ಹಂತದಿಂದಲೇ ಮಕ್ಕಳಿಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
 ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ವಿ.ರವೀಂದ್ರ, ಕೆವಿಕೆ ಅಧ್ಯಕ್ಷ ಹರೀಶ್, ವೃತ್ತ ನಿರೀಕ್ಷಕ ವೆಂಕಟೇಶ್ ಮತ್ತಿತರರು ಮಾತನಾಡಿದರು.  ಪ್ರಾಂಶುಪಾಲೆ ಸುಧಾಶರ್ಮ ಅಧ್ಯಕ್ಷತೆ ವಹಿಸಿದ್ದರು. ಕೀರ್ತಿ ಸಿಂಗ್ ಪ್ರಾರ್ಥಿಸಿದರು. ವೀಣಾ ಸ್ವಾಗತಿಸಿದರು. ವಿಶ್ವಮಾನವ ವಿದ್ಯಾರ್ಥಿ ಯುವ ವೇದಿಕೆ ಜಿಲ್ಲಾಧ್ಯಕ್ಷ ಲಕ್ಕೂರು ನಾಗರಾಜ್ ನಿರೂಪಿಸಿದರು ಹಾಗೂ ಅರುಣ್ ಸಿಂಗ್ ವಂದಿಸಿದರು.  ಕೆವಿಕೆ ಸಂಸ್ಥೆಯ ಹರ್ಷ  ರಕ್ತದ ಮಹತ್ವಗಳ ಬಗ್ಗೆ ಪ್ರಾತ್ಯಕ್ಷತೆ ತೋರಿಸಿದರು. ಪಟ್ಟಣದಲ್ಲಿ ರಕ್ತದಾನ ಜಾಗೃತಿ ಜಾಥಾ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.