ಭೂವಿವಾದ: ಜಿಪಂ ಸದಸ್ಯಗೆ ಹಲ್ಲೆ
ಚಿಂತಾಮಣಿ: ಕಾಂಗ್ರೆಸ್ ಮತ್ತು ಜೆಡಿಎಸ್ನ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ತಾಲೂಕು ದಂಡಾಧಿಕಾರಿಗಳ ಸಮ್ಮುಖದಲ್ಲೇ ಹಾಲಿ ಜಿಲ್ಲಾ ಪಂಚಾಯಿತಿ ಸದಸ್ಯನ ಮೇಲೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಲು ಯತ್ನಸಿರುವ ಘಟನೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ದಿಗವ ಬಸವಾಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಘಟನೆಯ ವಿವರ: ತಾಲೂಕಿನ ಚಿಲಕಲನೇರ್ಪು ಹೋಬಳಿಯ ದಿಗವ ಬಸವಾಪುರ ಗ್ರಾಮದ ಒಕ್ಕಲಿಗ ಸಮುದಾಯಕ್ಕೆ ಸೇರಿದ ಈಶ್ವರರೆಡ್ಡಿ ಬಿನ್ ಗೋವಿಂದರೆಡ್ಡಿ ಎಂಬವರಿಗೂ ಇದೇ ಗ್ರಾಮದ ಬಲಜಿಗ ಸಮುದಾಯದ ಮಲ್ಲಪ್ಪ ಎಂಬವರಿಗೆ ಕಳೆದ ಹಲವು ವರ್ಷಗಳಿಂದ ಭೂ ವಿವಾದವಿತ್ತು. ಗ್ರಾಮದ 2 ಎಕರೆ 6 ಕುಂಟೆ ಗ್ರಾಮ ಠಾಣಾ ಸರ್ಕಾರಿ ಜಮೀನನ್ನು ಹಲವು ರಾಜಕೀಯ ಬಲಾಢ್ಯರು ಅತಿಕ್ರಮಣ ಮಾಡಿಕೊಂಡು ಇರುವ ಘಟನೆಗೆ ಸಂಬಂಧಿಸಿ ಈ ಹಿಂದೆಯೇ ಜಿಲ್ಲಾ ಪಂಚಾಯಿತಿ ನೋಡಲ್ ಅಧಿಕಾರಿ ಸರ್ವೆ ಕಾರ್ಯಕ್ಕೆ ಬಂದಿದ್ದರೂ ಪರ- ವಿರೋಧ 2 ಗುಂಪುಗಳು ಅಧಿಕಾರಿಗಳ ಜೊತೆ ಸರ್ವೆ ಕಾರ್ಯಕ್ಕೆ ಅಡ್ಡಿಪಡಿಸಿ ಸ್ಪಂದಿಸದೆ ಇರುವ ಕಾರಣ ಗ್ರಾಮ ಸಮಸ್ಯೆ ಇರುವುದರಿಂದ ಗ್ರಾಮದಲ್ಲಿನ 2 ಗುಂಪುಗಳ ಮುಖಂಡರ ಭೂಮಿ ವಿವಾದ ಇತ್ಯರ್ಥವಾಗದೆ ಸಮಸ್ಯೆ ಪ್ರಶ್ನೆಯಾಗಿಯೇ ಉಳಿದಿತ್ತು.
ಸರ್ವೆ ಕಾರ್ಯಕ್ಕೆ 2 ಗುಂಪುಗಳು ಜಮಾವಣೆಗೊಂಡು ಗ್ರಾಮದಲ್ಲಿ ಬೆಳಗ್ಗೆ 11 ಗಂಟೆಗೆ ತಾಲೂಕು ದಂಡಾಧಿಕಾರಿಗಳಾದ ಎಂ.ಎನ್.ಮಂಜುನಾಥ್ ಹಾಗೂ ಕಂದಾಯ ಅಧಿಕಾರಿಗಳಾದ ಮಂಜುನಾಥ್, ಶ್ರೀನಿವಾಸರೆಡ್ಡಿ, ಶ್ರೀಧರ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಗ್ರಾಮಕ್ಕೆ ಬೇಟಿ ನೀಡಿ ಸರ್ವೆ ನಂ. 1 ಹಾಗೂ 92 ಮತ್ತು 94 ಅಳತೆ ಮಾಡಲು ಗ್ರಾಮದಲ್ಲಿನ ಜಮೀನು ಹತ್ತಿರವಿರುವ ಗ್ರಾಮಸ್ಥರನ್ನು ಹಾಜರಾಗಿ ತಮ್ಮ ನಂಬರ್ ಅಥವಾ ಹಿಸ್ಸೆಗಳನ್ನು ತೋರಿಸಿ ಅವಶ್ಯಕವಾದ ದಾಖಲೆಗಳನ್ನು ತೋರಿಸಲು ಅಧಿಕಾರಿಗಳು 15 ದಿನಗಳ ಮುಂಚೆಯೇ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಹೀಗಿರುವಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಹಲವು ರಾಜಕೀಯ ಮುಖಂಡರು ಸ್ಥಳಕ್ಕೆ ಧಾವಿಸಿದರು. ಇದರಿಂದ ಹಲವರು ಅಧಿಕಾರಿಗಳ ಸರ್ವೆ ಕಾರ್ಯಕ್ಕೆ ಕಿರಿಕಿರಿ ಉಂಟುಮಾಡಿ ಮಾತಿನ ಚಕಮಕಿ ನಡೆಸಿದರು.
ಪೊಲೀಸರ ನಿರ್ಲಕ್ಷ್ಯ: ಬಂದೋಬಸ್ತ್ಗಾಗಿ ದಿಗವ ಬಸವಾಪುರ ಗ್ರಾಮಕ್ಕೆ ಕೆಂಚಾರ್ಲಹಳ್ಳಿ ಠಾಣೆ ಕೇವಲ ಇಬ್ಬರು ಪೇದೆ ಬಂದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

