ಸಿದ್ದು ಹುಂಡಿ ನಿರಾಶಾದಾಯಕ: ಜೆಡಿಎಸ್ನ ಗೋವಿಂದಗೌಡ
ಕನ್ನಡಪ್ರಭ ವಾರ್ತೆ, ಕೋಲಾರ, ಜು.12
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ನಲ್ಲಿ ಅನೇಕ ಜನಪರ ಕಾರ್ಯಕ್ರಮಗಳಿದ್ದರೂ, ಅವು ಜಾರಿಗೆ ಅಗತ್ಯವಾದ ಅನುದಾನ ನೀಡಿಲ್ಲದಿರುವುದರಿಂದ ಇದು ನಿರಾಶಾದಾಯಕ ಬಜೆಟ್ ಎಂದು ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಜಿಲ್ಲೆಗೆ ನೀರು ಬರುವ ಭರವಸೆಯೇ ಇಲ್ಲದ ಎತ್ತಿನ ಹೊಳೆಗೆ ಆದ್ಯತೆ ನೀಡಲಾಗಿದೆ, ಪರಮಶಿವಯ್ಯ ವರದಿ ಕಡೆಗಣಿಸಲಾಗಿದೆ ಎಂದು ದೂರಿದ್ದಾರೆ. ಈ ಹಿಂದೆ ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಪರಮಶಿವಯ್ಯ ವರದಿ ಸರ್ವೇಗೆ ಹಣ ನೀಡಿದ್ದು, 12 ವರ್ಷವಾದರೂ ಡಿಪಿಆರ್ ಆಗಿಲ್ಲ. ಪರಮಶಿವಯ್ಯ ವರದಿ ಅನುಷ್ಠಾನದಿಂದ ಮಾತ್ರವೇ ಜಿಲ್ಲೆಗೆ ನೀರು ಬರಲು ಸಾಧ್ಯ ಎಂದಿರುವ ಅವರು, ಇದರ ಯೋಜನೆ ಸಿದ್ದತೆಗೆ 50 ಕೋಟಿ ನೀಡಿದ್ದು ಕೂಡಲೇ ವರದಿ ತಯಾರಿ ಆಗದಿದ್ದರೆ ಪ್ರಯೋಜನವಾಗುವುದಿಲ್ಲವೆಂದು ತಿಳಿಸಿದ್ದಾರೆ.
ಬಡ್ಡಿ ರಹಿತ ಸಾಲ ನೀಡಿಕೆ ಕೇವಲ ಸಹಕಾರಿ ಬ್ಯಾಂಕ್ಗಳಿಗೆ ಸೀಮಿತ ಮಾಡಿರುವುದರಿಂದ ಜಿಲ್ಲೆಯ ಜನತೆಗೆ ಪ್ರಯೋಜನವಿಲ್ಲವಾಗಿದೆ, ಜತೆಗೆ ರಾಜ್ಯದ ಶೇ.2 ರಷ್ಟು ರೈತರಿಗೆ ಮಾತ್ರವೇ ಸಹಕಾರಿ ಸಾಲ ಸಿಗುತ್ತದೆ, ಆದ್ದರಿಂದ ವಾಣಿಜ್ಯ ಬ್ಯಾಂಕ್ಗಳಿಗೂ ಈ ಯೋಜನೆ ವಿಸ್ತರಿಸಬೇಕು, ರೈತರಿಗೆ ಸಾಲ ನೀಡುವ ವಿಧಾನ ಸರಳವಾಗಬೇಕು ಎಂದು ಅಗ್ರಹಿಸಿದ್ದಾರೆ. ಬಜೆಟ್ನಲ್ಲಿ ಕೆರೆಗಳ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಜಿಲ್ಲೆಯ ದೃಷ್ಟಿಯಿಂದ ಸ್ವಾಗತಾರ್ಹವಾದರೂ, ಇದು ಎಷ್ಟರ ಮಟ್ಟಿಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಆಲೋಚಿಸಬೇಕಾಗಿದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

