ಸರ್ಕಾರಿ ನೌಕರರ ಚುನಾವಣೆ: 55 ನಾಮಪತ್ರ ಸಲ್ಲಿಕೆ
ಶ್ರೀನಿವಾಸಪುರ: ಜುಲೈ 22 ರಂದು ನಡೆಯಲಿರುವ ತಾಲೂಕು ಸರ್ಕಾರಿ ನೌಕರರ ಸಂಘದ ಪ್ರತಿನಿಧಿಗಳ ಚುನಾವಣೆಗೆ ಕಡೆಯ ದಿನವಾದ ಸೋಮವಾರದ ಅಂತ್ಯಕ್ಕೆ 25 ಸರ್ಕಾರಿ ಇಲಾಖೆಯಿಂದ ಒಟ್ಟು 55 ಮಂದಿ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಪ್ರಾಥಮಿಕ ಶಾಲಾ ವಿಭಾಗದಿಂದ ಹೆಚ್. ಜಯರಾಮರೆಡ್ಡಿ, ಸಿ. ನಾಗೇಂದ್ರ, ಜಿ. ಎನ್. ಮಂಜು, ಎಂ.ಪಿ. ನಾರಾಯಣಸ್ವಾಮಿ, ವಿ. ರವಿಕುಮಾರ್, ವಿ. ಬಯ್ಯಾರೆಡ್ಡಿ, ಎಲ್. ಆನಂದ, ಶಾರದಮ್ಮ, ಎಂ. ನಾಗರಾಜ್, ಜಿ.ಎನ್. ಗೋವಿಂದರೆಡ್ಡಿ, ಎನ್.ಜಿ. ಸಂಪತ್ಕುಮಾರ್. ಪ್ರೌಢಶಾಲಾ ವಿಭಾಗದಿಂದ ಎನ್. ಜಿ. ಸೋಮಶೇಖರ್, ಮಂಜುನಾಥರೆಡ್ಡಿ ಸಿ.ಎನ್, ಬೈರೇಗೌಡ, ವೆಂಕಟಸ್ವಾಮಯ್ಯ, ಐಮಾರೆಡ್ಡಿ. ಆರೋಗ್ಯ ಇಲಾಖೆಯಿಂದ ವೆಂಕಟರೆಡ್ಡಿ, ನಾಗರಾಜ, ಲಕ್ಷ್ಮೀದೇವಮ್ಮ, ಎಸ್. ದೇವರಾಜ್, ಹಾಗೂ ಸಿ.ಆರ್.ಪಿ. ಯಿಂದ ವಿ. ತಿಮ್ಮಣ್ಣ, ಡಿ.ಆರ್. ಶಿವರಾಮೇಗೌಡ, ಎಂ. ಕೃಷ್ಣಾರೆಡ್ಡಿ, ಎನ್. ವಿ. ವೇಣುಗೋಪಾಲ ಬಿ.ಆರ್.ಪಿ. ಯಿಂದ ಜಿ.ಸಿ. ಕೃಷ್ಣಾರೆಡ್ಡಿ. ಕಂದಾಯ ಇಲಾಖೆಯಿಂದ ಎಸ್.ವಿ. ಜನಾರ್ಧನ, ಸಿ. ನಾರಾಯಣರೆಡ್ಡಿ, ಮುನಿರೆಡ್ಡಿ, ಆರ್.ಜಿ. ಗೋಪಾಲಕೃಷ್ಣಾರೆಡ್ಡಿ, ಎ.ಪಿ.ಎಂ.ಸಿಯಿಂದ ರೇಣುಕಾ, ಪಶುಪಾಲನೆ ಇಲಾಖೆಯಿಂದ ಡಾ. ಮಂಜುನಾಥರೆಡ್ಡಿ, ತಾಲೂಕು ಪಂಚಾಯ್ತಿಯಿಂದ ಆರ್. ಎನ್. ಸುರೇಶ್, ಟ್ರಜರಿಯಿಂದ ಡಿ.ಆರ್. ಶ್ರೀನಿವಾಸ ಮೀನುಗಾರಿಕೆ ಇಲಾಖೆಯಿಂದ ಮುನೆಯ್ಯ, ಮಹಿಳಾ ಮತ್ತು ಮಕ್ಕಳಾ ಕಲ್ಯಾಣ ಅಭಿವೃದ್ಧಿ ಇಲಾಖೆಯಿಂದ ವಿ. ನವೀನ್ಕುಮಾರ್. ಭೂ ಮಾಪನ ಇಲಾಖೆಯಿಂದ ಬಾಗಭೂಷಣ, ಸಮಾಜ ಕಲ್ಯಾಣ ಇಲಾಖೆಯಿಂದ ಕೆ. ಶ್ರೀನಿವಾಸ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಖಾದರ್ ಪಾಷ, ಜಿ. ಶಂಕರ್, ಅಬಕಾರಿ ಇಲಾಖೆಯಿಂದ ಹೆಂಜಾರೆಡ್ಡಿ, ಕೃಷಿ ಇಲಾಖೆಯಿಂದ ಜಿ.ಕೆ. ಪ್ರಸನ್ನ ಕುಮಾರ್ , ಸಹಕಾರ ಇಲಾಖೆಯಿಂದ ಜಿ.ಕೆ. ವೀರಭದ್ರಯ್ಯ, ಪಶುಪಾಲನಾ ಇಲಾಖೆಯಿಂದ ಕೆ.ಕೆ. ನವೀನ್ಕುಮಾರ್, ನ್ಯಾಯಾಂಗ ಇಲಾಖೆ ಯಿಂದ ಕೆ. ದೊಡ್ಡೇಗೌಡ, ಜಲಾನಯನ ಇಲಾಖೆಯಿಂದ ಚೌಡಪ್ಪ, ಇವರುಗಳು ಸರ್ಕಾರಿ ನೌಕರರ ಸಂಘದ ಪ್ರತಿನಿಧಿಗಳ ಚುನಾವಣೆಗಾಗಿ ನಾಮಪತ್ರಗಳನ್ನು ಸಲ್ಲಿಸಿರುವುದಾಗಿ ಚುನಾವಣಾಧಿಕಾರಿ ಬಿ.ಇ.ಓ. ಪಿ. ಎನ್. ನಾಗರಾಜ್ ತಿಳಿಸಿದ್ದಾರೆ.
'ಸಾಮೂಹಿಕ ಜವಾಬ್ದಾರಿಯಿಂದ ಸಂಸ್ಥೆ ಅಭಿವೃದ್ಧಿ'
ಮಾಲೂರು: ಸಾಮೂಹಿಕ ಜವಾಬ್ದಾರಿಗಳು ಇದ್ದಾಗ ಮಾತ್ರ ಸಂಸ್ಥೆ ಅಭಿವೃದ್ಧಿ ಕಡೆ ಸಾಗಲು ಸಾಧ್ಯ ಎಂದು ಖ್ಯಾತ ಸಾಹಿತಿ ಹಾಗೂ ಪ್ರಾಂಶುಪಾಲ ನಂಗಲಿ ಚಂದ್ರಶೇಖರ್ ಹೇಳಿದರು. ಅವರು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಳ್ಳುವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಾ ನನ್ನ ಸೇವಾವಧಿಯನ್ನು ಗ್ರಾಮಾಂತರ ಪ್ರದೇಶದ ಕಾಲೇಜಿನಲ್ಲೇ ಪೂರೈಸಿದ್ದು, ನಗರ ಪ್ರದೇಶದಲ್ಲಿ ಕೆಲಸ ಮಾಡಲಿಲ್ಲ. ಸಾಮೂಹಿಕ ಜವಾಬ್ದಾರಿ ಹಾಗೂ ಎಲ್ಲರೂ ಒಪ್ಪುವಂತಹ ನಾಯಕ್ವತ ಗುಣ ಹೊಂದಿರುವ ಪ್ರಾಂಶುಪಾಲ ಫರೋಖಿರವರನ್ನು ನೋಡಿ ಖುಷಿಯಾಯಿತು ಎಂದರು. ಪ್ರೊ. ಡಾ.ಮುನಿನಾರಾಯಣಪ್ಪ ಮಾತನಾಡಿ, ಒಬ್ಬರಿಗೂ ನೋವು ನೀಡದೆ ಕಾಲೇಜಿನ ಪ್ರಗತಿಗಾಗಿ ಒತ್ತು ನೀಡಿದ ಪ್ರಾಂಶುಪಾಲ ಫರೋಖಿರವರ 3 ವರ್ಷದ ಅವಧಿಯಲ್ಲಿ ಕಾರ್ಯ ನಿರ್ವಹಿಸಿದ್ದು ನಮಗೆ ಕಷ್ಟವೆನಿಸಲಿಲ್ಲ ಎಂದರು. ಬೀಳ್ಕೊಡುಗೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಫರೋಖಿ ರವರು ತನ್ನ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಅರ್ಪಿಸುವುದಾಗಿ ತಿಳಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಶ್ವಥ್ ರೆಡ್ಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವರ್ಗಾವಣೆಯಾಗಿ ಬಂದ ಮಾಲಾ, ಮುನಿವೆಂಕಟಪ್ಪ ಹಾಗೂ ಶ್ರೀನಿವಾಸ್ ರವರನ್ನು ಸ್ವಾಗತಿಸಲಾಯಿತು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣಪ್ಪ, ಸರ್ಕಾರಿ ಬಾಲಕಿಯರ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್, ಪ್ರಾಧ್ಯಾಪಕರಾದ ಅನಂತಮೂರ್ತಿ, ರಾಮಕೃಷ್ಣಪ್ಪ, ವಿಶ್ವೇಶ್ವರಯ್ಯ, ನಾಗರೆಡ್ಡಿ,ಶ್ರೀನಿವಾಸ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

