ಕೋಲಾರ

ಅಪರಾಧ ಪ್ರಕರಣ ತಡೆಗೆ ಪೊಲೀಸರಿಂದ ಜನಜಾಗೃತಿ

Published On :

ಚಿಕ್ಕಬಳ್ಳಾಪುರ: ಅಪರಾಧ ಪ್ರಕರಣಗಳು ನಡೆಯುವುದನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ಪೊಲೀಸರು ಮಂಗಳವಾರ ಬೆಳ್ಳಂಬೆಳಿಗ್ಗೆ ನಗರದ ವಿವಿಧೆಡೆ ಸಂಚರಿಸಿ ಕರಪತ್ರಗಳ ಮೂಲಕ ಜಾಗೃತಿ ಮೂಢಿಸಿದರು.
ನಗರದ ಕಂದವಾರ ಪೇಟೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಪೊಲೀಸರು, ರಸ್ತೆಗಳಲ್ಲಿ ಕಂಡು ಬಂದವರಿಗೆಲ್ಲಾ ಕರಪತ್ರಗಳನ್ನು ನೀಡಿದರು. ಅನೇಕರ ಮನೆ ಬಾಗಿಲುಗಳಿಗೆ ಖುದ್ದು ತೆರಳಿ ವಿಚಾರವನ್ನು ತಿಳಿಸಿದರು.
ಕಳ್ಳತನ ಸೇರಿದಂತೆ ಅಪರಾಧ ಪ್ರಕರಣಗಳು ನಡೆಯುವುದನ್ನು ತಡೆಯಲು ಪೊಲೀಸರಿಗೆ ಸಾರ್ವಜನಿಕರ ಸಹಕಾರವು ಅತ್ಯಗತ್ಯ. ಸಾರ್ವಜನಿಕರು ಎಚ್ಚೆತ್ತುಕೊಂಡು ಕೈ ಜೋಡಿಸಿದಾಗ ಮಾತ್ರ ಸುಲಭವಾಗಿ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಿ ನಿಯಂತ್ರಿಸಬಹುದೆಂದು ತಿಳಿಸಿದರು.
ರಾತ್ರಿ ವೇಳೆಯಲ್ಲಿ ಮನೆಯ ಬಾಗಿಲನ್ನು ತೆಗೆದುಕೊಂಡು ಮಲಗಬಾರದು. ಅಪರಿಚಿತರನ್ನು ನಂಬಿ ತಮಗೆ ಸಂಬಂಧಪಟ್ಟ ವಿಚಾರಗಳನ್ನು ತಿಳಿಸಬಾರದು. ಒಡವೆಗಳನ್ನು ಹೆಚ್ಚಿಗೆ ಹಾಕಿಕೊಂಡು ಒಂಟಿಯಾಗಿ ಓಡಾಡಬಾರದು. ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಾಗ ನಿರ್ಭಯವಾಗಿ ಪೊಲೀಸರಿಗೆ ತಿಳಿಸಬೇಕೆಂದು ಮನವಿ ಮಾಡಿದರು.
ಸರ್ಕಲ್ ಇನ್ಸೆಪೆಕ್ಟರ್ ಮಹೇಶ್‌ಕುಮಾರ್, ನಗರ ಠಾಣೆ ಸಬ್ ಇನ್ಸೆಪೆಕ್ಟರ್ ಮುಂತಾದವರು ಇದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.