ಶೈಕ್ಷಣಿಕ ಪ್ರಗತಿಯಲ್ಲಿ ದಲಿತರ ಅಭಿವೃದ್ಧಿ
ಚಿಂತಾಮಣಿ: ಶೈಕ್ಷಣಿಕವಾಗಿ ಮುಂದುವರಿದಲ್ಲಿ ಮಾತ್ರ ದಲಿತರು ಸಮಾಜದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವೆಂದು ದಲಿತ ಸಂಘರ್ಷ ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಆನಂದ್ ಹೇಳಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ದಲಿತ ಸಂಘರ್ಷ ಸೇನೆ ತಾಲೂಕು ಪದಾಧಿಕಾರಿಗಳ ಆಯ್ಕೆ ನಂತರ ಸಭೆ ಉದ್ದೇಶಿಸಿ ಮಾತನಾಡಿದರು. ಹಳ್ಳಿಯಿಂದ ಪಟ್ಟಣದವರೆಗೂ ಸಂಘಟನೆಯನ್ನು ಬಲಪಡಿಸಲು ಹಂತ ಹಂತವಾಗಿ ಸಂಘಟನೆ ರೂಪರೇಷೆಗಳ ಬಗ್ಗೆ ಜನರಿಗೆ ಅರಿವು ನೀಡುತ್ತಾ, ದಲಿತರು ತಮ್ಮ ಮಕ್ಕಳನ್ನು ಕಾರ್ಮಿಕರಾಗಿ ಬಳಿಸಿಕೊಳ್ಳದೆ ಕಡ್ಡಾಯವಾಗಿ ಶಿಕ್ಷಣದ ಬಗ್ಗೆ ಹೆಚ್ಚು ಒಲವು ತೋರಿಸಬೇಕೆಂದು ನುಡಿದರು. ಸೇನೆಯ ಜಿಲ್ಲಾಧ್ಯಕ್ಷ ಡಿ.ವಿ.ನಾರಾಯಣಸ್ವಾಮಿ ಮಾತನಾಡಿದರು.
ಕಾರ್ಯಕ್ರಮಕ್ಕೂ ಮುನ್ನ ತಾಲೂಕು ಅಧ್ಯಕ್ಷರಾಗಿ ಸಿ.ಎನ್.ಆಂಜಪ್ಪ, ಉಪಾಧ್ಯಕ್ಷರಾಗಿ ಮುನಿವೆಂಕಟಪ್ಪ, ಜಿ.ನಾಗರಾಜ್, ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಸದಾಶಿವ ಮತ್ತು ಪದಾಧಿಕಾರಿಗಳನ್ನಾಗಿ ಕೆ.ಎಂ.ಶ್ರೀನಿವಾಸ್, ಮಂಜು, ಕೃಷ್ಣಪ್ಪ, ಲಕ್ಷ್ಮಣ್ ಗಜಾನನ ವೃತ್ತ ಆಯ್ಕೆ ಮಾಡಲಾಯಿತು.
ತಾಲೂಕು ಮಹಿಳಾ ದಲಿತ ಸಂಘರ್ಷ ಸೇನೆಯ ಪದಾಧಿಕಾರಿಗಳಾಗಿ ಮುನಿವೆಂಕಟಲಕ್ಷ್ಮಮ್ಮ, ನಾಗರತ್ನ, ಚನ್ನಮ್ಮ, ಆಂಜಮ್ಮ, ಸಮಂತಮ್ಮ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಮುಖಂಡರಾದ ನರಸಿಂಹರೆಡ್ಡಿ, ಎಂ.ಎಸ್.ಶಂಕರ್, ಐಮರೆಡ್ಡಹಳ್ಳಿ ನಾರಾಯಣಸ್ವಾಮಿ, ನರಸಮ್ಮ,ಜಯಮ್ಮ ಸೇರಿದಂತೆ ಇನ್ನೂ ಹಲವರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

