ಗ್ರಾ.ಪಂ ಉಪ ಚುನಾವಣೆಗೆ ಅಧಿಸೂಚನೆ ಪ್ರಕಟ
ಕ.ಪ್ರ.ವಾರ್ತೆ ಕೋಲಾರ ಜು. 18
ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿದ್ದ ಗ್ರಾಮ ಪಂಚಾಯಿತಿ ಸದಸ್ಯರ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ಜಿಲ್ಲಾಧಿಕಾರಿಗಳು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ.
ಜಿಲ್ಲೆಯ ಐದು ತಾಲೂಕುಗಳ 11 ಗ್ರಾಪಂ ಉಪಚುನಾವಣೆ ನಡೆಯಲಿದೆ. ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ಜುಲೈ 24ರಂದು ಬುಧವಾರ ಕಡೆ ದಿನವಾಗಿದೆ, ನಾಮಪತ್ರ ಪರಿಶೀಲನೆ ಜು.25ರಂದು ನಡೆಯಲಿದ್ದು, ಜು.27ಕ್ಕೆ ನಾಮಪತ್ರ ಹಿಂದಕ್ಕೆ ಪಡೆಯುವ ಕೊನೆ ದಿನವಾಗಿದೆ.
ಮತದಾನ ಅವಶ್ಯವಿದ್ದರೆ ಆಗಸ್ಟ್ 4 ರಂದು ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5ಗಂಟೆ ತನಕ ಮತದಾನ, ಆ.7ರಂದು ಮತ ಎಣಿಕೆ ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ. ವಿ. ವೆಂಕಟೇಶಮೂರ್ತಿ ತಿಳಿಸಿದ್ದಾರೆ.
ಚುನಾವಣೆ ನಡೆಯುವ ಕ್ಷೇತ್ರಗಳು: ಕೋಲಾರ ತಾಲೂಕು ಐತರಾಸನಹಳ್ಳಿ ಗ್ರಾಮ ಪಂಚಾಯತಿಯ ಕೊಂಡೇನಹಳ್ಳಿ (ಪ.ಜಾ ಮೀಸಲು), ಅರಹಳ್ಳಿ ಗ್ರಾಮ ಪಂಚಾಯಿತಿಯ ಬಾರಂಡಹಳ್ಳಿ (ಪ.ಜಾ ಮೀಸಲು), ಮಾಲೂರು ತಾಲೂಕು ಕೊಂಡಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯ ನಕ್ಕನಹಳ್ಳಿ (ಹಿಂದುಳಿದ ವರ್ಗ -ಅ) ಕುಂಟನಹಳ್ಳಿ (ಪರಿಶಿಷ್ಟ ಜಾತಿ-ಮಹಿಳೆ), ಜಯಮಂಗಲ ಗ್ರಾಮ ಪಂಚಾಯಿತಿಯ ಸಿದ್ದನಹಳ್ಳಿ (ಸಾಮಾನ್ಯ), ಬಂಗಾರಪೇಟೆ ತಾಲೂಕು ಆಲಂಬಾಡಿ ಜ್ಯೋತೇನಹಳ್ಳಿ ಗ್ರಾಪಂ ವ್ಯಾಪ್ತಿಯ ಗಾಜಗ ಕ್ಷೇತ್ರ (ಪ.ಜಾ) ತೊಪ್ಪನಹಳ್ಳಿ ಗ್ರಾ.ಪಂ.ಯ ಬೋಡೇನಹಳ್ಳಿ(ಸಾಮಾನ್ಯ), ಮುಳಬಾಗಿಲು ತಾಲೂಕು ಕಪ್ಪಲಮಡಗು ಗ್ರಾ.ಪಂ.ಯ ಸೀಗೇನಹಳ್ಳಿ(ಸಾಮಾನ್ಯ) ನಂಗಲಿ ಗ್ರಾಮ ಪಂಚಾಯಿತಿ ನಂಗಲಿ-4 ರಲ್ಲಿ (ಹಿಂ.ವರ್ಗ -ಮಹಿಳೆ) ಹಾಗೂ ಶ್ರೀನಿವಾಸಪುರ ತಾಲೂಕು ತಾಡಿಗೋಳ್ ಗ್ರಾಮ ಪಂಚಾಯಿತಿಯ ತಾಡಿಗೋಳ್-1(ಹಿಂ ವರ್ಗ ಅ- ಮಹಿಳೆ) ಯಲ್ದೂರು ಗ್ರಾ.ಪಂ. ವ್ಯಾಪ್ತಿಯ ಯಲ್ದೂರು-2 (ಪ.ಜಾ) ಈ ಎಲ್ಲಾ 11 ಸ್ಥಾನಗಳಿಗೆ ಚುನಾವಣೆ ನಡೆಸಲು ಚುನಾವಣಾಧಿಕಾರಿಗಳು ವೇಳಾಪಟ್ಟಿಯನ್ನು ಹೊರಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

