ಕೋಲಾರ

ಜ್ಞಾನಾರ್ಜನೆಗೆ ಓದಿಗಿಂತ ಬೇರೆ ಮಾರ್ಗವಿಲ್ಲ

Published On :

ಮಾಲೂರು: ಜ್ಞಾನಾರ್ಜನೆಗೆ ದೃಶ್ಯ ಮಾಧ್ಯಮಕ್ಕಿಂತ, ಮುದ್ರಣ ಮಾಧ್ಯಮವೇ ಅತ್ಯುತ್ತಮ ಎಂದು ಕೇಂದ್ರ ಸೆಣಬು ಮಂಡಳಿ ಸದಸ್ಯ, ಪುರಸಭೆ ಸದಸ್ಯ ಸಿ.ಲಕ್ಷ್ಮಿನಾರಾಯಣ್ ಅಭಿಪ್ರಾಯಪಟ್ಟರು.
ಸ್ಥಳೀಯ ಚುಟುಕು ಸಾಹಿತ್ಯ ಪರಿಷತ್ ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ವಿಶಿಷ್ಠ ಕಾರ್ಯಕ್ರಮ “ÈÚß«æVÚàM¥Úß ®Ú~ÃOæ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಠ್ಯ ಪುಸ್ತಕಗಳು ಮಕ್ಕಳಿಗೆ ಮುಂದಿನ ತರಗತಿಗೆ ತೆರಳಲು ಸಹಪಾಠಿಯಂತೆ ವರ್ತಿಸಿದರೆ, ದಿನಾ ಪತ್ರಿಕೆಗಳೂ ಮಕ್ಕಳ ಜ್ಞಾನಾರ್ಜನೆ ಸಂಗಾತಿಯಾಗಿ ಕಾರ್ಯ ನಿರ್ವಹಿಸಲಿದೆ
ಎಂದರು. ಇಂದಿನ ಮಕ್ಕಳ ಇಂಟರ್ನೆಟ್ ಪ್ರೀತಿ ಅವರ ಭವಿಷ್ಯಕ್ಕೆ ಅಪಾಯಕಾರಿಯಾಗುವ ಸಂಭವವಿದೆ ಎಂದರು. ಪತ್ರಿಕೆ ಓದು ಮನುಷ್ಯನ ವ್ಯಕ್ತಿತ್ವ ಬದಲಾಯಿಸುವ ಶಕ್ತಿ ಇದೆ ಹಾಗೂ ಅಲೋಚನಾ ದಿಕ್ಕನ್ನು ಸಹ ಬದಲಾಯಿಸಲಿದೆ ಎಂದರು.
ವಿಮರ್ಶಕ ಮಾ.ವೆಂ.ತಮ್ಮಯ್ಯ ಮಾತನಾಡಿ ಪೋಷಕರು ಪಠ್ಯ ಪುಸ್ತಕಗಳ ಜತೆಯಲ್ಲಿ ಮಕ್ಕಳಿಗೆ ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಬೇಕು. ಆದರೆ ಪತ್ರಿಕೆ ಓದಲು ಬಿಡದೆ ಮಕ್ಕಳನ್ನು ಪಠ್ಯ ಪುಸ್ತಕಗಳ ಕಡೆ ಗಮನ ನೀಡುವಂತೆ ಗದರಿಸಿ ದಿನಪತ್ರಿಕೆ ಓದುವದರಿಂದ ವಿಮುಕ್ತನಾಗಿ ಮಾಡುವ ಪ್ರವೃತ್ತಿ ಪೋಷಕರಲ್ಲಿ ಸಾಮಾನ್ಯವಾಗುತ್ತಿರುವುದು ಖೇದಕರ ಎಂದ ಮಾ.ವೆಂ.ತಮ್ಮಯ್ಯ ರವರು ಮಕ್ಕಳೇ ಪೋಷಕರಿಗೆ ಪ್ರಂಪಚದ ಆಗು-ಹೋಗುಗಳನ್ನು ತಾಜವಾಗಿ ನೀಡುವ ದಿನಪತ್ರಿಕೆಗಳ ಅವಶ್ಯಕತೆ ಬಗೆ ತಿಳಿಸಿ ಮನೆಗೂಂದು ಪತ್ರಿಕೆ ತೆಗೆದುಕೊಳ್ಳುವಂತೆ ಮನವೂಳಿಸಬೇಕು ಎಂದರು.  ವಿಶಿಷ್ಠ ಕಾರ್ಯಕ್ರಮ ಸಂಘಟಿಸಿದ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕುಂ.ಚಂದ್ರಪ್ಪ ಪ್ರಸ್ತಾವಿಕ ಮಾತನಾಡಿ, ಪಟ್ಟಣದಲ್ಲಿ 8-10 ಸಾವಿರ ಮನೆಗಳಿದ್ದರೂ ಒಟ್ಟು ದಿನ ಪತ್ರಿಕೆಗಳ ಸಂಖ್ಯೆ 3 ಸಾವಿರ ದಾಟ್ಟಿಲ್ಲ.
ಈ ನಿಟ್ಟಿನಲ್ಲಿ ಜ್ಞಾನಾರ್ಜನೆಗೆ ಪತ್ರಿಕೆ ಅವಶ್ಯಕತೆಯನ್ನು ತಿಳಿಸಿ ಹೇಳುವ ಸಲುವಾಗಿ ಪಟ್ಟಣದ ಎಲ್ಲ ಶಾಲಾ-ಕಾಲೇಜುಗಳಲ್ಲಿ ಸರಳ ಸಮಾರಂಭ ಹಮ್ಮಿಕೊಂಡು ಪತ್ರಿಕೆಗಳ ಕೊಂಡು ಓದುವರ ಸಂಖ್ಯೆ ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು. ಕಸಾಪ ಜಿಲ್ಲಾ ಕಾರ್ಯದರ್ಶಿ ಎ.ಅಶ್ವಥ್ ರೆಡ್ಡಿ, ಅಧ್ಯಕ್ಷತೆ ವಹಿಸಿದ್ದ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಬಿ.ಎಂ.ಹನುಮಂತಯ್ಯ ಮಾತನಾಡಿದರು.
“OÚ«Ú­sÚ®Úúڒ ವಿತರಕನಿಗೆ ನೆರವು: ಇದೇ ಸಂಧರ್ಭದಲ್ಲಿ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ “OÚ«Ú­sÚ®Úúڒ ಪತ್ರಿಕೆ ವಿತರಕ ರಾಜೇಶ್ಶೆಟ್ಟಿ ರವರಿಗೆ ತಾಲೂಕು ಪತ್ರಿಕಾ ವಿತರಕರು ಸಂಗ್ರಹಿಸಿದ್ದ ರು.5 ಸಾವಿರ  ಚೆಕ್ನ್ನು ರಾಜೇಶ್ ಸಹೋದರ ಮಣಿ ಅವರಿಗೆ ಗಣ್ಯರು ವಿತರಿಸಿದರು.
ಶಿಕ್ಷಣ ಇಲಾಖೆ ವಿಜಯ್ಕುಮಾರ್, ಕಸಾಪ ಅಧ್ಯಕ್ಷ ಗೋ.ಮಧುಸೂಧನ್,ಪ್ಲಾಸ್ಟಿಕ್ ನಿರ್ಮೂಲನ ಸಮಿತಿ ಅಧ್ಯಕ್ಷ ಮುನಿಸ್ವಾಮಿ, ಪತ್ರಿಕಾ ವಿತರಕರಾದ ವೆಂಕಟರಮಣರೆಡ್ಡಿ, ಕೇಶವಮೂರ್ತಿ, ರಾಮಕೃಷ್ಣಪ್ಪ, ದೇವರಾಜು, ಶ್ರೀನಾಥ್, ಮಣಿ, ಶ್ರೀನಿವಾಸ್, ಶಿವು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.