ಒತ್ತುವರಿ ತಡೆಯುವಲ್ಲಿ ಅಧಿಕಾರಿಗಳು ವಿಫಲ'
ಕ.ಪ್ರ.ವಾರ್ತೆ ಮಾಲೂರು ಜು. 20
ಅಕ್ರಮ ಮರಳು ಸಾಗಣೆ ಹಾಗೂ ಕೆರೆ ಒತ್ತುವರಿ ತಡೆಯುವಲ್ಲಿ ಅಧಿಕಾರಿಗಳು ಪ್ರಾಮಾಣಿಕತೆ ತೋರಿದಾಗ ಮಾತ್ರ ನೈಸರ್ಗಿಕ ಸಂಪತ್ತು ಉಳಿಸಲು ಸಾಧ್ಯ ಎಂದು ರಾಜ್ಯ ಬಳಕೆದಾರರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಭುವನಹಳ್ಳಿ ಎ.ವೆಂಕಟಾಚಲಪತಿ ಅಭಿಪ್ರಾಯಪಟ್ಟರು.
ಪಟ್ಟಣದ ಕೃಷಿಕ ಸಮಾಜದಲ್ಲಿ ಆಯೋಜಿಸಿದ್ದ ಕೆರೆ ಬಳಕೆದಾರರ ಸಂಘಗಳ ಒಕ್ಕೂಟದ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಗಡಿಭಾಗ ಸೇರಿದಂತೆ ಬಹುತೇಕ ಕೆರೆಗಳಲ್ಲಿ ಅಕ್ರಮವಾಗಿ ಮರುಳು ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ತಾಲೂಕಿನಲ್ಲಿ ಬೋರ್ ನೀರು ಸಿಗಬೇಕಾದರೆ 1000-1500 ಅಡಿಗಳಿಗೆ ಇಳಿಯಬೇಕಾಗಿದೆ ಎಂದರು.
ಒತ್ತುವರಿ ಸಮಸ್ಯೆಯಿಂದ ಕೆರೆಯಲ್ಲಿ ನೀರು ನಿಲ್ಲುವ ಸಂಭವವೇ ಇಲ್ಲದಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ, ಪ್ರಯೋಜನವಾಗಿಲ್ಲ. ಕೆರೆಗಳನ್ನು ಉಳಿಸಲು ನೀರಾವರಿ ಇಲಾಖೆ ಅಧಿಕಾರಿಗಳು ಅಕ್ರಮ ದಂಧೆ ತಡೆಯಲು ಮುಂದಾಗಬೇಕು ಎಂದು ಅಗ್ರಹಿಸಿದರು.
ಕೆರೆಗಳ ಒತ್ತುವರಿ ಹಾಗೂ ಮರುಳು ಅಕ್ರಮ ಸಾಗಣೆ ತಡೆಗಟ್ಟಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ತಾಲೂಕು ಕೆರೆ ಬಳಕೆದಾರರ ಸಂಘಗಳ ಒಕ್ಕೂಟದ ಅಧ್ಯಕ್ಷ ಡಿ.ವಿ.ಪಾಲಾಕ್ಷ ಬಾಬು, ಉಪಾಧ್ಯಕ್ಷ ಕುಪ್ಪೂರು ಶ್ರೀನಿವಾಸ್, ಖಜಾಂಚಿ ಕಸ್ತೂರಿ ಬಾಬು, ಜಿಲ್ಲಾ ಕಾರ್ಯದರ್ಶಿ ಗಂಗರಾಮ್ ಸಿಂಗ್, ಮುಖಂಡರಾದ ಗೋಪಿನಾಥ್, ವಿ.ನಾರಾಯಣಸ್ವಾಮಿ, ರೋಜರಾಜಪ್ಪ, ಕೆ.ವಿ. ಕೃಷ್ಣಪ್ಪ, ಅಪ್ರೋಜಪ್ಪ, ದೊಡ್ಡಕುಂತೂರು ಮುನಿಕೃಷ್ಣ, ಮುನಿರಾಜು, ತಂಬಹಳ್ಳಿ ರಾಮಪ್ಪ, ಗೋಪಾಲಕೃಷ್ಣ, ಸಂಪಂಗಿ ರಾಮೇಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

