ನಿತ್ಯ ನರಕ ಪಳವಳ್ಳಿ ಪ್ರೌಢಶಾಲೆ ಹಾಸ್ಟೆಲ್
ಪಾವಗಡ: ತಾಲೂಕಿನ ಪಳವಳ್ಳಿ ಪ್ರೌಢಶಾಲೆ ವಿದ್ಯಾರ್ಥಿ ನಿಲಯ ಸೇರಿದಂತೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಸುತ್ತಿರುವ ಬಹುತೇಕ ಹಾಸ್ಟೆಲ್ಗಳಲ್ಲಿ ಕಳಪೆ ಆಹಾರ ಹಾಗೂ ಶುಚಿತ್ವ ಕಾಪಾಡುವಲ್ಲಿ ನಿಲಯ ಪಾಲಕರು ವಿಫಲರಾದ ಕಾರಣ ಬಡ ವಿದ್ಯಾರ್ಥಿಗಳು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವುದು ಬೆಳಕಿಗೆ ಬಂದಿದೆ.
ಇಲಾಖೆಯ ಪಳವಳ್ಳಿಯ ಎಸ್ಸಿ, ಎಸ್ಟಿ ಪ್ರೌಢಶಾಲೆ ವಿದ್ಯಾರ್ಥಿ ನಿಲಯ, ಎಸ್.ಆರ್.ಪಾಳ್ಯ ವಿದ್ಯಾರ್ಥಿ ನಿಲಯ ಹಾಗೂ ಪಟ್ಟಣದ ಪಿಯುಸಿ ಹಾಸ್ಟೆಲ್ಗಳಲ್ಲಿ ನಿಯಮಾನುಸಾರ ಆಹಾರ ವಿತರಣೆ ಸೇರಿದಂತೆ ಕೊಳೆತ ತರಕಾರಿ ಹಾಕಿದ ಕಳಪೆ ಆಹಾರ ನೀಡುವುದರಿಂದ ವಿದ್ಯಾರ್ಥಿಗಳಲ್ಲಿ ಪೌಷ್ಟಿಕತೆ ಕೊರತೆ ಕಾಡುತ್ತಿದ್ದು ಬಹುತೇಕ ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ತುತ್ತಾಗಿ ನಾನಾ ರೀತಿಯ ಹಿಂಸೆ ಅನುಭವಿಸುತ್ತಿದ್ದಾರೆ. ರಾಜ್ಕುಮಾರ್ ಎಂಬ ನಿಲಯ ಪಾಲಕರೊಬ್ಬರ ನಿರ್ಲಕ್ಷ್ಯದಿಂದ ಪಳ್ಳವಳ್ಳಿಯ ಎಸ್ಸಿ ಎಸ್ಟಿ ಪ್ರೌಢಶಾಲೆ ವಿದ್ಯಾರ್ಥಿ ನಿಲಯದಲ್ಲಿ ಕೊಳೆತ ತರಕಾರಿ, ಕಳಪೆ ಮಟ್ಟದ ಅಕ್ಕಿಯಿಂದ ಮಾಡಿದ ಊಟ ತಿಂಡಿಯನ್ನು ನಿತ್ಯ ವಿದ್ಯಾರ್ಥಿಗಳಿಗೆ ಬಡಿಸುತ್ತಿರುವುದಲ್ಲದೇ ಶೌಚಾಲಯಗಳ ಗಲೀಜು ಸೇರಿದಂತೆ ಅನೇಕ ದಿನಗಳಿಂದ ಶುಚಿತ್ವ ಕಾಣದೇ ಹಾಸ್ಟೆಲ್ ಪೂರ್ಣ ಅವ್ಯವಸ್ಥೆಯಿಂದ ಕೂಡಿದೆ.
ವಿದ್ಯಾರ್ಥಿ ನಿಲಯದ ಸುತ್ತ ಸೊಳ್ಳೆಗಳ ಹಾವಳಿ ಹೆಚ್ಚಿರುವ ಕಾರಣ ರಾತ್ರಿ ವೇಳೆ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ನರಕಯಾತನೆ ಅನುಭವಿಸುತ್ತಿರುವುದಾಗಿ ಇಲ್ಲಿನ ಸಂಘಟನೆಗಳು ಆರೋಪಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

