ಕೋಲಾರ

ಕೆಎಸ್ಸಾರ್ಟಿಸಿ ಬಸ್ ಡಿಕ್ಕಿ: ಒಬ್ಬರಿಗೆ ಗಂಭೀರ ಗಾಯ

Published On :

ಶ್ರೀನಿವಾಸಪುರ: ಕೆಎಸ್‌ಆರ್‌ಟಿಸಿ ಬಸ್ ಎದುರಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ತೀವ್ರ ಗಾಯಗೊಂಡಿದ್ದಾರೆ. ಶ್ರೀನಿವಾಸಪುರ-ಮದನಪಲ್ಲಿ ಮಾರ್ಗದ ಮಧ್ಯೆ ಇರುವ ನೀಲಟೂರು ಕ್ರಾಸ್ ಬಳಿ ಡಿಕ್ಕಿ ಸಂಭವಿಸಿದೆ. ಗೌನಿಪಲ್ಲಿ ಶಿವಾಚಾರಿ ಹಾಗೂ ಇತನ ಮಗ ವೇಣುಗೋಪಾಲಚಾರಿ ಎಂಬುವವರು ಶ್ರೀನಿವಾಸಪುರದ ತಾಲೂಕು ಕಚೇರಿಯಲ್ಲಿನ ಆಹಾರ ಇಲಾಖೆಯವರಲ್ಲಿ ಕುಟುಂಬ ಪಡಿತರ ದೋಷವನ್ನು ಸರಿಪಡಿಸಲು ಗೌನಿಪಲ್ಲಿಯಿಂದ ಶ್ರೀನಿವಾಸಪುರಕ್ಕೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಡಿಕ್ಕಿ ಹೊಡೆದಿದ್ದರಿಂದ ದ್ವಿಚಕ್ರ ವಾಹನದಲ್ಲಿನ ಗಾಯಾಳುಗಳು ಕೋಲಾರದ ದೇವರಾಜ ಅರಸು ವೈದ್ಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದೆ.

ಮಚ್ಚಿನಿಂದ ಹಲ್ಲೆ
ಶಿಡ್ಲಘಟ್ಟ:
ಮೊಬೈಲ್‌ನಲ್ಲಿ ಹುಡುಗಿಯನ್ನು ಕೆಟ್ಟ ಭಾಷೆಯಲ್ಲಿ ಮಾತನಾಡುತ್ತಿದ್ದನ್ನು ವಿಚಾರಿಸಲು ಹೋದ ಸಂಬಂಧಿಯನ್ನು ಮಚ್ಚಿನಿಂದ ಹಲ್ಲೆ ಮಾಡಿ ಗಾಯಗೊಳಿಸಿದ ಪ್ರಕರಣ ಚೀಮಂಗಲದಲ್ಲಿ ನಡೆದಿದೆ. ಚೀಮಂಗಲದ ಬಸವರಾಜ್ ಅತ್ತಿಗಾನಹಳ್ಳಿಯ ಆಶಾ ಎಂಬಾಕೆಯನ್ನು ಮೊಬೈಲ್‌ನಲ್ಲಿ ಕೆಟ್ಟ ಮಾತುಗಳಿಂದ ಮಾತನಾಡುತ್ತಿದ್ದನು ಎನ್ನಲಾಗಿದೆ.  ಅತ್ತಿಗಾನಹಳ್ಳಿಯ ಮಂಜುನಾಥ್ ಆಶಳ ಸಂಬಂಧಿಯಾಗಿದ್ದು ಗಾಯಗೊಂಡ ದುರ್ದೈವಿಯಾಗಿದ್ದಾನೆ. ಮಂಜುನಾಥ್‌ನನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆಂದು ಕಳುಹಿಸಲಾಗಿದೆ. ಪ್ರಕರಣ ಗ್ರಾಮಾಂತರ ಠಾಣೆಯಲ್ಲಿ ದಾಖ ಲಾಗಿದ್ದು ಆರೋಪಿ ಬಸವರಾಜನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಲಾರಿ-ಬೈಕ್ ಡಿಕ್ಕಿ: ವ್ಯಕ್ತಿ ಸಾವು
ಮಾಲೂರು:
  ಪಟ್ಟಣದ ಹೊರವಲಯದ ದೊಡ್ಡಕೆರೆ ಬಳಿ ಬುಧವಾರ ಸಂಜೆ ಘಟಿಸಿದ ಲಾರಿ- ದ್ವಿಚಕ್ರ ವಾಹನದ ಮುಖಮುಖಿ ಡಿಕ್ಕಿಯಲ್ಲಿ ದ್ವಿಚಕ್ರ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತನನ್ನು ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿಯ ಶಂಶುದ್ಧೀನ್ (22) ಎನ್ನಲಾಗಿದೆ. ಹಿಂಬದಿ ಕುಳಿತ್ತಿದ್ದ ಇಫಾರ್ನ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯ ಸರ್ಕಾರಿ ಆಸ್ವತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇಲ್ಲಿನ ಬೆಂಗಳೂರು ರಸ್ತೆಯಲ್ಲಿರುವ ದ್ವಿಚಕ್ರ ಗ್ಯಾರೇಜ್‌ನಲ್ಲಿ ಮೆಕ್ಯಾನಿಕ್ ಆಗಿದ್ದ ಶಂಶುದ್ಧೀನ್ ರಂಜಾನ್ ಹಬ್ಬದ ಸಲುವಾಗಿ ರೋಜ ಕಾರ್ಯದ ನಿಮಿತ್ತ ಗ್ರಾಮಕ್ಕೆ ದ್ವಿಚಕ್ರದಲ್ಲಿ ಸ್ನೇಹಿತ ಇರ್ಫಾನ್ ಜತೆ ಹೋಗುತ್ತಿದ್ದರು.

ಹಳ್ಳಕ್ಕೆ ಬಿದ್ದ ಶಾಲಾ ವಾಹನ: ಹಲವರಿಗೆ ಗಾಯ
ಚಿಂತಾಮಣಿ:
ಖಾಸಗಿ ಶಾಲಾ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಹಳ್ಳಕ್ಕೆ ಬಿದ್ದ ಪರಿಣಾಮ ಹಲವಾರು ಶಾಲಾ ಮಕ್ಕಳು ತೀವ್ರ ಗಾಯಗೊಂಡ ಘಟನೆ ದೊಡ್ಡಹಳ್ಳಿ ಹತ್ತಿರ ಬುಧವಾರ ಬೆಳಿಗ್ಗೆ ನಡೆದಿದೆ. ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿ ದೊಡ್ಡಹಳ್ಳಿ ಹತ್ತಿರ ತಾಲೂಕಿನ ಕೃಷ್ಣರಾಜಪುರ ಗ್ರಾಮಕ್ಕೆ ಸೇರಿದ ಖಾಸಗಿ ಶಾಲಾ ವಾಹನ ಅಪ್ಪಸಾನಪಲ್ಲಿ, ಪಾಪದಿಮ್ಮನಪಲ್ಲಿ, ಕುರುಮಾರ್ಲಹಳ್ಳಿ, ಕೋಟಗಲ್ ಮಾರ್ಗವಾಗಿ ಶಾಲಾ ಮಕ್ಕಳನ್ನು ಕರೆದುಕೊಂಡು ದಿನನಿತ್ಯ ಬರುತ್ತಿರುವ ಶಾಲಾ ವಾಹನ ಬುಧವಾರ ಬೆಳಿಗ್ಗೆ ದೊಡ್ಡಹಳ್ಳಿ ಬಳಿ ಸ್ಟೇರಿಂಗ್ ಕಟ್ ಆಗಿ ನಿಯಂತ್ರಣ ತಪ್ಪಿತು. ಪರಿಣಾಮ ಪ್ರೇಮಾ, ಸುಪ್ರೀತಾ, ಶ್ವೇತಾ, ಹೇಮಂತ್, ಸುಚಿತ್ರಾ, ಸುರೇಂದ್ರಬಾಬು ಮತ್ತಿತರ ಮಕ್ಕಳು ತೀವ್ರ ಗಾಯಗೊಂಡು ಕೆಂಚಾರ್ಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಟ್ಟಣದ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.