ಕೋಲಾರ

ಪಡಿತರ ಅಕ್ರಮ: ಅಧಿಕಾರಿಗಳ ನಿರ್ಲಕ್ಷ್ಯ

Published On :

ಕ.ಪ್ರ.ವಾರ್ತೆ ಶ್ರೀನಿವಾಸಪುರ ಜು. 26
ಕಡು ಬಡವರಿಗಾಗಿ ವಿತರಣೆ ಮಾಡುತ್ತಿರುವ ಆಹಾರ ಪದಾರ್ಥಗಳನ್ನು ತಾಲೂಕಿನಾದ್ಯಂತ ಇರುವ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ಕಾರ ನಿಗದಿಪಡಿಸಿದ ಬೆಲೆಗಿಂತ ಹೆಚ್ಚಿನ ಬೆಲೆಗೆ ಆಹಾರ ಪದಾರ್ಥ ಮಾರಾಟ ಮಾಡುತ್ತಿದ್ದಾರೆ. ಆದರೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಬಡ ಪಡಿತರ ಚೀಟಿದಾರರು ಆರೋಪಿಸಿದ್ದಾರೆ.
ತಾಲೂಕಿನಾದ್ಯಂತ ಸುಮಾರು ನ್ಯಾಯಬೆಲೆ ಅಂಗಡಿಗಳಿದ್ದು, ಒಂದೇ ಒಂದು ಅಂಗಡಿಯಲ್ಲಿಯು ಸಹ ನಿಗದಿತ ಬೆಲೆಗೆ ಪಡಿತರ ವಿತರಿಸುತ್ತಿಲ್ಲ. ಅಧಿಕ ಬೆಲೆಗೆ ಆಹಾರ ಪದಾರ್ಥಗಳನ್ನು ಮಾರಾಟ ಮಾಡಿ ಬಡವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದಾರೆ. ಅಂಥ ನ್ಯಾಯಬೆಲೆ ಅಂಗಡಿಗಳ ಮಾಲೀಕರ ವಿರುದ್ಧ ಸಂಬಂಧಪಟ್ಟ ತಹಸೀಲ್ದಾರರಾಗಲಿ ಆಹಾರ ಇಲಾಖೆ ಪುಡ್ ಇನ್ಸ್ಪೆಕ್ಟರ್ ಆಗಲಿ ಕೊಂಚ ಕೂಡ ಕಾಳಜಿ ವಹಿಸುತ್ತಿಲ್ಲ.  ಬಡಪಾಯಿಗಳಿಗಾಗಿ ನೀಡುತ್ತಿರುವ ಅಕ್ಕಿ ತೂಕ ವಂಚನೆ ಬೆಲೆ ಜಾಸ್ತಿ ಮಾರಾಟ ಮಾಡುತ್ತಿರುವ ನ್ಯಾಯಬೆಲೆ ಅಂಗಡಿಗಳ ಮಾಲೀಕರ ವಿರುದ್ಧ ಇನ್ನು ಕೂಡ ಶಿಸ್ತಿನ ಕ್ರಮ ಕೈಗೊಳ್ಳದೆ ಇದ್ದರೆ ಪುಡ್ ಇನ್ಸ್ಪೆಕ್ಟರ್ ವಿರುದ್ಧ ಹಾಗೂ ತಹಸೀಲ್ದಾರರ ವಿರುದ್ಧ ಬಡಪಡಿತರ ಚೀಟಿದಾರರೆಲ್ಲಾ ಸೇರಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಈ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಅಸಮರ್ಪಕ ಪಡಿತರ ವಿತರಣೆ: ಫಲಾನುಭವಿಗಳ ಪ್ರತಿಭಟನೆ
ಶ್ರೀನಿವಾಸಪುರ:  ತಾಲೂಕಿನ ರಾಯಲ್ಪಾಡು ಹೋಬಳಿಯ ನಕ್ಕಲಗಡ ಗ್ರಾಮದಲ್ಲಿ 'ಅನ್ನ ಭಾಗ್ಯ' ಯೋಜನೆ ಅಕ್ಕಿಯನ್ನು ಸಮರ್ಪಕ ರೀತಿಯಲ್ಲಿ ವಿತರಣೆ ಮಾಡದ ನ್ಯಾಯಬೆಲೆ ಅಂಗಡಿ ಮಾಲೀಕರನ ವಿರುದ್ಧ ನ್ಯಾಯಬೆಲೆ ಅಂಗಡಿ ಮುಂದೆ ಫಲಾನುಭವಿಗಳು ಧರಣಿ ನಡೆಸಿದರು.
ಗ್ರಾಮದ ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಸುಮಾರು ವರ್ಷಗಳಿಂದ ಬಡಬಗ್ಗರಿಗೆ ನೀಡಲಾಗುತ್ತಿರುವ ಆಹಾರ ಪದಾರ್ಥಗಳನ್ನು ಸಮರ್ಪಕ ರೀತಿಯಲ್ಲಿ ವಿತರಣೆ ಮಾಡದೆ ನ್ಯಾಯಬೆಲೆ ಅಂಗಡಿ ಮಾಲೀಕ ಬಡ ಪಡಿತರ ಚೀಟಿದಾರರ ಮೇಲೆ ದೌರ್ಜನ್ಯ ದಬ್ಬಾಳಿಕೆ ನಡೆಸುತ್ತಿದ್ದಾರೆ. ಇತ್ತೀಚಿಗೆ ಸರ್ಕಾರ ಜಾರಿಗೆ ತಂದಿರುವ 'ಅನ್ನ ಭಾಗ್ಯ' ಯೋಜನೆಯ ಅಕ್ಕಿ ಒಂದು ಬಿಪಿಎಲ್ ಕಾರ್ಡಿಗೆ 30 ಕೆಜಿ ಅಕ್ಕಿಯನ್ನು 1 ರು.ಗೆ ಮಾರಾಟ ಮಾಡುವುದನ್ನು ಇಷ್ಟ ಬಂದ ದರ ವಿಧಿಸಿ ಮಾರಾಟ ಮಾಡುತ್ತಿದ್ದಾರೆ. 30 ಕೆಜಿ ಅಕ್ಕಿಯ ಬದಲಾಗಿ 25 ಕೆಜಿ ಅಕ್ಕಿ ಕೊಡುತಿದ್ದಾರೆ ಎಂದು ಆರೋಪಿಸಿದರು.
ಅಕ್ರಮದಿಂದ ಬೇಸತ್ತ ಫಲಾನುಭವಿಗಳು ನ್ಯಾಯಬೆಲೆ ಅಂಗಡಿ ಮಾಲೀಕನ ವಿರುದ್ಧ ಶುಕ್ರವಾರ ಧರಣಿ ನಡೆಸಿದರು. ನ್ಯಾಯಬೆಲೆ ಅಂಗಡಿ ಮುಂದೆ ಧರಣಿ ನಡೆಸುತ್ತಿದ್ದಾಗ ಸ್ಥಳಕ್ಕೆ ವಿಷಯ ತಿಳಿದ ಆಹಾರ ಶಾಖೆಯ ಪುಡ್ ಇನ್ಸ್ಪೆಕ್ಟರ್ ನಂಜುಂಡರೆಡ್ಡಿ ಹಾಗೂ ತಹಸೀಲ್ದಾರರಾದ ಎಚ್.ಜಯ ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ನ್ಯಾಯಬೆಲೆ ಅಂಗಡಿ ಮಾಲೀಕನ ವಿರುದ್ಧ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಧರಣಿಯನ್ನು ಹಿಂತೆಗೆದುಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.