ತೋಟಗಾರಿಕೆ ಬೆಳೆಗಳ ಹೆಚ್ಚು ಬೆಳೆಯಿರಿ
ಕ.ಪ್ರ.ವಾರ್ತೆ ಕೋಲಾರ ಜು.28
ತಾಲೂಕಿನ ರೈತರು ವಾಣಿಜ್ಯ ಬೆಳೆಗಳ ಜೊತೆಗೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುವಂತೆ ಶಾಸಕ ವರ್ತೂರು ಪ್ರಕಾಶ್ ಸಲಹೆ ಮಾಡಿದರು.
ನಗರದ ಲಯನ್ಸ್ಕ್ಲಬ್ನಲ್ಲಿ ಭಾನುವಾರ ತಾಲೂಕು ಫ್ಲವರ್ ಡೆಕೋರೇಷನ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟಿಸಿ ಮಾತನಾಡಿದ ಶಾಸಕರು, ರೈತರು ಟೊಮೆಟೋ, ಹೈನೋದ್ಯಮ, ರೇಷ್ಮೆ ಬೆಳೆಗಳಿಗೆ ಸೀಮಿತವಾಗದೆ ಪರ್ಯಾಯ ಬೆಳೆಗಳನ್ನು ಬೆಳೆಯುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕೆಂದು ಕರೆ ನೀಡಿದರು.
ಕೋಲಾರ ತಾಲೂಕಿನಲ್ಲಿ ವಿವಿಧ ಹೂವುಗಳನ್ನು ಬೆಳೆಯುವುದಕ್ಕೆ ಪೂರಕವಾದ ವಾತಾವರಣವಿರುವುದರಿಂದ ರೈತರು ದೇಶ-ವಿದೇಶದಲ್ಲಿ ಬೇಡಿಕೆಯಿರುವ ಹೂಗಳ ಬೆಳೆ ಬೆಳೆದು ಲಾಭ ಗಳಿಸುವಂತೆ ತಿಳಿಸಿದರು.
ಸಂಘಟನೆಗಳನ್ನು ಸ್ಥಾಪಿಸುವ ಸಂದರ್ಭದಲ್ಲಿ ಜಾತಿ ಮತ್ತು ಬೇದಬಾವಗಳನ್ನು ಮನಸ್ಸುಗಳಿಂದ ತೊಡೆದು ಹಾಕಬೇಕೆಂದ ಶಾಸಕ ವರ್ತೂರು ಪ್ರಕಾಶ್, ಬೆಂಗಳೂರು ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲಿ ಸಾಕಷ್ಟು ರೈತರು ಹೂಗಳನ್ನು ಬೆಳೆದು ಫ್ಲವರ್ ಡೆಕೋರೇಷನ್ ಮಾಡುತ್ತಾ, ಕೋಟ್ಯಾಧಿಪತಿಗಳಾಗಿದ್ದಾರೆ. ಇಲ್ಲಿನ ರೈತರು ಸಹ ಅದೇ ರೀತಿ ಅಭಿವೃದ್ಧಿ ಸಾಧಿಸಬೇಕೆಂದರು.
ಕಳೆದ 5 ವರ್ಷಗಳಲ್ಲಿ ಈ ತಾಲೂಕಿನ ಶಾಸಕರಾಗಿ, ಸಚಿವರಾಗಿ ಇದ್ದರೂ ಅರ್ಹ ಫಲಾನುಭವಿಗಳಿಗೆ ನಿವೇಶನಗಳನ್ನು ನೀಡಲು ಸಾಧ್ಯವಾಗಿಲ್ಲ ಎಂದ ಅವರು, ಮುಂದಿನ ದಿನಗಳಲ್ಲಿ ಬೀಡಿ ಕಾರ್ಮಿಕರಿಗೆ, ಆಟೋ, ಕೂಲಿ ಮತ್ತು ಫ್ಲವರ್ ಡೆಕೋರೇಷನ್ ವೃತ್ತಿಯಲ್ಲಿ ತೊಡಗಿರುವ ಅರ್ಹರಿಗೆ ನಿವೇಶನಗಳನ್ನು ನೀಡುವುದಾಗಿ ಭರವಸೆ ನೀಡಿದರು.
ಜಿ.ಪಂ.ಸದಸ್ಯ ಅಮರನಾಥ್ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿ ಹೆಚ್ಚಾಗುವುದರಿಂದ ಎಲ್ಲರ ಹಿತದೃಷ್ಟಿಯಿಂದ ಸಂಘಗಳನ್ನು ಸ್ಥಾಪಿಸಿ ನೀತಿ ನಿಯಮಗಳನ್ನು ಪಾಲಿಸಿದಾಗ ಪ್ರತಿಯೊಬ್ಬರಿಗೂ ಅನುಕೂಲವಾಗುತ್ತದೆ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಗಣೇಶ್ ಮಾತನಾಡಿ, ತಾಲೂಕಿನಲ್ಲಿ ಸುಮಾರು 35 ಫ್ಲವರ್ ಡೆಕೋರೇಷನ್ ಮಾಲೀಕರು ಇದ್ದು, ಇವರ ಕೆಳಗೆ 200 ಕ್ಕೂ ಹೆಚ್ಚು ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ತಮ್ಮ ಕೆಲವು ಬೇಡಿಕೆಗಳ ಈಡೇರಿಕೆಗೆ ಸಂಘಟನೆ ಅಗತ್ಯವಾಗಿದೆ ಎಂದು ತಿಳಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ರಘುರಾಂ, ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ಕೃಷ್ಣೇಗೌಡ, ನಗರಸಭೆ ಮಾಜಿ ಸದಸ್ಯ ಮಂಜುನಾಥ್, ಛಾಯಗ್ರಾಹಕರ ಸಂಘದ ಅಧ್ಯಕ್ಷ ಕೃಷ್ಣ, ಫ್ಲವರ್ ಡೆಕೋರೇಷನ್ ಮಾಲೀಕರ ಸಂಘದ ಕೃಷ್ಣ ಇದ್ದರು. ಜನಘಟ್ಟ ಕೃಷ್ಣಮೂರ್ತಿ ನಿರೂಪಿಸಿ, ಸ್ವಾಗತಿಸಿ, ಫ್ಲವರ್ ಡೆಕೋರೇಷನ್ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ರವಿ ಪ್ರಾಸ್ತಾವಿಕ ಭಾಷಣ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

