ಕೋಲಾರ

'ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ'

Published On :

ಕ.ಪ್ರ.ವಾರ್ತೆ ,  ಗೌರಿಬಿದನೂರು ,  ಜು.30
ಸಮಯಪ್ರಜ್ಞೆ, ಸೇವಾ ಮನೋಭಾವನೆ, ಏಕಾಗ್ರತೆಯಿಂದ ಕಾರ್ಯನಿರ್ವಹಿಸಿದಾಗ ಮತದಾರರು ಮತ ಚಲಾಯಿಸಿ ಆಯ್ಕೆ ಮಾಡುತ್ತಾರೆ. ಪದವಿ ಬಂದ ನಂತರ ಮತದಾರರ ಸಮಸ್ಯೆ ಆಲಿಸಿ ಪರಿಹರಿಸಿದರೆ, ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಬಂದಂತಾಗುತ್ತದೆ ಎಂದು ವಿಧಾನಸಭೆ ಉಪ ಸಭಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ಅಭಿಪ್ರಾಯಪಟ್ಟರು.
ಪಟ್ಟಣದ ಆರ್ಯವೈಶ್ಯ ಸಂಘದಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಬೆಳ್ಳಿಗದೆ ಮತ್ತು ಕುದುರೆ ಸ್ವೀಕರಿಸಿ ಮಾತನಾಡಿದ ಅವರು, ನನ್ನನ್ನು 4ನೇ ಬಾರಿ ಆಯ್ಕೆ ಮಾಡಿರುವ ತಾಲೂಕಿನ ಜನತೆಯ ಋಣ ತೀರಿಸಲು ಶ್ರಮಿಸುತ್ತೇವೆ.
ಕುಡಿಯುವ ನೀರಿನ ಸಮಸ್ಯೆ, ರೈತರಿಗೆ ಕೃಷಿ, ಹೈನುಗಾರಿಕೆ, ಬಡ ಜನತಗೆ ಪಡಿತರ ಚೀಟಿ, ರಸ್ತೆ, ಬೈ ಪಾಸ್ ರಸ್ತೆ ವ್ಯವಸ್ಥೆ, ಕಾರ್ಮಿಕರಿಗೆ ಕುಡಮಲಕಂಟೆಯ ಕಾರ್ಖಾನೆಗಳಲ್ಲಿ ಉದ್ಯೋಗ, ಅಂಗವಿಕಲರು, ವಿಧವೆಯರು, ವೃದ್ಧರಿಗೆ ಮಾಶಾಸನ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.
ಪಟ್ಟಣದ ಹಾಗೂ ತಾಲೂಕಿನಾದ್ಯಂತ ಇರುವ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯ ಮತ್ತು ಡಯಾಲಿಸಿಸ್ ಕೇಂದ್ರ, ಬ್ಲಡ್ ಬ್ಯಾಂಕ್ ಕೇಂದ್ರ ತೆರೆಯಲು ಸರ್ಕಾರದ ಜೊತೆ ಮಾತನಾಡಲಾಗುವುದು ಎಂದು ಭರವಸೆ ನೀಡಿದರು.
ಬಯಲು ಪ್ರದೇಶವಾದ ಈ ಜಿಲ್ಲೆಗೆ ಸರ್ಕಾರ ಎತ್ತಿನಹೊಳೆ ಯೋಜನೆಯಿಂದ ಕೆಲವೇ ದಿನಗಳಲ್ಲಿ ನೀರು ಹಾಯಿಸಿ ಕೆರೆ, ಕುಂಟೆಗಳಲ್ಲಿ ನೀರು ತುಂಬಿ ಅಂತರ್ಜಲ ಹೆಚ್ಚಿಸಿ ಕುಡಿಯುವ ನೀರಿನ ಬವಣೆ ನಿವಾರಣೆಯಾಗುತ್ತದೆ. ಪರಮಶಿವಯ್ಯ ವರದಿಯನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಅದನ್ನೂ ಅನುಷ್ಠಾನಗೊಳಿಸಲಿದೆ ಎಂದರು.
ಈ ಸಂದರ್ಭ ತಮ್ಮ ರಾಜಕೀಯ ಪ್ರವೇಶದ ಕಿರು ಪರಿಚಯ ಸಭಿಕರಲ್ಲಿ ಹಂಚಿಕೂಂಟರು. ಆರ್ಯವೈಶ್ಯ ಸಂಘ, ವ್ಯಾಪರಸ್ಥರ ಸಂಘ, ಮಹಿಳಾ ಸಂಘ, ಭಜನಾ ಮಂಡಳಿ ಇನ್ನು ಹಲವು ಸಂಘಗಳಿಂದ ಸನ್ಮಾನ, ಬೆಳ್ಳಿಗದೆ, ಕುದರೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಅಶ್ವತ್ಥನಾರಾಯಣ ಶೆಟ್ಟಿ, ರಾಘವೇಂದ್ರ ಗುಪ್ತ, ಬಿ.ಆರ್. ಶ್ರೀನಿವಾಸಮೂರ್ತಿ, ಚಿದಾನಂದ ಗುಪ್ತ, ಎ.ಎನ್. ರಾಮಯ್ಯ ಶೆಟ್ಟಿ, ಜಿಲ್ಲಾ ಪಂಚಯ್ತಿ ಉಪಾಧ್ಯಕ್ಷ ರಾಘವೇಂದ್ರ ಹನುಮಾನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಕೆ. ಸತೀಶ್, ಸಿಎಂಎಸ್, ಎ.ಎನ್. ರಾಜಣ್ಣ ಹಲವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.