ಕೋಲಾರ

ದೈಹಿಕ-ಮಾನಸಿಕ ಆರೋಗ್ಯದಿಂದ ಬದುಕು ಸುಂದರ

Published On :

ಚಿಕ್ಕಬಳ್ಳಾಪುರ: ಸಮರ್ಪಕ ರೀತಿಯಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಂಡು ಉತ್ತಮ ಜೀವನ ನಡೆಸಬೇಕೆಂದು ಸ್ಪಯಾ ಫೌಂಡೇಷನ್ ವ್ಯವಸ್ಥಾಪಕ ನಿರ್ದೇಶಕರಾದಹರಿಕೃಷ್ಣನ್ ಸಲಹೆ ನೀಡಿದ್ದಾರೆ.
ತಾಲೂಕಿನ ಮಂಚನಬಲೆಯ ಬಿಜಿಎಸ್ ವಿದ್ಯಾರ್ಥಿ ನಿಕೇತನ ಶಾಲೆಯಲ್ಲಿ ಸ್ಪಯಾ ಫೌಂಡೇಷನ್ ಹಾಗೂ ದಿಬ್ಬೂರು ಸರ್ಕಾರಿ ಆಸ್ಪತ್ರೆ ವತಿಯಿಂದ ಆಯೋಜಿಸಿದ್ದ 'ಹೆಣ್ಣು ಮಕ್ಕಳಿಗೆ ಹದಿಹರೆಯದ ವಯಸ್ಸು ಹಾಗೂ ಋತುಚಕ್ರದ ಸುಚಿತ್ವ' ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು  ಮಾತನಾಡಿದರು.
ಆರೋಗ್ಯದೆಡೆಗೆ ಗಮನ ನೀಡಿ: ಆರ್ಥಿಕ ಸಮಸ್ಯೆ, ಅನವಶ್ಯಕ ಒತ್ತಡ ಸೇರಿದಂತೆ ನಾನಾ ಕಾರಣಗಳ ಹಿನ್ನೆಲೆಯಲ್ಲಿ ಬಹುತೇಕರು ತಮ್ಮ ಆರೋಗ್ಯದ ಕಡೆಗೆ ಸರಿಯಾಗಿ ಗಮನ ನೀಡುವುದಿಲ್ಲ. ಸಣ್ಣ ಕಾಯಿಲೆ ಉಲ್ಭಣಗೊಂಡು ಪ್ರಾಣಕ್ಕೆ ಕುತ್ತು ಬಂದಾಗ ತೊಂದರೆ ಅನುಭವಿಸುತ್ತಾರೆ. ಇಂತಹ ಭಾವನೆ ದೂರವಾಗಬೇಕು. ಕಾಲ ಕಾಲಕ್ಕೆ ಆರೋಗ್ಯದ ಕಡೆಗೆ ಕಾಳಜಿ ನೀಡಬೇಕೆಂದು ತಿಳಿಸಿದರು.
ಹೆಣ್ಣು ಮಕ್ಕಳು ಜಾಗೃತರಾಗಬೇಕು: ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು. ಆದರೆ, ಬಹಳಷ್ಟು ಹೆಣ್ಣು ಮಕ್ಕಳು ತಮ್ಮ ಸಮಸ್ಯೆ ಹೇಳಿಕೊಳ್ಳಲು ಮುಂದಾಗುವುದಿಲ್ಲ. ಇದು ಸಮಸ್ಯೆ ಗಂಭೀರ ಸ್ವರೂಪ ತಾಳಲು ಕಾರಣವಾಗುತ್ತದೆ ಎಂದು ಈ ಸಂದರ್ಭದಲ್ಲಿ ಕಿವಿಮಾತು ಹೇಳಿದರು.
ಮಕ್ಕಳೊಂದಿಗೆ ಉತ್ತಮ ಸಂಬಂಧ ಇರಲಿ: ಪೋಷಕರು ಮಕ್ಕಳೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಂಡು ಅವರ ಸಮಸ್ಯೆಗಳನ್ನು ತಿಳಿದುಕೊಳ್ಳಬೇಕು. ಮುಕ್ತವಾಗಿ ಚರ್ಚಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವಂತಹ ಮನೋಭಾವನೆ ಬೆಳೆಯಬೇಕೆಂದು ತಿಳಿಸಿದರು.
ದುಶ್ಚಟ ಆರೋಗ್ಯಕ್ಕೆ ಹಾನಿಕರ: ವೃತ್ತ ನಿರೀಕ್ಷಕ ಮಹೇಶ್ ಕುಮಾರ್ ಮಾತನಾಡಿ, ದುಶ್ಚಟ ಆರೋಗ್ಯ ಕೆಡಿಸಿದರೆ, ಒಳ್ಳೆಯ ಹವಾಸ್ಯ ಆರೋಗ್ಯ ಕಾಪಾಡುತ್ತದೆ. ಈ ನಿಟ್ಟಿನಲ್ಲಿ ಯುವ ಪೀಳಿಗೆ ಜವಾಬ್ದಾರಿ ಅರಿತು ನಡೆದುಕೊಳ್ಳಬೇಕು. ಕೇವಲ ಕ್ಷಣಿಕ ಸುಖಕ್ಕಾಗಿ ಕೆಟ್ಟ ಚಟಗಳಿಗೆ ಬಲಿಯಾಗಬಾರದು ಎಂದು ಕಿವಿಮಾತು ಹೇಳಿದರು.
ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದರ ಬಗ್ಗೆ ಧನಾತ್ಮಾಕ ಮನೋಭಾವನೆ ಹೊಂದಿರಬೇಕು. ತಾವು ಪ್ರಗತಿ ಸಾಧಿಸುವುದರ ಜತೆಗೆ, ಸಮಾಜ ಪ್ರಗತಿ ಕಾಣುವಂತೆ ಮಾಡಬೇಕು.ಇದಕ್ಕೆ ಆರೋಗ್ಯಕರ ಯುವ ಪೀಳಿಗೆ ಕೊಡುಗೆ ಮಹತ್ತರವಾಗಿದೆ ಎಂದು ತಿಳಿಸಿದರು.
ಗ್ರಾಪಂ ಸದಸ್ಯ ಶ್ರೀಧರ್ ಮಾತನಾಡಿ, ಹೆಣ್ಣು ಸಮಾಜದ ಕಣ್ಣು. ಮಹಿಳೆಯರ ಅಭಿವೃದ್ಧಿಯಿಂದ ಸಮಾಜ ಸರ್ವಾಂಗೀಣ ಪ್ರಗತಿ ಸಾಧಿಸುತ್ತದೆ. ಇದರಿಂದ ಮಹಿಳೆಯರು ಶೋಷಣೆಗೆ ಗುರಿಯಾಗದಂತೆ ನೋಡಿಕೊಳ್ಳುವ ಗುರುತರ  ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ತಿಳಿಸಿದರು.
ಸ್ಪಯಾ ಫೌಂಡೇಷನ್ ವಯಿಂದ ಹೆಣ್ಣು ಮಕ್ಕಳಿಗೆ ನ್ಯಾಪ್‌ಕಿನ್ ವಿತರಿಸಲಾಯಿತು. ಸ್ಪಯಾ ಫೌಂಡೇಷನ್ ವ್ಯವಸ್ಥಾಪಕ ನಿರ್ದೇಶಕಿ ಸುನಿತಾ, ಡಾ.ರುಕ್ಮಿಣಿ, ಗ್ರಾಪಂ  ಸದಸ್ಯ ಜಯರಾಂ, ಶಿಕ್ಷಣ ಇಲಾಖೆಯ ಫಾರುಕ್, ಮುಖ್ಯ ಶಿಕ್ಷಕ ಜಿ.ವಿ ಗಂಗಾಧರ್, ಎನ್.ಮಂಜುನಾಥ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.