ಕೋಲಾರ

ನ್ಯಾಯಬೆಲೆ ಅಂಗಡಿಗಳ ವಿರುದ್ಧ ಜಯಕರ್ನಾಟಕದಿಂದ ದೂರು

Published On :

ಕ.ಪ್ರ.ವಾರ್ತೆ , ಕೋಲಾರ , ಜು.31
ನಗರದ ಬಹುತೇಕ ಸರ್ಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ಗ್ರಾಹಕರಿಗೆ ಸರಿಯಾಗಿ ಪಡಿತರ ಹಾಗೂ ಸೀಮೆಎಣ್ಣೆ ವಿತರಣೆ ಮಾಡುತ್ತಿಲ್ಲವೆಂದು ಆರೋಪಿಸಿ ಜಿಲ್ಲೆಯ ಜಯ ಕರ್ನಾಟಕ ಸಂಘಟನೆ ಜಿಲ್ಲಾಡಳಿತಕ್ಕೆ ದೂರು ನೀಡಿದೆ.
ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಆರ್. ತ್ಯಾಗರಾಜುರವರ ನೇತೃತ್ವದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರು ಮತ್ತು ಜಿಲ್ಲಾಧಿಕಾರಿಗಳಿಗೆಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಪ್ರತಿ ನ್ಯಾಯಬೆಲೆಯ ಅಂಗಡಿಯ ಎದುರಿನಲ್ಲಿ ಅಂಗಡಿಯ ಸಂಖ್ಯೆ, ಮಾಲೀಕರ ಹೆಸರು, ಅಂಗಡಿಯ ಹೆಸರು, ಪಡಿತರ ಧಾನ್ಯಗಳನ್ನು ವಿತರಿಸಬೇಕಾದ ಪ್ರಮಾಣ ಹಾಗೂ ಬೆಲೆಯ ವಿವಿರ, ದಸ್ತಾನು ವಿವರ, ಮಾಲೀಕರ ಮೊಬೈಲ್ ಸಂಖ್ಯೆ ನಾಮಫಲಕದಲ್ಲಿ ನಮೂದಿಸಬೇಕಾಗಿರುತ್ತದೆ. ಇದನ್ನು ಮಾಡದೆ ಗ್ರಾಹಕರನ್ನು ಕತ್ತಲಲ್ಲಿಟ್ಟು ವಂಚಿಸಲಾಗುತ್ತಿದೆ ಎಂದು ಸಂಘಟನೆಯ ಮುಖಂಡರು ಆರೋಪಿಸಿದ್ದಾರೆ.
ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಕೀಲುಕೋಟೆ ಆಂಜಿನಪ್ಪ, ಬಿ.ವಿ.ಶಿವಕುಮಾರ್, ಕೆ.ಎಂ.ಗೋವಿಂದ ರಾಜು, ಜಿ. ಸುರೇಶ್‌ಬಾಬು, ಬಿ. ರಾಮ್‌ಸಿಂಗ್, ಮಂಜುನಾಥ್‌ಸಿಂಗ್, ಕಮಲ್‌ಸಿಂಗ್, ಗಾಂಧಿನಗರ ಸೋಮಶೇಖರ್, ರಾಜಣ್ಣ, ಕೀಲು ಕೋಟೆ ರಮೇಶ್, ಲಕ್ಷ್ಮಯ್ಯ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.